ಹಲ್ಲಿನ ಜೊತೆ ನಾಲಿಗೆಯನ್ನೂ ಸ್ವಚ್ಛವಾಗಿ ಇಟ್ಟುಕೊಳ್ಳಿ

ಹಲ್ಲಿನ ಜೊತೆ ನಾಲಿಗೆಯನ್ನೂ ಸ್ವಚ್ಛವಾಗಿ ಇಟ್ಟುಕೊಳ್ಳಿ

ಮಲೇಬೆನ್ನೂರು : ದಂತ ತಪಾಸಣಾ ಶಿಬಿರದಲ್ಲಿ ಮಕ್ಕಳಿಗೆ ಡಾ. ಪೂಜಾ ಕರೆ

ಮಲೇಬೆನ್ನೂರು, ಆ. 11- ಇಲ್ಲಿನ ಲಯನ್ಸ್ ಕ್ಲಬ್ ಹಾಗೂ ದಾವಣಗೆರೆ ಬಾಪೂಜಿ ದಂತ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಇವರ ಸಹಯೋಗದಲ್ಲಿ ಪಟ್ಟಣದ ಪಿಡಬ್ಲ್ಯೂಡಿ ಕಾಲೋನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಉಚಿತ ದಂತ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.

ಲಯನ್ಸ್ ಮಾಜಿ ಗೌರ್ನರ್ ಡಾ. ಟಿ. ಬಸವರಾಜ್ ಅವರು ಗಿಡಕ್ಕೆ ನೀರು ಹಾಕುವ ಮೂಲಕ ಶಿಬಿರವನ್ನು ಉದ್ಘಾಟಿಸಿದರು.

ಬಾಪೂಜಿ ದಂತ ಆಸ್ಪತ್ರೆಯ ಡಾ. ಪೂಜಾ ಮಾತನಾಡಿ, ಹಲ್ಲಿನ ಆರೋಗ್ಯವನ್ನು ಹೇಗೆ ಮತ್ತು ಏಕೆ ಕಾಪಾಡಿಕೊಳ್ಳಬೇಕು ಎಂಬುದರ ಕುರಿತು ವಿವರವಾಗಿ ತಿಳಿಸಿಕೊಟ್ಟರು. ಹಲ್ಲಿನ ಜೊತೆಗೆ ನಾಲಿಗೆಯನ್ನೂ ಸ್ವಚ್ಛವಾಗಿಟ್ಟುಕೊಳ್ಳಬೇಕು. 

ಸಿಹಿ ಪದಾರ್ಥಗಳನ್ನು ತಿಂದ ಮೇಲೆ ಬಾಯಲ್ಲಿ ನೀರು ಹಾಕಿ ಮುಕ್ಕಳಿಸಿ ಮತ್ತು ಬೆಳಿಗ್ಗೆಯ ಜೊತೆಗೆ ರಾತ್ರಿ ಊಟದ ನಂತರವೂ ಎಲ್ಲರೂ ಕಡ್ಡಾಯವಾಗಿ ಬ್ರಷ್ ಮಾಡಿ ಎಂದರು.

ತಂಪು ಪಾನೀಯಗಳಿಂದ ದೂರವಿದ್ದು, ನಿಂಬೆಹಣ್ಣಿನ ಹಾಗೂ ಹಣ್ಣಿನ ಜ್ಯೂಸ್ ಕುಡಿಯಿರಿ. ತರಕಾರಿ, ಸೊಪ್ಪು ಹೆಚ್ಚು ಬಳಸಿ ಎಂದು ಪೂಜಾ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಲಯನ್ಸ್ ಕ್ಲಬ್ ಅಧ್ಯಕ್ಷ ಚಿಟ್ಟಕ್ಕಿ ನಾಗರಾಜ್ ಮಾತನಾಡಿ, ಲಯನ್ಸ್‌ನ ಎಲ್ಐಸಿಐಎಫ್ ಅನುದಾನದಲ್ಲಿ 5 ಜನ ನಿರ್ಗತಿಕರಿಗೆ 2500 ರೂ. ಮೌಲ್ಯದ ಫುಡ್‌ ಕಿಟ್‌ಗಳನ್ನು ಈ ದಿನ ನೀಡಿದ್ದೇವೆ ಎಂದು ತಿಳಿಸಿದರು.

ಲಯನ್ಸ್ ಕ್ಲಬ್ ಕಾರ್ಯದರ್ಶಿ ಸಿರಿಗೆರೆ ಸಿದ್ದಪ್ಪ, ಖಜಾಂಚಿ ಭರ್ಮಳ್ಳಿ ಮಂಜುನಾಥ್, ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷರಾದ ಓ.ಜಿ. ರುದ್ರಗೌಡ್ರು, ಎನ್.ಜಿ. ಶಿವಾಜಿ ಪಾಟೀಲ್, ಡಾ. ಹೆಚ್.ಜೆ. ಚಂದ್ರಕಾಂತ್, ಸದಸ್ಯರಾದ ಹುಡೇದರ ಸಿದ್ದೇಶ್, ಹುಳ್ಳಳ್ಳಿ ಸಿದ್ದೇಶ್, ಎಸ್‌ಡಿಎಂಸಿ ಅಧ್ಯಕ್ಷ ಬೆಣ್ಣೆಹಳ್ಳಿ ಬಸವರಾಜ್, ಉಪಾಧ್ಯಕ್ಷೆ ರೋಜಾ, ಸದಸ್ಯೆ ನಗೀನಾ, ಶಾಲಾ ಪ್ರಭಾರ ಮುಖ್ಯ ಶಿಕ್ಷಕ ಎ.ಕೆ. ಕುಮಾರ್, ಶಿಕ್ಷಕರಾದ ನೇತ್ರಾವತಿ, ಸುನೀತಾ, ನಿರಂಜನ್, ಶಿವಕುಮಾರ್, ಪ್ರೇಮ, ಸಿದ್ದಮ್ಮ, ನಯನ, ಸಾವಿತ್ರ, ಮಮತಾ ಮತ್ತಿತರರು ಈ ವೇಳೆ ಹಾಜರಿದ್ದರು.

error: Content is protected !!