ಸರ್ವರಿಗೂ ಉಳಿತಾಯ ಖಾತೆ ಅಗತ್ಯವಿದೆ

ಸರ್ವರಿಗೂ ಉಳಿತಾಯ ಖಾತೆ ಅಗತ್ಯವಿದೆ

 `ಜೀರೋ ಬ್ಯಾಲೆನ್ಸ್’ ಖಾತೆ ತೆರೆಯುವ ಕಾರ್ಯಕ್ರಮದಲ್ಲಿ ಮ್ಯಾನೇಜರ್ ಸುಧೀರ್

ರಾಣೇಬೆನ್ನೂರು, ಆ.11- ಬಡವರು, ರೈತಾಪಿ ವರ್ಗದವರು, ಕೂಲಿಕಾರ್ಮಿಕರು ಸೇರಿದಂತೆ, ಎಲ್ಲ ವರ್ಗದವರಿಗೂ ಅನುಕೂಲವಾಗಲೆಂಬ ಸದುದ್ಧೇಶ ದಿಂದ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಜನ್‍ಧನ್ ಖಾತೆ ತೆರೆಯುವ ವಿನೂತನ ಯೋಜನೆಯನ್ನು ಜಾರಿಗೊಳಿಸಿದ್ದಾರೆ ಎಂದು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್, ಹೊನ್ನತ್ತಿ ಶಾಖೆಯ ಮ್ಯಾನೇಜರ್ ಸುಧೀರ್ ಹೇಳಿದರು. 

ತಾಲ್ಲೂಕಿನ ಚೌಡಯ್ಯದಾನಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆ ಯಲ್ಲಿ ನಡೆದ ಮಕ್ಕಳಿಗೆ `ಜೀರೋ ಬ್ಯಾಲೆನ್ಸ್’ ಮತ್ತು ಜಂಟಿ ಖಾತೆ ತೆರೆಯುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. 

ಪ್ರಸ್ತುತ ದಿನಮಾನಗಳಲ್ಲಿ ಸರ್ವರಿಗೂ ಉಳಿತಾಯ ಖಾತೆ ಅತ್ಯವಶ್ಯಕವಾಗಿದೆ.    ವಿದ್ಯಾರ್ಥಿ ವೇತನ ಪಡೆಯಲು ಮತ್ತು ಸರ್ಕಾರದ ವಿವಿಧ ಸೌಲಭ್ಯಗಳನ್ನು ಪಡೆಯಲು ಉಳಿತಾಯ ಖಾತೆ ಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರ ಹಲವಾರು ಯೋಜನೆಗಳನ್ನು ಶಾಲಾ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಉಪಯುಕ್ತವಾಗುವಂತಹ ಯೋಜನೆ ಗಳನ್ನು ಬ್ಯಾಂಕ್‍ಗಳಲ್ಲಿ ರೂಪಿಸಲಾಗಿದೆ. ಅವುಗಳ ಸದುಪಯೋಗ ಪಡೆದುಕೊಳ್ಳಬೇಕೆಂದರು.

ಗ್ರಾಪಂ ಸದಸ್ಯ ಚಂದ್ರಪ್ಪ ದಳವಾಯಿ, ಎಸ್‍ಡಿಎಂಸಿ ಅಧ್ಯಕ್ಷ ಜಿ.ವಿ.ದೀಪಾವಳಿ, ಸದಸ್ಯರಾದ ಗಂಗಾಧರಯ್ಯ ಪೂಜಾರ, ಶಂಭುಲಿಂಗಪ್ಪ ಚಕ್ರಸಾಲಿ, ಜಯಪ್ಪ ಹೊನಕುದರಿ, ಮುಖ್ಯೋಪಾಧ್ಯಾಯ  ವಿಜಯ ಪೂಜಾರ, ಐ. ಎಚ್. ಮೈದೂರ, ರವಿ ಪಾಟೀಲ, ಸೈಯದ್ ಜುಲ್ಫೀಕರ್, ದಿವ್ಯಾ ಎ. ಜಿ, ಪ್ರವೀಣ ಬನ್ನಿಮಟ್ಟಿ, ಹೊನ್ನಪ್ಪ ನುಗ್ಗಿಮರದ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

error: Content is protected !!