ಜೆಜೆಎಂ ಕಾಲೇಜಿನಲ್ಲಿ `ಫಿಲ್ಲರ್ಸ್ ಇನ್ ಡರ್ಮಟಾಲಜಿ’ ಕಾರ್ಯಾಗಾರ

ಜೆಜೆಎಂ ಕಾಲೇಜಿನಲ್ಲಿ `ಫಿಲ್ಲರ್ಸ್ ಇನ್ ಡರ್ಮಟಾಲಜಿ’ ಕಾರ್ಯಾಗಾರ

ದಾವಣಗೆರೆ, ಆ. 11- ನಗರದ ಜೆ.ಜೆ.ಎಂ. ಮೆಡಿಕಲ್ ಕಾಲೇಜಿನಲ್ಲಿ ಈಚೆಗೆ `ಫಿಲ್ಲರ್ಸ್ ಇನ್ ಡರ್ಮಟಾಲಜಿ’ ಕಾರ್ಯಾಗಾರ ನಡೆಯಿತು. 

ಜೆಜೆಎಂಸಿ ಪ್ರಾಂಶುಪಾಲ ಡಾ. ಎಸ್.ಬಿ. ಮುರುಗೇಶ್, ಚರ್ಮರೋಗ ವಿಭಾಗದ ಮುಖ್ಯಸ್ಥ ಡಾ. ಸೂಗಾರೆಡ್ಡಿ, ಎಸ್ಎಸ್ಐಎಂಎಸ್‌ನ ಚರ್ಮರೋಗ ವಿಭಾಗದ ಮುಖ್ಯಸ್ಥರಾದ ಡಾ. ಮಂಜುನಾಥ್ ಹುಲ್ಮನಿ, ಡಾ. ಎ.ಬಿ. ರಶ್ಮಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಚರ್ಮರೋಗ ಮತ್ತು ಕಾಸ್ಮೆಟಾಲಜಿ ತಜ್ಞರಾದ ಡಾ|| ರಶ್ಮಿ ಮಂಜುನಾಥ್,  ಡಾ|| ಎಂ. ಮಧು ಮಾತನಾಡಿ, ವೈದ್ಯ ಸಮೂಹಕ್ಕೆ ಫಿಲ್ಲರ್ಸ್ ಹಾಗೂ ಸ್ಕಿನ್ ಬೂಸ್ಟರ್‌ಗಳ ಚಿಕಿತ್ಸೆಯಿಂದಾಗುವ ಉಪಯೋಗಗಳ ಬಗ್ಗೆ ತಿಳಿಸಿಕೊಟ್ಟರು. ಒಣ ತ್ವಚೆ, ಮುಖದ ಸುಕ್ಕು, ಮೊಡವೆಯ ಕಲೆಗಳು, ಕುಗ್ಗುತ್ತಿರುವ ಚರ್ಮ, ತ್ವಚೆಯ ಕಾಲೀನತೆ, ಕಳಾಹೀನತೆ ಇವುಗಳಿಗೆ `ಸ್ಕಿನ್ ಬೂಸ್ಟರ್’ ಚಿಕಿತ್ಸೆ ಅತ್ಯುತ್ತಮವಾದದ್ದು ಎಂಬ ಮಾಹಿತಿ ನೀಡಿದರು.

error: Content is protected !!