ದಾವಣಗೆರೆ, ಆ. 11- ಶ್ರೀ ವಜ್ರೇಶ್ವರಿ ಮಹಿಳಾ ಸಂಸ್ಥೆ, ಶ್ರೀ ಆದಿನಾಥ ಜೈನ್ ಮಿಲನ (ದಾವಣಗೆರೆ) ಹಾಗೂ ಬಾಪೂಜಿ ದಂತ ವೈದ್ಯಕೀಯ ಮಹಾವಿದ್ಯಾಲಯದ ವತಿಯಿಂದ ಉಚಿತ ದಂತ ತಪಾಸಣೆ ಶಿಬಿರದಲ್ಲಿ ನುರಿತ ವೈದ್ಯರಿಂದ ತಪಾಸಣೆ ನಡೆಸಲಾಯಿತು.
ಡಾ. ಉಷಾ, ವಜ್ರೇಶ್ವರಿ ಮಹಿಳಾ ಸಂಸ್ಥೆಯ ಅಧ್ಯಕ್ಷರಾದ ವಿಜಯ ಸಿ. ಅಕ್ಕಿ, ಜೈನ್ ಮಿಲನದ ಅಧ್ಯಕ್ಷರಾದ ಪ್ರೀತಮ್ ದುಂಡಿಸಿ, ಕಾರ್ಯದರ್ಶಿ ವಿನೋದ್ ನೇಮಿರಾಜ್ ಹಾಗೂ ವಜ್ರೇಶ್ವರಿ ಸಂಸ್ಥೆಯ ನಿರ್ದೇಶಕರುಗಳು, ಸಾವಿತ್ರ ಗವಿಸಿದ್ದೇಶ್ವರ, ಸುಧಾ ಶಶಿಪ್ರಕಾಶ್, ಮಂಜುಳಾ, ಪುಷ್ಪಲತಾ ಉಪಸ್ಥಿತರಿದ್ದರು. ಪದ್ಮ ಸುರೇಶ್ ಕಾರ್ಯಕ್ರಮ ನಿರೂಪಿಸಿದರು. ಪ್ರಸನ್ನ ಚಂದ್ರಪ್ರಭು ಸ್ವಾಗತಿಸಿದರು.