ಹೊನ್ನಾಳಿ, ಆ.10- ತಾಲ್ಲೂಕಿನ ಸಾಸ್ವೆಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಜಬ್ಬಾರ್ ಅಲಿಖಾನ್ ಅವಿರೋಧ ಆಯ್ಕೆಯಾದರು. ಉಪಾಧ್ಯಕ್ಷರಾಗಿ 4 ಮತಗಳ ಅಂತರದಲ್ಲಿ ಶಾಂತಮ್ಮ ಕೃಷ್ಣಮೂರ್ತಿ ಚುನಾವಣೆಯ ಮೂಲಕ ಆಯ್ಕೆಯಾದರು.
20 ಸದಸ್ಯರ ಬಲ ಹೊಂದಿರುವ ಸಾಸ್ವೆಹಳ್ಳಿ ಪಂಚಾಯಿತಿಯ ಅಧ್ಯಕ್ಷರ ಸ್ಥಾನಕ್ಕೆ ಒಂದೇ ನಾಮಪತ್ರ ಸಲ್ಲಿಕೆಯಾಗಿ ಅವಿರೋಧವಾಗಿ ಆಯ್ಕೆಯಾದರೆ, ಉಪಾಧ್ಯಕ್ಷ ಸ್ಥಾನಕ್ಕೆ 2 ನಾಮಪತ್ರ ಸಲ್ಲಿಸಿದ್ದು, ಶಾಂತಮ್ಮ ಕೃಷ್ಣಮೂರ್ತಿ 12 ಮತಗಳನ್ನು ಪಡೆದು ಆಯ್ಕೆಗೊಂಡರು. ಪ್ರತಿಸ್ಪರ್ದಿ ಸೌಮ್ಯ ರಾಘವೇಂದ್ರ 8 ಮತಗಳನ್ನು ಮಾತ್ರ ಪಡೆದು 4 ಮತಗಳ ಅಂತರದಲ್ಲಿ ಹಿನ್ನಡೆಯ ಮೂಲಕ ಸೋಲನ್ನು ಕಂಡರು.
ಈ ಸಂದರ್ಭದಲ್ಲಿ ಸದಸ್ಯರಾದ ಸವಿತ, ಶಾಂತಮ್ಮ, ರೇಣುಕಾ, ಕೆ.ಸವಿತ, ಕರಿಬಸಪ್ಪ, ಇಂದ್ರಮ್ಮ, ಸುಧಾ, ಅಮ್ಮದ್ ಆಲಿಖಾನ್, ಸುಲೇಮಾನ್ ಖಾನ್, ದಿಲ್ ಷಾದ್ ಬೀ, ಶಾನ್ ವಾಜ್ ಖಾನ್, ಜಯದಾಬಿ, ಅಶ್ವಿನಿ, ಅತಾವಲ್ಲಾ, ಮಂಜಪ್ಪ ಎಸ್, ಸುಧಾಮ,ಇಂದ್ರಮ್ಮ ಸಾಸ್ವೆಹಳ್ಳಿ ಪಿಡಿಒ ಹನುಮಂತನಾಯ್ಕ್ ಇನ್ನಿತರಿದ್ದರು.