ಮಲೇಬೆನ್ನೂರು, ಆ. 10- ಹಾಲಿವಾಣ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯಲ್ಲಿ ತಾ.ಪಂ. ಮಾಜಿ ಅಧ್ಯಕ್ಷ ಎಸ್.ಜಿ. ಪರಮೇಶ್ವರಪ್ಪ ಅವರ ಗುಂಪಿಗೆ ಭರ್ಜರಿ ಗೆಲುವು ಲಭಿಸಿದೆ.
ಬುಧವಾರ ನಡೆದ ಚುನಾವಣೆಯಲ್ಲಿ ಒಟ್ಟು 13 ಸ್ಥಾನಗಳ ಪೈಕಿ 11 ಸ್ಥಾನಗಳಲ್ಲಿ ಎಸ್.ಜಿ. ಪರಮೇಶ್ವರಪ್ಪ ಅವರ ಗುಂಪಿನವರು ಆಯ್ಕೆಯಾಗಿದ್ದಾರೆ. ಇನ್ನೊಂದು ಗುಂಪಿನಿಂದ ಟಿ. ತಿಪ್ಪೇಶಪ್ಪ ಮತ್ತು ಟಿ. ನಾಗಪ್ಪ ಮಾತ್ರ ಗೆಲುವು ಸಾಧಿಸಿದ್ದಾರೆ.
ಪರಮೇಶ್ವರಪ್ಪ ಅವರ ಗುಂಪಿನಿಂದ ಸಂಘದ ನೂತನ ನಿರ್ದೇಶಕರಾಗಿ ರಾಘವೇಂದ್ರ ಜಿ.ಹೆಚ್., ಬಸವರಾಜಪ್ಪ ಕೆ.ಎಸ್., ಗದ್ದಿಗೇಶಪ್ಪ, ಟಿ. ಯೋಗೇಂದ್ರ, ಹನುಮಂತಪ್ಪ ಕಂಬಾರ, ಭರ್ಮಪ್ಪ, ಶ್ರೀಮತಿ ಚೌಡಮ್ಮ, ಬಿ.ಕೆ. ಕರಿಬಸಪ್ಪ, ಮಂಜುನಾಥಯ್ಯ, ಶ್ರೀಮತಿ ಸೌಭಾಗ್ಯಮ್ಮ, ಶ್ರೀಮತಿ ಮಂಜಮ್ಮ ಆಯ್ಕೆಯಾಗಿದ್ದಾರೆ.
ತಾ. ಸಹಕಾರ ಅಭಿವೃದ್ಧಿ ಅಧಿಕಾರಿ ಸುನೀತಾ ಅವರು ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.