ಮಲೇಬೆನ್ನೂರು, ಆ. 10- ಕೊಮಾರನ ಹಳ್ಳಿಯ ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿ ಸಮುದಾಯ ಭವನದಲ್ಲಿ ನಾಳೆ ದಿನಾಂಕ 11 ರಿಂದ 18ರವರೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡಿರುವ 1705ನೇ ಮದ್ಯವರ್ಜನೆ ಶಿಬಿರದ 2ನೇ ಪೂರ್ವಭಾವಿ ಸಭೆ ನಿನ್ನೆ ಜರುಗಿತು.
ಕೊಮಾರನಹಳ್ಳಿಯ ಶ್ರೀ ಲಕ್ಷ್ಮಿರಂಗನಾಥ ಸ್ವಾಮಿ ಸಮುದಾಯಯ ಭವನದಲ್ಲಿ ನಡೆದ ಸಭೆಯಲ್ಲಿ ಶಿಬಿರದ ಸಿದ್ಧತೆ ಹಾಗೂ ಶಿಬಿರಾರ್ಥಿಗಳನ್ನು ಕರೆ ತರುವ ಬಗ್ಗೆ ಮತ್ತು 8 ದಿನಗಳ ಕಾಲ ನಡೆಯುವ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಲಾಯಿತು. ಶಿಬಿರಕ್ಕೆ ದಾನಿಗಳು ನೀಡಿದ ನೆರವಿನ ಬಗ್ಗೆಯೂ ಸಭೆಗೆ ವಲಯ ಮೇಲ್ವಿಚಾರಕರಾದ ರಕ್ಷಿತಾ ಮಾಹಿತಿ ನೀಡಿದರು. ಜನಜಾಗೃತಿ ವೇದಿಕೆಯ ಯೋಜನಾಧಿಕಾರಿ ನಾಗರಾಜ್ ಶಿಬಿರದ ಉದ್ದೇಶ ತಿಳಿಸಿದರು.
ಮಲೇಬೆನ್ನೂರು ಯೋಜನಾಧಿಕಾರಿ ವಸಂತ್ ದೇವಾಡಿಗ, ಶಿಬಿರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಿ. ಮಂಜುನಾಥ್ ಪಟೇಲ್, ಗೌರವಾಧ್ಯಕ್ಷರಾದ ಡಿ.ಡಿ. ಚಿಕ್ಕಪ್ಪ, ಹುಗ್ಗಿ ರಂಗನಾಥ್, ಉಪಾಧ್ಯಕ್ಷ ಜಿಗಳಿ ಆನಂದಪ್ಪ, ಜೊತೆ ಕಾರ್ಯದರ್ಶಿ ಕೊಕ್ಕನೂರಿನ ಹನುಮಂತರಾಯ, ಕೋಶಾಧಿಕಾರಿ ಗಳಾದ ಹೋಟೆಲ್ ಪರಮೇಶ್ವರಪ್ಪ, ಎಸ್.ಡಿ. ರಂಗನಾಥ್, ಮಾಡಿವಾಳರ ಬಸವರಾಜ್, ಹಾಲಿವಾಣದ ಮೋಹನ್, ಶಿವಕ್ಳ ಆಂಜನೇಯ, ಸಂಪನ್ಮೂಲ ವ್ಯಕ್ತಿ ಹೆಚ್.ಎಂ. ಸದಾನಂದ, ಜನ ಜಾಗೃತಿ ವೇದಿಕೆ ಸದಸ್ಯ ಜಿಗಳಿ ಪ್ರಕಾಶ್, ಧರ್ಮಸ್ಥಳ ಯೋಜನೆಯ ಕೃಷಿ ಅಧಿಕಾರಿ ಗಂಗಾಧರ್, ಮೇಲ್ವಿಚಾರಕ ಮಾರುತಿ, ತಾ. ಜ್ಞಾನ ವಿಕಾಸ ಸಮನ್ವಯಾಧಿಕಾರಿ ವಸಿತಾ ಮತ್ತು ಮಲ್ಲನಾಯ್ಕನಹಳ್ಳಿ ವಲಯದ ಸೇವಾ ಪ್ರತಿನಿಧಿಗಳು ಹಾಗೂ ಇತರರು ಭಾಗವಹಿಸಿದ್ದರು.
ಈ ವೇಳೆ ಶಿಬಿರದ ಆಹ್ವಾನ ಪತ್ರಿಕೆಗಳನ್ನು ಬಿಡುಗಡೆ ಮಾಡಲಾಯಿತು.
ಇಂದಿನ ಕಾರ್ಯಕ್ರಮ : ಬೆಳಿಗ್ಗೆ 11 ಗಂಟೆಗೆ ಶಾಸಕ ಬಿ.ಪಿ. ಹರೀಶ್ ಅವರು ಶಿಬಿರವನ್ನು ಉದ್ಘಾಟಿಸಲಿದ್ದು, ಜನಜಾಗೃತಿ ವೇದಿಕೆ ಸದಸ್ಯ ಸಿರಿಗೆರೆ ನಾಗನಗೌಡ್ರು ಅಧ್ಯಕ್ಷತೆ ವಹಿಸುವರು.
ಮಾಜಿ ಶಾಸಕ ಎಸ್. ರಾಮಪ್ಪ, ಯೋಜನೆ ಜಿಲ್ಲಾ ನಿರ್ದೇಶಕ ವಿಜಯಕುಮಾರ್ ನಾಗನಾಳ್, ಗ್ರಾ.ಪಂ. ಅಧ್ಯಕ್ಷ ಡಿ.ಡಿ. ಚಿಕ್ಕಪ್ಪ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಿರಿಗೆರೆ ಹಾಲೇಶಪ್ಪ, ಸಿರಿಗೆರೆ ರಾಜಣ್ಣ, ಬಿ. ಚಿದಾನಂದಪ್ಪ, ಜಿಗಳಿ ಆನಂದಪ್ಪ, ಎಸ್.ಜಿ. ಪರಮೇಶ್ವರಪ್ಪ, ಎಂ.ಬಿ. ರೋಷನ್, ಐರಣಿ ಅಣ್ಣಪ್ಪ, ಯಕ್ಕನಹಳ್ಳಿ ಬಸವರಾಜಪ್ಪ, ಪೃಥ್ವಿ ಸಾನಿಕಂ, ರೇಷ್ಮಾ ಹಂಸರಾಜ್ ಭಾಗವಹಿಸಲಿದ್ದಾರೆ.