ಮಾಯಕೊಂಡ ಕ್ಷೇತ್ರದ ಗ್ರಾಮಗಳಿಗೆ ಶಾಸಕ ಕೆ.ಎಸ್.ಬಸವಂತಪ್ಪ ಭೇಟಿ

ಮಾಯಕೊಂಡ ಕ್ಷೇತ್ರದ ಗ್ರಾಮಗಳಿಗೆ ಶಾಸಕ ಕೆ.ಎಸ್.ಬಸವಂತಪ್ಪ ಭೇಟಿ

ದಾವಣಗೆರೆ, ಆ.10- ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ವಿವಿಧ ಗ್ರಾಮಗಳಿಗೆ ಸೋಮವಾರ ಭೇಟಿ ನೀಡಿದ ಶಾಸಕ ಕೆ.ಎಸ್.ಬಸವಂತಪ್ಪ, ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿ, ಸ್ಥಳದಲ್ಲಿಯೇ ಕೆಲವು ಸಮಸ್ಯೆಗಳಿಗೆ ಅಧಿಕಾರಿಗಳ ದೂರವಾಣಿಗೆ ಸಂಪರ್ಕಿಸಿ ಪರಿಹಾರ ನೀಡಿದರು.  

ಶಾಸಕರು ಹೊನ್ನೂರು ಗ್ರಾಮಕ್ಕೆ ಭೇಟಿ ನೀಡಿ, ಕೆರೆ ಪರಿಶೀಲಿಸಿದರು. ಈ ವೇಳೆ ಗ್ರಾಪಂ ಮಾಜಿ ಸದಸ್ಯ ಬಸಣ್ಣ, ಹೊನ್ನೂರು ಪ್ರಕಾಶ್, ಸಂತೋಷ್, ಮಂಜುನಾಥ್, ವೀರಣ್ಣ, ರಾಜಣ್ಣ, ವೆಂಕಟೇಶ್, ರೈತ ಮುಖಂಡ ರುದ್ರಮುನಿಯಪ್ಪ, ಕಂದಾಯ ಅಧಿಕಾರಿ ಚಂದ್ರಪ್ಪ, ಪಿಡಿಒ, ಗ್ರಾಮ ಲೆಕ್ಕಾಧಿಕಾರಿ ಇದ್ದರು.

ಬಳಿಕ ಜಮೀನುಗಳಲ್ಲಿ ಕೆಲಸ ಮಾಡುತ್ತಿದ್ದ ರೈತರನ್ನು ಭೇಟಿ ಮಾಡಿ ಸಮಸ್ಯೆಗಳನ್ನು ಆಲಿಸಿದರು. ಇದೇ ವೇಳೆ ಎಚ್.ಕಲಪನಹಳ್ಳಿ ಮತ್ತು ಚಟ್ಟೋಬನಹಳ್ಳಿಗೆ ಭೇಟಿ ನೀಡಿ ಕೋಳಿ ಫಾರಂಗಳ ಸ್ವಚ್ಛತೆ ಪರಿಶೀಲನೆ ನಡೆಸಿದರು. ಇದರಿಂದ ಬರುವ ತ್ಯಾಜ್ಯವನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸಿ ಜನರಿಗೆ ಸಮಸ್ಯೆ ಆಗದಂತೆ ಎಚ್ಚರಿಕೆ ವಹಿಸಬೇಕೆಂದು ಮಾಲೀಕರಿಗೆ ಸೂಚಸಿದರು.

ನಂತರ ಐಗೂರು ಗೊಲ್ಲರಹಟ್ಟಿ ಶಾಲೆ ಮತ್ತು ಅಂಗನವಾಡಿ ಕೇಂದ್ರಗಳಿಗೆ ದಿಢೀರ್ ಭೇಟಿ ನೀಡಿದ ಶಾಸಕರು, ಶಾಲೆಯ ಸುಸ್ಥಿತಿ, ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವ ಬಗ್ಗೆ ಪರಿಶೀಲಿಸಿದರು. ಗುಣಮಟ್ಟ ಶಿಕ್ಷಣದ, ಗುಣಮಟ್ಟದ ಆಹಾರದ ಬಗ್ಗೆ ಮಕ್ಕಳ ಬಳಿ ಪ್ರಶ್ನಿಸಿ ತಿಳಿದುಕೊಂಡರು. ಸರ್ಕಾರ ಮಕ್ಕಳಿಗಾಗಿಯೇ ಹಲವಾರು ಸೌಲಭ್ಯ ಕೊಡುತ್ತಿದೆ. ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಬೇಕೆಂದು ಶಿಕ್ಷಕರಿಗೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ನಿಂಗಪ್ಪ, ಹನುಮಂತಪ್ಪ, ಅಗಸನಕಟ್ಟೆ ಭೀಮಣ್ಣ, ತುಂಬಿಗೆರೆ ಅಂಜಿನಪ್ಪ, ಐಗೂರು ಚಂದ್ರಪ್ಪ, ಬೋರಗೊಂಡನಹಳ್ಳಿ ಹಾಲೇಶ್, ನಿಂಗಾಪೂರ ಮಂಜಣ್ಣ, ಎ.ಕೆ.ಮಂಜಪ್ಪ, ಕಾಂಗ್ರೆಸ್ ಮುಖಂಡ ಹನುಮಂತಪ್ಪ ಇದ್ದರು. 

error: Content is protected !!