ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವ ಉದ್ದೇಶ ನನ್ನದು

ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವ ಉದ್ದೇಶ ನನ್ನದು

ಹರಪನಹಳ್ಳಿಯಲ್ಲಿ ಇನ್‍ಸೈಟ್ ಸಂಸ್ಥೆಯ ಸಂಸ್ಥಾಪಕ ಜಿ.ಬಿ.ವಿನಯಕುಮಾರ್

ಹರಪನಹಳ್ಳಿ, ಆ. 10- ಮುಂಬರುವ 2024ರ ಲೋಕಸಭಾ ಚುನಾವಣೆಗೆ ದಾವಣಗೆರೆ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಆಕಾಂಕ್ಷಿಯಾಗಿ ಸ್ಪರ್ಧೆ ಮಾಡುವುದಾಗಿ ಇನ್‍ಸೈಟ್ ಸಂಸ್ಥೆಯ ಸಂಸ್ಥಾಪಕ ಜಿ.ಬಿ.ವಿನಯಕುಮಾರ್ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ಇನ್‍ಸೈಟ್ಸ್-ಐಎಎಸ್ ಎಂಬ ತರ ಬೇತಿ ಸಂಸ್ಥೆ ಸ್ಥಾಪಿಸಿ, ಸಾವಿರಾರು ವಿದ್ಯಾರ್ಥಿ ಗಳಿಗೆ ಐಎಎಸ್, ಕೆಎಎಸ್  ತರಬೇತಿ ನೀಡುವ ಮೂಲಕ ಶೈಕ್ಷಣಿಕವಾಗಿ, ಔದ್ಯೋಗಿಕವಾಗಿ ಕ್ರಾಂತಿ ಮಾಡಿದ್ದೇನೆ ಎಂದರು.

ಸಾಮಾಜಿಕ ಜಾಲತಾಣದಲ್ಲಿ ನನ್ನದೇಯಾದ ಟ್ವಿಟರ್ ಖಾತೆಯಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಫಾಲೋ ಮಾಡುತ್ತಿದ್ದು, ಅವರ ಪೋಷಕರೂ ಸಹ ನನ್ನ ಬೆನ್ನೆಲುಬಾಗಿ ನಿಂತು, ಇತ್ತೀಚೆಗೆ ಉನ್ನತ ಕನಸ್ಸನ್ನು ಹೊಂದಿ ಕೆಎಎಸ್, ಪಿಎಸ್‍ಐನಂತಹ ತರಬೇತಿ ಪಡೆದು ಹೊರಗುಳಿದಿದ್ದಾರೆ. ಅಂತವರ ಪರವಾಗಿ ರಾಜ್ಯ ಮತ್ತು ದೇಶದಲ್ಲಿ ಉನ್ನತ ಉದ್ಯೋಗಕ್ಕಾಗಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ತಡೆಯಲು, ಪಾರದರ್ಶಕವಾಗಿ ನೇಮಕಾತಿಯಾಗಲು ತಾವು ಸಂಸತ್ ಪ್ರವೇಶಿಸಿ ಧ್ವನಿ ಎತ್ತಲು ನಿಮ್ಮಂತವರ ಅಗತ್ಯವಿದೆ. ಈ ನಿಟ್ಟಿನಲ್ಲಿ ಲೋಕಸಭಾ ಚುನಾವಣೆಗೆ ನಿಂತು ಸಂಸತ್ತಿನಲ್ಲಿ ಜನರ ಪರವಾಗಿ ಮಾತನಾಡುವಂತಾಗಬೇಕು ಎಂದು ಒತ್ತಾಯ ಕೇಳಿಬಂದ ಹಿನ್ನೆಲೆಯಲ್ಲಿ ನಾನು ಸ್ಪರ್ಧೆಗೆ ಸಿದ್ದತೆ ನಡೆಸಿದ್ದೇನೆ ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಹುಲ್‍ಗಾಂಧಿಯವರು ಯುವಕರನ್ನು ಬೆಂಬಲಿಸುತ್ತಿದ್ದು, ನಾನು ಸಹ ವಿದ್ಯಾರ್ಥಿ, ಯುವಜನರ ಹಾಗೂ ಜನಸಾಮಾನ್ಯರ ಸಮಸ್ಯೆಗಳ ಸ್ಪಂದನೆಗೆ ಮುಂದಾಗುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಭರತೇಶ್ ಜೋಗಿನ್ನರ, ಮುಖಂಡರಾದ ಸಾಬಳ್ಳಿ ಜಂಬಣ್ಣ, ಎಚ್.ಶಂಭುಲಿಂಗಪ್ಪ, ಪಿಕಾರ್ಡ್ ಬ್ಯಾಂಕ್ ನಿರ್ದೇಶಕರಾದ ಪಿ.ಬಿ.ಗೌಡ, ಕಾನಹಳ್ಳಿ ರುದ್ರಪ್ಪ, ನೂರುದ್ದೀನ್, ಟಿ.ಎನ್.ಮಧುಕರ ತುಮಕೂರು, ಮಂಜುನಾಥ, ರಾಖೇಶ್, ಶಿವಪುತ್ರ, ಹುಚ್ಚಪ್ಪ, ಈಶಪ್ಪ, ಜೆ.ಮಂಜುನಾಥ, ಸೇರಿದಂತೆ ಇತರರು ಉಪಸ್ಥಿತರಿದ್ದರು.

error: Content is protected !!