ದಾವಣಗೆರೆ, ಆ. 10 – ದಾವಣಗೆರೆ – ನ್ಯಾಷನಲ್ ಫೆಡರೇಷನ್ ಆಫ್ ಇಂಡಿಯನ್ ವುಮನ್ ಆನೆಕೊಂಡ ಮಹಿಳಾ ಶಾಖೆ ಅಧ್ಯಕ್ಷರಾಗಿ ಅಕ್ಕಮ್ಮ ಅವರು ಆಯ್ಕೆಯಾಗಿದ್ದಾರೆ ಎಂದು ಎನ್ಎಫ್ಐಡಬ್ಲ್ಯೂ ಜಿಲ್ಲಾ ಸಂಚಾಲಕರಾದ ಸರೋಜಾ ತಿಳಿಸಿದ್ದಾರೆ.
ಕಳೆದ ಸೋಮವಾರ ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯ ಆನೆಕೊಂಡದಲ್ಲಿ ಎನ್ಎಫ್ಐಡಬ್ಲ್ಯೂ ಮಹಿಳಾ ಸಂಘಟನೆಯ ಸಭೆ ನಡೆಸಿ, ಸಭೆಯಲ್ಲಿ ಮಹಿಳೆಯರ ಮೇಲಾಗುವ ದೌರ್ಜನ್ಯ ಮತ್ತಿತರೆ ಕೌಟುಂಬಿಕ ಕಲಹಗಳ ಕುರಿತು, ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಟ್ಟಲು ಎನ್ಎಫ್ಐಡಬ್ಲ್ಯೂ ಮಹಿಳಾ ಸಂಘಟನೆಯೊಂದಿಗೆ ಕೈ ಜೋಡಿಸಬೇಕೆಂದು ಜಿಲ್ಲಾ ಸಂಚಾಲಕರಾದ ಸರೋಜಾ ಹೇಳಿದರು.
ಕಾರ್ಯದರ್ಶಿಯಾಗಿ ಸುನಂದಮ್ಮ, ಖಜಾಂಚಿಯಾಗಿ ಕರಿಬಸಮ್ಮ ಅವರುಗಳನ್ನು ಆಯ್ಕೆ ಮಾಡಲಾಯಿತು. ಶಾಖೆ ಸದಸ್ಯರುಗಳಾದ ಪುಷ್ಪಲತಾ, ಅಶ್ವಿನಿ, ರೇಣುಕಮ್ಮ, ಶಿಲ್ಪ, ರತ್ನಮ್ಮ, ಪಾರ್ವತಮ್ಮ, ಲತಾ ಸಭೆಯಲ್ಲಿ ಭಾಗವಹಿಸಿದ್ದರು.