ಹೊನ್ನಾಳಿ, ಆ. 9 – ತಾಲ್ಲೂಕಿನ ಕೂಲಂಬಿ ಗ್ರಾಮ ಪಂಚಾಯಿತಿಗೆ ನೂತನ ಅಧ್ಯಕ್ಷರಾಗಿ ಕೆ.ಜೆ. ರೇವಣಸಿದ್ದಪ್ಪ, ಉಪಾಧ್ಯಕ್ಷರಾಗಿ ಆರ್.ಎಂ. ನೀಲಮ್ಮ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ರುದ್ರಪ್ಪ ತಿಳಿಸಿದರು.
ಚುನಾವಣಾ ಸಂದರ್ಭದಲ್ಲಿ ಗ್ರಾಮಪಂಚಾಯಿತಿ ಮಾಜಿ ಉಪಾಧ್ಯಕ್ಷರುಗಳಾದ ಸಿದ್ದನಗೌಡ ಕೆ.ಬಿ, ಪುನೀತ್ ಕುಮಾರ್ ಎಚ್.ಎ, ಬಸವರಾಜ, ಟೆ.ಎಸ್. ಸದಸ್ಯರುಗಳಾದ ಎಂ.ಕರಿಯಮ್ಮ, ಸಿ.ಜಿ. ಸದಾಶಿವಪ್ಪ, ಶಾರದಮ್ಮ, ಜರೀನಾಬೀ, ಸರಸ್ವತಮ್ಮ, ಗ್ರಾಮಪಂಚಾಯಿತಿ ಅಭಿವೃದ್ದಿ ಅಧಿಕಾರಿ ಜಗದೀಶ್ ಕಂಬಳಿ ಕಾರ್ಯದರ್ಶಿ ಎಂ.ಜಿ. ಹನುಮಂತಪ್ಪ, ಸಿಬ್ಬಂದಿ ವಾಣಿ ಹಾಗೂ ಗ್ರಾಮದ ಅನೇಕ ಮುಖಂಡರು ಇದ್ದರು.