ಅಧಿಕ ಶ್ರಾವಣದ ಪ್ರಯುಕ್ತ 171 ಮುತ್ತೈದೆಯರಿಗೆ ಮಡ್ಲಕ್ಕಿ ಕಟ್ಟಿದ ಸಾಯಿ ಭಜನಾಮೃತ
ದಾವಣಗೆರೆ, ಆ. 9- ಸಾಯಿ ಭಜನಾಮೃತ, ಶ್ರೀ ಶಿರಡಿ ಸಾಯಿಬಾಬಾ ಭಜನಾ ಮಂಡಳಿ, ಶ್ರೀ ಶಿರಡಿ ಸಾಯಿಬಾಬಾ ಸೇವಾ ಸಮಿತಿಯು ಪ್ರಾರಂಭವಾಗಿ ಆರು ವರ್ಷಗಳ ಸವಿನೆನಪಿಗಾಗಿ ಹಾಗೂ ಅಧಿಕ ಶ್ರಾವಣ ಮಾಸದ ಪ್ರಯುಕ್ತ ಕೋದಂಡರಾಮ ದೇವಸ್ಥಾನದ ಗೀತಾ ಮಂದಿರ ದಲ್ಲಿ ಸರ್ವಧರ್ಮದ 171 ಮುತ್ತೈದೆಯರಿಗೆ ಮಡ್ಲಕ್ಕಿ ಕಟ್ಟುವ ಕಾರ್ಯಕ್ರಮ ನಡೆಸಲಾಯಿತು.
19 ವರ್ಷಗಳಿಗೊಮ್ಮೆ ಬರುವ ಈ ಅಧಿಕ ಶ್ರಾವಣ ಮಾಸದಲ್ಲಿ ಮಡ್ಲಕ್ಕಿ ಹಾಕಿದವರಿಗೆ, ಹಾಕಿಸಿಕೊಂಡವರಿಗೆ ಅಧಿಕ ಫಲ ಬರುತ್ತದೆ.
ಇಂತಹ ವಿಶಿಷ್ಟವಾದ ಸಂಸ್ಕೃತಿಯ ಸೊಬಗನ್ನು ಸಾಯಿ ಭಜನಾಮೃತ ಸ್ಥಾಪಕರಾದ ಶ್ರೀಮತಿ ಸವಿತಾ ಗಿರೀಶ್ ದಂಪತಿಗಳು ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಸಿಕೊಂಡು ಬರುತ್ತಿದ್ದಾರೆ. ತಮ್ಮ ಸಹೋದರಿಯರಿಗೆ ತವರು ಮನೆಯ ತವರಿನ ಭಾಗ್ಯವನ್ನು ಕರುಣಿಸಿದ್ದಾರೆ. ಇಂತಹ ಪ್ರೀತಿ, ವಾತ್ಸಲ್ಯವನ್ನು ಹರಿಸಿದ ಶ್ರೀಮತಿ ಸವಿತಾ ಗಿರೀಶ್ ದಂಪತಿಗೆ ಮುತ್ತೈದೆಯರು ಇನ್ನೂ ಹೆಚ್ಚಿನ ಸಕಲ ಸೌಭಾಗ್ಯಗಳನ್ನು ಕೊಡಲೆಂದು ಈ ಸಂದರ್ಭದಲ್ಲಿ ಹಾರೈಸಿದರು.
ಮಡಿಲಕ್ಕಿಯಲ್ಲಿ ಅರಿಶಿಣ, ಕುಂಕುಮ, ಬಟ್ಟ ಲಡಿಕೆ, ಅರಿಶಿಣ ಕೊಂಬು, ಕನ್ನಡಿ ಮುಂತಾದ ಮಡಿಲಕ್ಕಿ ಸಾಮಾನುಗಳು, ಮಂಗಳ ದ್ರವ್ಯಗಳು, ಅಕ್ಕಿ, ಬೆಲ್ಲ, ಕೊಬ್ಬರಿ, ಹಣ್ಣು, ತಾಂಬೂಲ, ಚಕ್ಕುಲಿ, ಪಾಕದ ಕಡಲೆ ಮುಂತಾದ ತಿಂಡಿಗಳು, ಸೀರೆ, ರವಿಕೆ ಬಟ್ಟೆಯಿಂದ ಭರಿತವಾದ
ಮಡಿಲಕ್ಕಿ ಕಾರ್ಯಕ್ರಮದಲ್ಲಿ ಶ್ರೀಮತಿ ಪ್ರಭಾ ಮಲ್ಲಿಕಾರ್ಜುನ್, ಶ್ರೀಮತಿ ರೇಖಾ ಗಣೇಶ್, ಶ್ರೀಮತಿ ಪ್ರೀತಿ ಬಕ್ಕೇಶ್ ಅವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಶ್ರೀಮತಿ ಸವಿತಾ ಗಿರೀಶ್ ಮತ್ತು ಗಿರೀಶ್ ಹೆಚ್.ಎ. ದಂಪತಿ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.