ಯೋಧರಿಗೆ ಸಿಗುವ ಎಲ್ಲಾ ಸೌಲಭ್ಯಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ

ಯೋಧರಿಗೆ ಸಿಗುವ ಎಲ್ಲಾ ಸೌಲಭ್ಯಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ

ರಾಣೇಬೆನ್ನೂರಿನ ಶಾಸಕ ಪ್ರಕಾಶ ಕೋಳಿವಾಡ

ರಾಣೇಬೆನ್ನೂರು, ಆ. 9- ಈ ದೇಶದಲ್ಲಿ ರೈತ ಮತ್ತು ಸೈನಿಕರ ಸೇವೆ ಅಪಾರವಾದದ್ದು. ನಿವೃತ್ತ ಸೈನಿಕರಿಗೆ ಸರ್ಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳನ್ನು ಅವರ ಮನೆಯ ಬಾಗಿಲಿಗೆ ತಲುಪಿಸುವ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು. 

ಅವರು ನಗರದ ಬಸ್‍ಸ್ಟ್ಯಾಂಡ್ ಹತ್ತಿರ ತಾಲ್ಲೂಕಿನ ಮುಷ್ಟೂರು ಗ್ರಾಮದ ವೀರ ಯೋಧ ಗಂಗಾಧರ ಎಂ. ಕಮ್ಮಾರ ಇವರು ನಿವೃತ್ತಿಯಾಗಿ ತವರಿಗೆ ಮರಳಿದ ಸಂದರ್ಭದಲ್ಲಿ ರೈತ ಸಂಘಟನೆ, ಕನ್ನಡಪರ ಸಂಘಟನೆಗಳು ರೈತ ಮುಖಂಡ ರವೀಂದ್ರಗೌಡ ಎಫ್. ಪಾಟೀಲರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಯೋಧರ ಸ್ವಾಗತ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ರೈತ ಮುಖಂಡ ರವೀಂದ್ರಗೌಡ ಎಫ್. ಪಾಟೀಲ ಮಾತನಾಡಿ, ನನ್ನ ಕಿರಿಯ ಸ್ನೇಹಿತ ಗಂಗಾಧರ ಸುದೀರ್ಘ 21 ವರ್ಷಗಳ ಕಾಲ ಅಸ್ಸಾಂ, ತ್ರಿಪುರಾ, ಪಾಕಿಸ್ತಾನ, ಬಾಂಗ್ಲಾದೇಶ, ರಾಜಸ್ಥಾನ, ಪಶ್ಚಿಮ ಬಂಗಾಳ, ಪಂಜಾಬ್‌, ಜಮ್ಮು ಮತ್ತು ಕಾಶ್ಮೀರ ಗಡಿ ಪ್ರದೇಶದಲ್ಲಿ ಅನೇಕ ಕಷ್ಟ, ಕಾರ್ಪಣ್ಯಗಳ ಮಧ್ಯೆ ಜೀವದ ಹಂಗು ತೊರೆದು ಸೇವೆ ಮಾಡಿರುವುದು ನಮ್ಮ ಹೆಮ್ಮೆ ಎಂದರು. 

ಕನ್ನಡಪರ ಸಂಘಟನೆಯ ನಿತ್ಯಾನಂದ ಕುಂದಾಪುರ, ವಿ.ಎಸ್. ಮಠದ, ಯುವ ಮುಖಂಡ ಚಂದ್ರಣ್ಣ ಬೇಡರ, ಡಾ|| ಮನೋಜ ಸಾವುಕಾರ, ಪ್ರಶಾಂತ ರಡ್ಡಿ ಎರೇಕುಪ್ಪಿ, ಅಶೋ ಕಗೌಡ ಗಂಗನಗೌಡ್ರ, ದಿನಗೂಲಿ ನೌಕರರ ಸಂಘದ ಅಧ್ಯಕ್ಷ ಬಸವರಾಜ ಕೊಂಗಿಯವರ, ರೈತ ಮುಖಂಡ ಹರಿಹರಗೌಡ ಪಾಟೀಲ, ಯಲ್ಲಪ್ಪ ಓಲೇಕಾರ, ಬಿ.ಸಿ. ಯಲ್ಲಕ್ಕನವರ, ಅಣ್ಣಪ್ಪ ಉದಗಟ್ಟಿ ಮುಂತಾದವರು ಭಾಗಹಿಸಿ ದ್ದರು. ಶಿಕ್ಷಣ ಇಲಾಖೆಯ ಬಿ.ಇ.ಓ. ಎಂ.ಹೆಚ್. ವಿಶಾಲ ತಹಶೀಲ್ದಾರ್ ಕಛೇರಿ ಅಶೋಕ ಅರ ಳೇಕರ, ಪೊಲೀಸ್ ಇಲಾಖೆಯಿಂದ ವಿನಾಯಕ ಆರ್. ಮುಷ್ಟೂರನಾಯಕ ಮುಂತಾದವರು ಬಂದು ಯೋಧನನ್ನು ಸತ್ಕರಿಸಿದರು. 

ನಗರದ ಮುನ್ಸಿಪಲ್ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಚಂದ್ರಣ್ಣ ವೇಗಳಮನಿ ತಮ್ಮ ವಿದ್ಯಾರ್ಥಿಗಳಿಂದ ಗೌರವ ವಂದನೆ ಸಲ್ಲಿಸಿದರು. ಮಾಗೋಡ, ಇಟಗಿ ಗ್ರಾಮಗಳಲ್ಲಿ ಗ್ರಾಮ ಪಂಚಾಯಿತಿಗಳ ಎಸ್.ಡಿ.ಎಂ.ಸಿ. ಗಳ ಪರವಾಗಿ ಗುರಣ್ಣ ಉಪ್ಪಿನ, ರಾಮನಗೌಡ್ರ, ನಾಗರಾಜ ಗುಡಿಯವರ ಸ್ವಾಗತಿಸಿ ಸತ್ಕರಿಸಿದರು. ಮುಷ್ಟೂರು ಗ್ರಾಮದಲ್ಲಿ ಸಾರ್ವಜನಿಕರಿಂದ ಎಚ್.ಪಿ.ಎಸ್. ಶಾಲಾ ಆವರಣದಲ್ಲಿ ಸತ್ಕರಿಸ ಲಾಯಿತು. ದಾರಿಯುದ್ದಕ್ಕೂ ರಾಷ್ಟ್ರಾಭಿಮಾನಿ ಗಳು ಯೋಧನಿಗೆ ಸತ್ಕರಿಸಿ ಗೌರವಿಸಿದರು. 

error: Content is protected !!