ಮತ್ತಿಹಳ್ಳಿ ಗ್ರಾ.ಪಂ.ಅಧ್ಯಕ್ಷರಾಗಿ ಸಣ್ಣಹೊನ್ನಪ್ಪ

ಮತ್ತಿಹಳ್ಳಿ ಗ್ರಾ.ಪಂ.ಅಧ್ಯಕ್ಷರಾಗಿ ಸಣ್ಣಹೊನ್ನಪ್ಪ

ಹಳೇಮನಿ ಕೊಟ್ರಮ್ಮ ಉಪಾಧ್ಯಕ್ಷೆ

ಹರಪನಹಳ್ಳಿ, ಆ. 8 – ತಾಲ್ಲೂಕಿನ ಮತ್ತಿಹಳ್ಳಿ ಗ್ರಾಮ ಪಂಚಾಯಿತಿ ಅದ್ಯಕ್ಷರಾಗಿ ಸಣ್ಣ ಹೊನ್ನಪ್ಪ, ಉಪಾದ್ಯಕ್ಷರಾಗಿ  ಹಳೇಮನಿ ಕೊಟ್ರಮ್ಮ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಸತೀಶ ಪಾಟೀಲ್ ಘೋಷಣೆ ಮಾಡಿದರು.

ಗ್ರಾಮ ಪಂಚಾಯಿತಿಯಲ್ಲಿ ಮಂಗಳವಾರ ನಡೆದ ಚುನಾವಣೆಗೆ ಅಧ್ಯಕ್ಷ ಸ್ಥಾನಕ್ಕೆ ಸಣ್ಣ ಹೊನ್ನಪ್ಪ ಹಾಗೂ ಎಂ. ಪ್ರತಿಭಾ, ಉಪಾದ್ಯಕ್ಷ ಸ್ಥಾನಕ್ಕೆ ಹಳೆಮನಿ ಕೊಟ್ರಮ್ಮ, ಚಲುವಾದಿ ಯಲ್ಲಮ್ಮ ನಾಮಪತ್ರ ಸಲ್ಲಿಸಿದ್ದರು.

ಒಟ್ಟು 19 ಸದಸ್ಯರಿದ್ದು, ಅಧ್ಯಕ್ಷ ಸ್ಥಾನಕ್ಕೆ ನಡೆದ ಮತದಾನ ಪ್ರಕ್ರಿಯೆಯಲ್ಲಿ  ಸಣ್ಣ ಹೊನ್ನಪ್ಪ 13 ಮತಗಳನ್ನು ಪಡೆದಿದ್ದಾರೆ, 1 ಮತ ತಿರಸ್ಕತಗೊಂಡಿದೆ. ಎಂ. ಪ್ರತಿಭಾ 5 ಮತ ಪಡೆದು ಪರಾಜಿತಗೊಂಡರು. ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಹಳೆಮನಿ ಕೊಟ್ರಮ್ಮಗೆ 15, ಚಲುವಾದಿ ಯಲ್ಲಮ್ಮ ಇವರಿಗೆ 4 ಮತಗಳು ಪಡೆದಿದ್ದಾರೆ.

ಈ ಸಂದರ್ಭದಲ್ಲಿ ಎಂ.ಕೊಟ್ರೇಶಪ್ಪ, ಹನುಮನಗೌಡ, ಶ್ರವಣಕುಮಾರ, ಬೆಟ್ಟನಗೌಡ, ನಿಂಗಮ್ಮ, ಪಾರ್ವತಮ್ಮ, ಕೆಂಚನಗೌಡ, ಮತ್ತಿಹಳ್ಳಿ ರಾಮಣ್ಣ, ಕೊಟ್ರಗೌಡ, ಚನ್ನನಗೌಡ, ಅಲದಹಳ್ಳಿ ಕರಿಬಸಪ್ಪ, ಷಣ್ಮುಖಪ್ಪ, ಐ. ಬಸವರಾಜ, ಪಕ್ಷಪ್ಪ ಸೇರಿದಂತೆ ಇತರರು ಇದ್ದರು.

error: Content is protected !!