ಗುಡಾಳು ಪಂಚಾಯತಿ ಅಧ್ಯಕ್ಷರಾಗಿ ಬಿ. ಲೋಕೇಶ್, ಉಪಾಧ್ಯಕ್ಷೆ ಹನುಮಕ್ಕ

ಗುಡಾಳು ಪಂಚಾಯತಿ ಅಧ್ಯಕ್ಷರಾಗಿ  ಬಿ. ಲೋಕೇಶ್, ಉಪಾಧ್ಯಕ್ಷೆ ಹನುಮಕ್ಕ

ಮಾಯಕೊಂಡ, ಆ.8 – ಸಮೀಪದ ಗುಡಾಳು ಗ್ರಾಮ ಪಂಚಾಯತಿಯ ಎರಡನೇ ಅವಧಿಗೆ ಮಂಗಳವಾರ ಚುನಾವಣೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ  ಸಾಮಾನ್ಯ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಪಂಗಡ ಮಹಿಳೆ ಮೀಸಲಾತಿ ಘೋಷಣೆಯಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಲೋಕೇಶ್ ಉಪಾಧ್ಯಕ್ಷ ಸ್ಥಾನಕ್ಕೆ‌ ಹನುಮಕ್ಕ ಮಾತ್ರ ನಾಮಪತ್ರ ಸಲ್ಲಿಸಿದ ಕಾರಣ ಅಧ್ಯಕ್ಷರಾಗಿ ಲೋಕೇಶ್,  ಉಪಾಧ್ಯಕ್ಷರಾಗಿ ಹನುಮಕ್ಕ ಕೋಂ ನಾಗಪ್ಪ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿಯಾದ ಕ್ಷೇತ್ರ ಶಿಕ್ಷಣಾಧಿಕಾರಿ ಟಿ. ಅಂಬಣ್ಣ ಘೋಷಿಸಿದರು. ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಶಾಸಕ ಕೆ. ಎಸ್.‌ಬಸವಂತಪ್ಪ, ಎ.ಪಿ.ಎಂ.ಸಿ. ಮಾಜಿ‌ ಅಧ್ಯಕ್ಷ ಎಸ್. ಕೆ. ಚಂದ್ರಶೇಖರ್, ತಾಲ್ಲೂಕು ಪಂಚಾಯತಿ ಮಾಜಿ ಸದಸ್ಯ ಶಂಭುಲಿಂಗಪ್ಪ, ಕೆಂಚಮ್ಮನಹಳ್ಳಿ ಚಂದ್ರಣ್ಣ, ಮಾಜಿ ಉಪಾಧ್ಯಕ್ಷ ಶಿವರುದ್ರಪ್ಪ, ಮಹಾನಗರ ಪಾಲಿಕೆ ಸದಸ್ಯ ಕೆ.ಬಿ. ನಾಗರಾಜ್, ಕೆ.ಬಿ. ರುದ್ರೇಶ್, ಕಾಂಗ್ರೆಸ್ ಮುಖಂಡ ಸಿದ್ದನೂರು ಪ್ರಕಾಶ್, ಡಿ.ಸಿ. ರುದ್ರೇಶ್, ಡಿ. ವೆಂಕಟೇಶ್, ಮ್ಯಾಸರಹಳ್ಳಿ ಪ್ರಭು, ಗ್ರಾಮ ಪಂಚಾಯತಿ ಸದಸ್ಯರು, ಪಿಡಿಒ ರಾಘವೇಂದ್ರ, ಕಾರ್ಯದರ್ಶಿ ಗಂಗಪ್ಪ ಮತ್ತು ಸಿಬ್ಬಂದಿ ಹಾಗೂ ಗ್ರಾಮಸ್ಥರು ಅಭಿನಂದಿಸಿದರು. 

error: Content is protected !!