ಹರಪನಹಳ್ಳಿ, ಆ.4- ತಾಲ್ಲೂಕಿನ ಹಿರೆಮೆಗಳಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಪ್ರತಿಭಾ ಪರಶುರಾಮಪ್ಪ ಹಾಗೂ ಉಪಾಧ್ಯಕ್ಷರಾಗಿ ರೇಖಾ ಇವರು ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಜಯಸಿಂಹ ಘೋಷಣೆ ಮಾಡಿದರು.
ಶುಕ್ರವಾರ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಒಟ್ಟು 22 ಸದಸ್ಯರಿದ್ದು, ಅಧ್ಯಕ್ಷ ಸ್ಥಾನ ಬಯಸಿ ಪ್ರತಿಭಾ ಪರಶುರಾಮಪ್ಪ ಮತ್ತು ಎಲ್.ಹನುಮಂತಪ್ಪ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ರೇಖಾ ಕರಿಬಸಪ್ಪ ಮತ್ತು ವಿಶಾಲಾಕ್ಷಮ್ಮ ನಾಮಪತ್ರ ಸಲ್ಲಿಸಿದ್ದರು.
ಪ್ರತಿಭಾ ಪರಶುರಾಮಪ್ಪನವರಿಗೆ 13 ಮತಗಳು, ಎಲ್.ಹನುಮಂತಪ್ಪನವರಿಗೆ 9 ಹಾಗೂ ರೇಖಾ ಕರಿಬಸಪ್ಪ 12, ವಿಶಾಲಾಕ್ಷಮ್ಮ 10 ಮತಗಳು ಬಂದಿದ್ದು, ಅಧ್ಯಕ್ಷರಾಗಿ ಪ್ರತಿಭಾ ಹಾಗೂ ಉಪಾಧ್ಯಕ್ಷರಾಗಿ ರೇಖಾ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ತಿಳಿಸಿದರು.
ಈ ಸಂದರ್ಭದಲ್ಲಿ ಪಿಡಿಓ ಬಿ.ಎಂ.ರೇವಣಸಿದ್ದಪ್ಪ, ಅಂಜಿನಪ್ಪ, ಡಿ.ವೆಂಕಟೇಶ್, ಹೊಸಪೇಟೆ ಮಂಜಮ್ಮ, ನೀಲಮ್ಮ, ವಿಶಾಲಮ್ಮ, ಕಾವೇರಿ, ಪಿ.ತಿಮ್ಮಣ್ಣ, ಚಿಕ್ಕಮೆಗಳಗೆರಿ ಪರಶುರಾಮಪ್ಪ, ನೀಲಿಬಾಯಿ, ಕೃಷ್ಣನಾಯ್ಕ, ರೇಣುಕಮ್ಮ, ಚಂದ್ರಪ್ಪ, ವಿರುಪಾಕ್ಷಪ್ಪ, ಬಿದರಿ ಹನುಮಂತಪ್ಪ, ವೆಂಕಟೇಶ್, ಸಿಂಗ್ರಿಹಳ್ಳಿ ಪರಶುರಾಮ, ಅರುಣ, ಅಂಜಿನಪ್ಪ, ಗ್ರಾಪಂ ಸಿಬ್ಬಂದಿ ಇದ್ದರು.