ಗ್ರಾಹಕರಾದ ಪ್ರತಿಭಾ, ಶಶಿಕಲಾ ಚಾಲನೆ
ದಾವಣಗೆರೆ, ಆ.4- ವಿಶ್ವದ ಅತಿದೊಡ್ಡ ಚಿನ್ನ ಮತ್ತು ವಜ್ರದ ರೀಟೇಲ್ ಜಾಲಗಳಲ್ಲಿ ಒಂದಾಗಿ ರುವ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಕರ್ನಾಟಕದ ದಾವಣಗೆರೆ ಶೋರೂಂನಲ್ಲಿ ಸಿಲ್ವರ್ ಶೋಗೆ ಗ್ರಾಹಕರಾದ ಪ್ರತಿಭಾ ಮತ್ತು ಶಶಿಕಲಾ ಅವರುಗಳು ಚಾಲನೆ ನೀಡಿದರು.
ಹೊಚ್ಚ ಹೊಸದಾದ ಬೆಳ್ಳಿಯ ಆಭರಣ ಮತ್ತಿ ತರೆ ಉತ್ಪನ್ನಗಳ ಪ್ರದರ್ಶನವನ್ನು ಆಯೋಜಿಸುತ್ತಿದೆ. ಆಗಸ್ಟ್ 13 ರವರೆಗೆ ನಡೆಯಲಿರುವ ಈ ಪ್ರದರ್ಶನದಲ್ಲಿ ಬೆಳ್ಳಿಯ ಆಭರಣಗಳು ಮತ್ತು ಇತರೆ ಉತ್ಪನ್ನಗಳನ್ನು ಪ್ರದರ್ಶಿಸುತ್ತಿವೆ.
ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ನ ಮುಖ್ಯಸ್ಥರಾದ ಬೆಸಿಲ್ರಾಜನ್ ಮತ್ತು ಗ್ರಾಹಕರು ಉಪಸ್ಥಿತರಿದ್ದರು. ತನ್ನ ಗ್ರಾಹಕರಿಗೆ 10 ಮಲಬಾರ್ ಭರವಸೆಗಳನ್ನು ನೀಡುತ್ತಿದೆ. ಇದರಲ್ಲಿ ಪ್ರಮುಖ ವಾಗಿ ಪಾರದರ್ಶಕ ದರ ಪಟ್ಟಿ, ಸ್ಟೋನ್ನ ನಿಖರ ತೂಕ, ನಿವ್ವಳ ತೂಕ, ಆಭರಣದ ಸ್ಟೋನ್ ದರ, ಆಭರಣಕ್ಕೆ ಭರವಸೆಯ ಜೀವನಪೂರ್ತಿ ನಿರ್ವಹಣೆ, ಹಳೆಯ ಚಿನ್ನಕ್ಕೆ ಶೇ.100 ರಷ್ಟು ಮೌಲ್ಯ, ಶೇ.100 ಹೆಚ್.ಯು.ಐ.ಡಿ ಅನುಸರಣೆಯ ಚಿನ್ನ ಶುದ್ಧತೆಯ ಪ್ರಮಾಣಿಕರಣ, ಐಜಿಐ ಮತ್ತು ಜಿಐಎ ಪ್ರಮಾಣೀಕರಣ ಸೇರಿದಂತೆ 28 ಪಾಯಿಂಟ್ಗಳ ಗುಣಮಟ್ಟ ಪರೀಕ್ಷೆ, ಬೈಬ್ಯಾಕ್ ಗ್ಯಾರಂಟಿ, ಜವಾಬ್ದಾರಿಯುತ ಮೂಲ ಮತ್ತು ನ್ಯಾಯಯುತ ಕಾರ್ಮಿಕ ಪದ್ಧತಿಗಳು ಸೇರಿವೆ. ಮಲಬಾರ್ ನ್ಯಾಯಯುತ ದರ ಭರವಸೆಯು ಶೇ.4.9 ರಿಂದ ಆರಂಭವಾಗಲಿದ್ದು, ಇದು ಅತ್ಯಂತ ಕಡಿಮೆ ಆಭರಣಗಳ ಮೇಕಿಂಗ್ ಚಾರ್ಜ್ ಆಗಿದೆ.
ಗ್ರೂಪ್ನ ಸಿಎಸ್ಆರ್ ಉಪಕ್ರಮದ ಭಾಗವಾಗಿ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ತನ್ನ ಈ ಸ್ಟೋರ್ನ ಲಾಭಾಂಶದಲ್ಲಿ ಶೇ.5 ರಷ್ಟನ್ನು ಚಾರಿಟೇಬಲ್ ಮತ್ತು ಜನೋಪಕಾರಿ ಚಟುವಟಿಕೆಗಳಿಗೆ ಕೊಡುಗೆ ನೀಡಲಿದೆ.