ರಾಣೇಬೆನ್ನೂರು ಆಧ್ಯಾತ್ಮಿಕ ಕೇಂದ್ರದ ತವರೂರು

ರಾಣೇಬೆನ್ನೂರು ಆಧ್ಯಾತ್ಮಿಕ ಕೇಂದ್ರದ ತವರೂರು

`ಜ್ಞಾನವಾಹಿನಿ’ ಕಾರ್ಯಕ್ರಮದಲ್ಲಿ ಡಾ. ಚನ್ನಮಲ್ಲಿಕಾರ್ಜುನ ಶ್ರೀ

ರಾಣೇಬೆನ್ನೂರು,ಆ.3- ರಾಣೇಬೆನ್ನೂರು  ಕೇವಲ ವಾಣಿಜ್ಯ ನಗರವಾಗದೇ, ಆಧ್ಯಾತ್ಮಿಕ ಕೇಂದ್ರದ ತವರೂರು ಕೂಡಾ ಆಗಿ, ಧಾರ್ಮಿಕ ಕ್ಷೇತ್ರಕ್ಕೆ ಹಲವಾರು ಸಾಧು-ಸಂತರನ್ನ ಕೊಡುಗೆಯಾಗಿ ನೀಡಿದೆ ಎಂದು ಡಾ. ಶ್ರೀ ಒಡೆಯರ್ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮೀಜಿ  ಹೇಳಿದರು.

ಇಲ್ಲಿನ ಮೃತ್ಯುಂಜಯ ನಗರದ ಶ್ರೀ ಚನ್ನೇಶ್ವರ ಮಠ  ಶ್ರೀ ಜಗದ್ಗುರು ವಾಗೀಶ ಪಂಡಿತಾರಾಧ್ಯ ಸಮುದಾಯ ಭವನದಲ್ಲಿ  ಲಿಂಗೈಕ್ಯ ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳವರ `ಚಿತ್ ಬೆಳಕಿನಲ್ಲಿ ಜ್ಞಾನವಾಹಿನಿ’ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು  ವಹಿಸಿ  ಸ್ವಾಮೀಜಿ ಆಶೀರ್ವಚನ ನೀಡಿದರು.

ಅಧಿಕಮಾಸದಲ್ಲಿ ಸಾಧು-ಸಂತರ, ದೇವರ ದರ್ಶನವನ್ನು ಮಾಡುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ. ಜ್ಞಾನದ ಹಸಿವು ಉಳಿದೆಲ್ಲ ಹಸಿವುಗಳಿಗಿಂತ ಮಿಗಿಲಾಗಬೇಕು. ಮನುಷ್ಯನ ಬದುಕು ಇತರ ಪ್ರಾಣಿಗಳಿಂದ ಬೇರೆಯಾಗಿ ಸಾರ್ಥಕವಾಗಬೇಕಾದರೆ ಸಾಧನೆ ಆಗಬೇಕು. 

ಅಧ್ಯಾತ್ಮ ನನ್ನನ್ನು ನಾನು ಅರಿತುಕೊಳ್ಳುವ ಉತ್ತಮ ಮತ್ತು ಸುಲಭ ಮಾರ್ಗ. ಜ್ಞಾನವಾಹಿನಿಯ ಈ ಸಮಯದಲ್ಲಿ ಪ್ರೊಫೆಸರ್ ಅ.ಸಿ. ಹಿರೇಮಠ ಇವರ ಧಾರ್ಮಿಕ ಸೇವೆಯನ್ನು ಸ್ಮರಿಸಬೇಕಾದದ್ದು ನಮ್ಮ ಕರ್ತವ್ಯ ಎಂದು ಅವರು ನುಡಿದರು.

`ಅಧಿಕ ಮಾಸದ ಆಧ್ಯಾತ್ಮ’ ಎಂಬ ಉಪನ್ಯಾಸವನ್ನು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ   ತಾಲೂಕು ಘಟಕದ ಅಧ್ಯಕ್ಷ  ಶ್ರೀ ಪ.ವಿ. ಮಠದ ಭಗವಾನ್ ಪರಮೇಶ್ವರ  ನೀಡಿದರು 

ಇದೇ ಸಂದರ್ಭದಲ್ಲಿ   ತಾಲೂಕು ಶ್ರೀ ವೀರಶೈವ ಜಂಗಮ ಪುರೋಹಿತ ಮತ್ತು ಅರ್ಚಕರ ಸಂಘದ ದ್ವಿತೀಯ ವಾರ್ಷಿಕೋತ್ಸವ ಆಚರಿಸಲಾಯಿತು.   

ಪ್ರವಚನಕಾರ  ಶ್ರೀ ವೇದಮೂರ್ತಿ ಗದಿಗೆಯ ಸ್ವಾಮಿ ಹಿರೇಮಠ  ಶ್ರಾವಣ ಮಾಸದ ಬಗ್ಗೆ  ವಿಶೇಷ ಮಾಹಿತಿ ನೀಡಿದರು.  

ಸಂಘದ  ಕಾರ್ಯದರ್ಶಿಯಾಗಿದ್ದ ಪ್ರೊಫೆಸರ್ ಅ. ಸಿ. ಹಿರೇಮರ್ ಇವರು ಶಿವಾಧೀನರಾಧ ಪ್ರಯುಕ್ತ   ಅಮೃತ ಗೌಡ ಡಿ. ಹಿರೇಮಠ ಇವರನ್ನು ಸಂಸ್ಥೆಯ ನೂತನ ಕಾರ್ಯದರ್ಶಿಯನ್ನಾಗಿ ಶ್ರೀಗಳು ನೇಮಿಸಿದರು.

ನಗರದ ಗಣ್ಯ ವರ್ತಕ    ಬಿ. ಎಸ್. ಪಟ್ಟಣ ಶೆಟ್ಟರು ನುಡಿ ಸೇವೆ ಮಾಡಿದರು.     ಶ್ರೀ ವೀರಶೈವ ಜಂಗಮ ಪುರೋಹಿತ ಮತ್ತು ಅರ್ಚಕರ ಸಂಘದ ಅಧ್ಯಕ್ಷ  ವೇದಮೂರ್ತಿ  ಅಧ್ಯಕ್ಷತೆ ವಹಿಸಿದ್ದರು

 ಶಿಕ್ಷಕ     ಜಗದೀಶ ಮಳಿಮಠ ಸ್ವಾಗತಿಸಿ ದರು.   ಶ್ರೀಮತಿ ಕಸ್ತೂರಮ್ಮ ಪಾಟೀಲ  ನಿರೂಪಣೆ ಮಾಡಿದರು.     ಪ್ರಾಸ್ತಾವಿಕವಾಗಿ ಶಿವಕುಮಾರ್ ಶಾಸ್ತ್ರಿಗಳು ಮಾತನಾಡಿದರು. ರಾಚಯ್ಯ ಶಾಸ್ತ್ರಿಗಳು ವಂದಿಸಿದರು.

error: Content is protected !!