ದಾವಣಗೆರೆ ತಾಲ್ಲೂಕಿನ 20 ನಿರಾಶ್ರಿತರಿಗೆ ಚೆಕ್ ವಿತರಣೆ
ದಾವಣಗೆರೆ, ಆ.1- ಕಳೆದ ವಾರ ಸುರಿದ ಮಳೆಯಿಂದ ಹಲವು ಕಡೆಗಳಲ್ಲಿ ಆಸ್ತಿಗಳಿಗೆ ಹಾನಿಯಾಗಿದ್ದು, ದಾವಣಗೆರೆ ತಾಲ್ಲೂಕಿನ 20 ಕಡೆಗಳಲ್ಲಿ ಹಾನಿಯಾಗಿರುವ ನಿರಾಶ್ರಿತ ಕುಟುಂಬಗಳಿಗೆ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಸಹಾಯ ಧನದ ಚೆಕ್ ವಿತರಿಸಿದರು.
ಇಂದು ತಮ್ಮ ಗೃಹ ಕಛೇರಿಯಲ್ಲಿ ಚೆಕ್ ವಿತರಿಸಿದ ಸಚಿವರು ನಿರಾಶ್ರಿತರಿಗೆ ಸಾಂತ್ವನ ಹೇಳಿ, ಮುಂದಿನ ದಿನಗಳಲ್ಲಿ ಏನೇ ತೊಂದರೆ ಆದರೂ ಸಹ ನಮ್ಮ ಗಮನಕ್ಕೆ ತರುವಂತೆ ತಿಳಿಸಿದರು. ಅತಿವೃಷ್ಟಿಯಾಗಲೀ, ಅನಾವೃಷ್ಟಿಯಾಗಲೀ ಅದರಿಂದ ಹಾನಿಗೊಳಗಾದ ಸಂತ್ರಸ್ತರಿಗೆ ನೆರವಾಗಬೇಕೆಂಬ ಉದ್ದೇಶದಿಂದ ಪರಿಹಾರ ಮೊತ್ತವನ್ನು ಹೆಚ್ಚಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಕೆ.ಪರಶುರಾಮ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಬಿ.ಕರಿಬಸಪ್ಪ, ಮುಖಂಡರುಗಳಾದ ಕಕ್ಕರಗೊಳ್ಳ ಗಿರೀಶ್, ಬೂದಾಳ್ ಬಾಬು, ತಹಶೀಲ್ದಾರ್ ಎಂ.ಬಿ.ಅಶ್ವತ್ಥ್ ಮತ್ತಿತರರಿದ್ದರು.