ಔದ್ಯೋಗಿಕ ಕ್ಷೇತ್ರದ ಮಹತ್ತರ ಸವಾಲುಗಳಿಗೆ ವಿದ್ಯಾರ್ಥಿಗಳು ಸಿದ್ಧರಾಗಬೇಕು

ಔದ್ಯೋಗಿಕ ಕ್ಷೇತ್ರದ ಮಹತ್ತರ ಸವಾಲುಗಳಿಗೆ ವಿದ್ಯಾರ್ಥಿಗಳು ಸಿದ್ಧರಾಗಬೇಕು

ಭದ್ರಾ ಕಾಲೇಜಿನ ಕಾರ್ಯಕ್ರಮದಲ್ಲಿ ದಾವಣಗೆರೆ ವಿ.ವಿ ಪ್ರೊ. ಆರ್. ಶಶಿಧರ್

ದಾವಣಗೆರೆ, ಜು. 30- ವಿದ್ಯಾರ್ಥಿಗಳು ಇಂದಿನ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದಿಂದ ಮುಂಬರುವ ದಿನಗಳಲ್ಲಿ ಹಲವಾರು ಕ್ರಾಂತಿಕಾರಿ ಬದಲಾವಣೆಗಳಿಗೆ, ಔದ್ಯೋಗಿಕ ಕ್ಷೇತ್ರದ ಮಹತ್ತರ ಸವಾಲುಗಳಿಗೆ ಇಂದಿನಿಂದಲೇ ಸಿದ್ಧತೆ ಮಾಡಿಕೊಳ್ಳಿ ಎಂದು ದಾವಣಗೆರೆ ವಿಶ್ವವಿದ್ಯಾನಿಲಯದ ಪ್ರೊ. ಆರ್. ಶಶಿಧರ್ ಕರೆ ನೀಡಿದರು.

ನಗರದ ಕುವೆಂಪು ಕನ್ನಡ ಭವನದಲ್ಲಿ ನಡೆದ ಭದ್ರಾ ಪದವಿ ಪೂರ್ವ ಕಾಲೇಜಿನ 2023-24ನೇ ಸಾಲಿನ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಉದ್ಘಾಟನಾ ಸಮಾ ರಂಭ, ಪ್ರತಿಭಾ ಪುರಸ್ಕಾರ ಹಾಗೂ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಾಣಿಜ್ಯ ಕ್ಷೇತ್ರದಲ್ಲಿ ಹಲವಾರು ನವ್ಯ ಅವಕಾಶಗಳು ಮುಂದಿನ ದಿನಗಳಲ್ಲಿ ವಿಪುಲವಾಗಿ ದೊರಕುವ ಎಲ್ಲಾ ಅವಕಾಶಗಳನ್ನು ವಾಣಿಜ್ಯ ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಲು ತಿಳಿಸಿದರು.

ಮತ್ತೋರ್ವ ಮುಖ್ಯ ಅತಿಥಿಯಾಗಿದ್ದ ದಾವಣಗೆರೆ ವಿವಿಯ ಸಿಂಡಿಕೇಟ್ ಸದಸ್ಯ ಸಿ.ಹೆಚ್. ಮುರಿಗೇಂದ್ರಪ್ಪ ಮಾತನಾಡಿ, ವಿದ್ಯಾರ್ಥಿಗಳು ವಿನಯ, ಸಂಸ್ಕಾರ, ಸನ್ನಡತೆಯನ್ನು ಅಳವಡಿಸಿಕೊಳ್ಳಲು ತಿಳಿಸಿದರು. ಈಗಿನ ವಿದ್ಯಾರ್ಥಿಗಳಲ್ಲಿ ಸಂವಹನ ಕೊರತೆ ಮತ್ತು ಅದರ ಮುಖಾಂತರ ಜೀವನವನ್ನು ಹೇಗೆ ರೂಪಿಸಿಕೊಳ್ಳಬೇಕೆಂದು ಮತ್ತು ಸಾಮಾನ್ಯ ಜ್ಞಾನದ ಕೊರತೆ ಇದೆ ಎಂದು ಹೇಳಿದರು.

ಭದ್ರಾ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ ಮೆಂಟ್ ಅಂಡ್ ಸೈನ್ಸ್ ಸ್ಟಡೀಸ್ ಹಾಗೂ ಸ್ನಾತಕೋತ್ತರ ಕೇಂದ್ರದ ಪ್ರಾಂಶುಪಾಲ ಪ್ರೊ. ಟಿ. ಮುರುಗೇಶ್  ಮಾತ ನಾಡಿ, ವಿದ್ಯಾರ್ಥಿಗಳಿಗೆ ವಿದ್ಯೆ ಕಲಿಸಿದ ಗುರುಗಳಿಗೆ ಇಂದಿನ ವಿದ್ಯಾರ್ಥಿಗಳು ಆದರ-ಗೌರವ ಸೂಚ್ಯಂಕ ದಲ್ಲಿ ಚೀನಾವು ಮೊಟ್ಟ ಮೊದಲ ಸ್ಥಾನದಲ್ಲಿದ್ದು, ಭಾರತವು ಎಂಟನೇ ಸ್ಥಾನದಲ್ಲಿರುವುದರ ಬಗ್ಗೆ ವಿಷಾದಿಸುತ್ತಾ, ವಿದ್ಯಾರ್ಥಿಗಳಿಗೆ ಗುರುಗಳ ಮಹತ್ವವನ್ನು ತಿಳಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಭದ್ರಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ. ಡಿ. ಚಂದ್ರಪ್ಪ ಮಾತನಾಡಿ, ವಿದ್ಯಾರ್ಥಿಗಳು ಪ್ರಾಮಾಣಿಕತೆ, ಸಮಯ ಪ್ರಜ್ಞೆ, ನಿಷ್ಠೆ, ಶ್ರದ್ದೆಯಿಂದ ಅಭ್ಯಾಸವನ್ನು ಮಾಡಿದಾಗ ಮಾತ್ರ  ಗುರಿಯನ್ನು ಸಾಧಿಸಲು ಸಾಧ್ಯ ಎಂದು ತಿಳಿ ಹೇಳಿದರು.

ಸಮಾರಂಭದಲ್ಲಿ ಭದ್ರಾ ಎಜುಕೇಷನ್ ಟ್ರಸ್ಟ್‌ನ ಕಾರ್ಯದರ್ಶಿ ಎಂ.ಸಂಕೇತ್‌ ಉಪಸ್ಥಿತ ರಿದ್ದರು. ವಿದ್ಯಾರ್ಥಿಗಳಾದ ನಮ್ರತಾ ಸಂಗಡಿ ಗರು ಪ್ರಾರ್ಥಿಸಿದರು. ಉಪನ್ಯಾಸಕರಾದ ಶ್ರೀಮತಿ ಎಂ.ವಿ. ಸುಮಾ ಸ್ವಾಗತಿಸಿದರು.  ರವಿಕುಮಾರ್ ಪ್ರತಿಭಾ ಪುರಸ್ಕಾರ ನೆರವೇರಿ ಸಿದರು. ಶ್ರೀಮತಿ ಲಕ್ಷ್ಮಿಬಾಯಿ ನಿರೂಪಿಸಿದರು. ಶ್ರೀಮತಿ ಆರ್.ಕೆ. ಲಕ್ಷ್ಮಿ ವಂದಿಸಿದರು.

error: Content is protected !!