ರಾಜ್ಯಮಟ್ಟದ ಕರಾಟೆ : ಮಲೇಬೆನ್ನೂರಿಗೆ 14 ಪದಕ

ರಾಜ್ಯಮಟ್ಟದ ಕರಾಟೆ : ಮಲೇಬೆನ್ನೂರಿಗೆ 14 ಪದಕ

ಮಲೇಬೆನ್ನೂರು, ಜು.27- ಇಲ್ಲಿನ ಪಿಡಬ್ಲ್ಯೂಡಿ ಕಾಲೋನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 4 ಮತ್ತು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆಯ 3 ಹಾಗೂ ಪುರಸಭೆಯ ಎದುರುಗಡೆ ಇರುವ ಜಿಬಿಎಂ ಶಾಲೆ ಮತ್ತು ಕುಂಬಳೂರಿನ ಬಸವ ಗುರುಕುಲ ಶಾಲೆಯ ತಲಾ ಒಬ್ಬ ವಿದ್ಯಾರ್ಥಿ ಹಾಗೂ ಬಸಾಪುರದ ಬಳಿ ಇರುವ ಆಂಜನೇಯ ಓಎಸ್‌ಎಸ್ ಶಾಲೆಯ 4 ವಿದ್ಯಾರ್ಥಿಗಳು ಸೇರಿ ಒಟ್ಟು 15 ವಿದ್ಯಾರ್ಥಿಗಳು ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ಭಾನುವಾರ ನಡೆದ ರಾಜ್ಯಮಟ್ಟದ ಓಪನ್‌ ಕರಾಟೆ ಚಾಂಪಿಯನ್‌ ಶಿಪ್‌ನಲ್ಲಿ ಭಾಗವಹಿಸಿ, ಕಟಾಸ್‌ನಲ್ಲಿ 11 ಪದಕ ಹಾಗೂ ಕುಮುತೆಯಲ್ಲಿ 4 ಪದಕ ಪಡೆದು ತರಬೇತಿ ಪಡೆದ ದಾವಣಗೆರೆಯ ಹೊರಟ್ಟಿ ಕ್ರೀಡಾ ಅಕಾಡೆಮಿಗೆ ಕೀರ್ತಿ ತಂದಿದ್ದಾರೆ.  

error: Content is protected !!