ಹರಪನಹಳ್ಳಿ, ಜು. 27- ಪಟ್ಟಣದ ಪೊಲೀಸ್ ಠಾಣೆಗೆ ಪಿಎಸ್ಐ ಆಗಿ ಹೆಚ್.ಸಿ. ಹಿರೇಮಠ್ ಅಧಿಕಾರ ಸ್ವೀಕರಿಸಿದರು.
ಈ ಹಿಂದೆ ಶಾಂತಮೂರ್ತಿ ಅವರು ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದು, ಅವರು ಬಳ್ಳಾರಿ ಜಿಲ್ಲೆಯ ತೆಕ್ಕಲಕೋಟೆ ಠಾಣೆಗೆ ವರ್ಗಾವಣೆಯಾಗಿದ್ದಾರೆ. ಹೆಚ್.ಸಿ. ಹಿರೇಮಠ್, ಜಿಲ್ಲೆಯ ಕಮಲಾಪುರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಶಾಂತಮೂರ್ತಿ ಅವರಿಗೆ ಸಿಪಿಐ ಕಮ್ಮಾರ ನಾಗರಾಜ ಹಾಗೂ ಠಾಣೆಯ ಸಿಬ್ಬಂದಿಯವರು ಬೀಳ್ಕೊಟ್ಟರು.