ಪೋಷಕರು ಮಕ್ಕಳ ಆರೋಗ್ಯದ ಕಡೆ ನಿಗಾ ವಹಿಸಬೇಕು ಡಾ. ಮಲ್ಲಿಕಾರ್ಜುನ ಎಚ್.ಬಿ.

ಪೋಷಕರು ಮಕ್ಕಳ ಆರೋಗ್ಯದ  ಕಡೆ ನಿಗಾ ವಹಿಸಬೇಕು ಡಾ. ಮಲ್ಲಿಕಾರ್ಜುನ ಎಚ್.ಬಿ.

ರಾಣೇಬೆನ್ನೂರು, ಜು.25- ಪೋಷಕರು ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾವಹಿಸಬೇಕು ಎಂದು ಡಾ. ಮಲ್ಲಿಕಾರ್ಜುನ ಎಚ್.ಬಿ. ಹೇಳಿದರು. 

ತಾಲ್ಲೂಕಿನ ಅಸುಂಡಿ ಗ್ರಾಮದ ಡಾ. ಕಡಕೋಳ ಪೋದಾರ್ ಲರ್ನ್ ಸ್ಕೂಲ್‌ನಲ್ಲಿ ಏರ್ಪಡಿಸಲಾಗಿದ್ದ ದಂತ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು. 

ಇತ್ತೀಚಿನ ವರ್ಷಗಳಲ್ಲಿ ಮಕ್ಕಳಲ್ಲಿ ಚಾಕೋಲೇಟ್, ಐಸ್‌ಕ್ರೀನಂತಹ ಪದಾರ್ಥಗಳ ಸೇವನೆ ಹೆಚ್ಚಾಗುತ್ತಿದ್ದು, ಇದು ಅವರ ದಂತ ಪಂಕ್ತಿಗಳ ಮೇಲೆ ಗಂಭೀರ ಪರಿಣಾಮ ಉಂಟು ಮಾಡುತ್ತದೆ. ಈ ನಿಟ್ಟಿನಲ್ಲಿ ಮಕ್ಕಳ ಆರೋಗ್ಯಕ್ಕೆ ಪೂರಕವಾಗುವಂತಹ ಆಹಾರ ಪದಾರ್ಥಗಳನ್ನು ನೀಡಬೇಕು ಎಂದರು. 

ದಂತ ವೈದ್ಯರುಗಳಾದ ಡಾ. ಬಿ.ಎಸ್. ಪಾಟೀಲ ಮತ್ತು ಡಾ. ಅಮರನಾಥ ಉಪಾಸಿ, ಡಾ. ಪ್ರಕಾಶ್ ಲೋಕಂಡೆ, ಡಾ.ಮಹಾಂತೇಶ್ ಶಿರಗಾಂವಿ, ಡಾ.ಪ್ರವೀಣ್ ಉದುಗನಿ. ಡಾ. ಪ್ರಮೋದ್ ಉದುಗನಿ, ಡಾ. ಪ್ರಸನ್ನಕುಮಾರ್ ಕಡಕೋಳ ಮಕ್ಕಳ ದಂತ ತಪಾಸಣೆಯನ್ನು ನಡೆಸಿ, ದಂತ ಆರೋಗ್ಯವನ್ನು ಉತ್ತಮ ಪಡಿಸಿಕೊಳ್ಳಲು ಮಕ್ಕಳಿಗೆ ಸಲಹೆಗಳನ್ನು ನೀಡಿದರು.

ಸ್ಕೂಲ್‍ನ ಕಾರ್ಯದರ್ಶಿ ಪ್ರಶಾಂತ ಕಡಕೋಳ್, ಕವಿತಾ ಕಡಕೋಳ್, ರಾಜೇಶ್ವರಿ ಹನಗೋಡಿಮಠ, ಪ್ರಿನ್ಸಿಪಾಲ್ ರೂಪೇಶ್ ಘಾಟಗೆ, ಆಧ್ಯಾ, ಮಮತಾ ಘಾಟಗೆ, ಅಶ್ವಿನಿ ಅಗಡಿ, ರುಕ್ಸಾನ, ಗೀತಾ, ಸುಮಾ, ಹರ್ಷಿತಾ, ನಿಖಾತ್, ರಘುನಂದನ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

error: Content is protected !!