ವಿದ್ಯಾರ್ಥಿಗಳಿಗೆ ಕಲಿಯುವ ಹಸಿವು, ಛಲ ಇರಬೇಕು ಆರ್.ಎಸ್.ನಾಗಭೂಷಣ್

ವಿದ್ಯಾರ್ಥಿಗಳಿಗೆ ಕಲಿಯುವ ಹಸಿವು, ಛಲ ಇರಬೇಕು ಆರ್.ಎಸ್.ನಾಗಭೂಷಣ್

ದಾವಣಗೆರೆ, ಜು.25- ನಗರದ ಜಿಎಂಐಟಿ ಪಾಲಿಟೆಕ್ನಿಕ್‌ನ ಮೊದಲ ವರ್ಷದ ವಿದ್ಯಾರ್ಥಿಗಳಿಗೆ ಪ್ರವೇಶ ಕಾರ್ಯಕ್ರಮವನ್ನು ಕಾಲೇಜಿನ ಜಿಎಂ ಹಾಲಮ್ಮ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು. 

ನಗರದ   ವಿಜಯ ಟ್ರೇಡರ್ಸ್ ಕಂಪನಿಯ ಮಾಲೀಕ   ಆರ್. ಎಸ್. ನಾಗಭೂಷಣ್ ಕಾರ್ಯಕ್ರಮ  ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ಕಲಿಯುವ ಹಸಿವಿರಬೇಕು, ಸಾಧಿಸುವ ಛಲವಿರಬೇಕು, ವಿಶೇಷ ವ್ಯಕ್ತಿತ್ವವನ್ನು ಬೆಳೆಸಿಕೊಂಡು ಇತರರಿಗೆ ಮಾದರಿಯಾಗಬೇಕೆಂದು ಕರೆಕೊಟ್ಟರು.  

ಮುಂಬರುವ ಜಿ.ಎಂ. ವಿಶ್ವವಿದ್ಯಾಲಯದ ನಾಮ ನಿರ್ದೇಶಿತ   ಉಪ ಕುಲಪತಿ  ಡಾ. ಎಚ್. ಡಿ. ಮಹೇಶಪ್ಪ ಮಾತನಾಡಿ, ವಿದ್ಯಾರ್ಥಿಗಳು ಶಿಸ್ತು ಮತ್ತು ಬದ್ಧತೆಯನ್ನು ಪ್ರದರ್ಶಿಸುವುದರ ಮೂಲಕ ಉತ್ತಮ ವಿದ್ಯಾರ್ಥಿಗಳಾಗಿ ಹೊರಹೊಮ್ಮ ಬೇಕೆಂದು ತಿಳಿಸಿದರು. 

 ಜಿಎಂಐಟಿ ಪಾಲಿಟೆಕ್ನಿಕ್ ಪ್ರಾಂಶುಪಾಲ ಡಾ. ಬಿ. ಆರ್. ಶ್ರೀಧರ್  ಕಾಲೇಜಿನ ಪ್ರಾಂಶು ಪಾಲ  ಡಾ. ಸಂಜಯ್ ಪಾಂಡೆ,    ತರಬೇತಿ ಮತ್ತು ಉದ್ಯೋಗ ವಿಭಾಗದ ಮುಖ್ಯಸ್ಥ ತೇಜಸ್ವಿ ಕಟ್ಟಿಮನಿ,   ಕಾಲೇಜಿನ ಆಡಳಿತ ಅಧಿಕಾರಿ ಸುಭಾಷ್‌ಚಂದ್ರ ಮಾತನಾಡಿದರು. 

ಸಿವಿಲ್ ವಿಭಾಗದ ಮುಖ್ಯಸ್ಥ ನಿಂಗರಾಜು  ಮತ್ತು ಮೆಕ್ಯಾನಿಕಲ್ ವಿಭಾಗದ ಅಧ್ಯಾಪಕರಾದ  ಯಾಸ್ಮಿನ್ ಬೇಗಮ್  ಕಾರ್ಯಕ್ರಮ ನಡೆಸಿಕೊಟ್ಟರು.   ಭೂಮಿಕ ಸ್ವಾಗತಿಸಿದರು.

error: Content is protected !!