ಹರಪನಹಳ್ಳಿಯಲ್ಲಿ ಮಣಿಪುರದ ಘಟನೆ ಖಂಡಿಸಿ ಸಿಪಿಐ ಪ್ರತಿಭಟನೆ

ಹರಪನಹಳ್ಳಿಯಲ್ಲಿ ಮಣಿಪುರದ ಘಟನೆ ಖಂಡಿಸಿ ಸಿಪಿಐ ಪ್ರತಿಭಟನೆ

ಹರಪನಹಳ್ಳಿ, ಜು.25- ಮಣಿಪುರ ರಾಜ್ಯದಲ್ಲಿ ನಡೆದ ಅ ಮಾನವೀಯ ಘಟನೆಯನ್ನು ಖಂಡಿ ಸಿ, ರಾಷ್ಟ್ರವ್ಯಾಪಿ ಭಾರತ ಕಮ್ಯುನಿಸ್ಟ್‌ ಪಕ್ಷದಿಂದ ಮಣಿಪುರ ಸೌಹಾರ್ದ ದಿನಾಚರಣೆಯನ್ನು ಮಂಗಳವಾರ ಆಚರಿಸಲಾಗಿದ್ದು, ತಾಲ್ಲೂಕು ಸಿಪಿಐ ಘಟಕದಿಂದ ಪಟ್ಟಣದ ಐ.ಬಿ.ವೃತ್ತದಲ್ಲಿ ಪ್ರತಿಭಟನೆ ನಡೆಸಿ, ತಹಶೀಲ್ದಾರ್‌ ಮೂಲಕ ಮನವಿ ಪತ್ರವನ್ನು ಸಲ್ಲಿಸಿದರು.

ಸಿಪಿಐ ಕಾರ್ಯದರ್ಶಿ ಗುಡಿಹಳ್ಳಿ ಹಾಲೇಶ್ ಮಾತನಾಡಿ,  ಮಣಿಪುರ ದಲ್ಲಿ ಭೀಕರ ಘಟನೆ ನಡೆದರೂ ಪ್ರಧಾನಿಯವರು ಮೌನವಾಗಿರುವುದು ಏಕೆ? ಮಣಿಪುರದಲ್ಲಿ ನಡೆಯುತ್ತಿರುವ ಗಲಭೆಯನ್ನು ತಡೆಯುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿವೆ. ಇದು ಸರ್ಕಾರಿ ಪ್ರಾಯೋಜಿತ ಹಿಂಸಾಚಾರದಂತೆ ಕಾಣುತ್ತಿದೆ ಎಂದು ಆರೋಪಿಸಿದರು.

ಜಿಲ್ಲಾ ಉಸ್ತುವಾರಿ ಎಚ್.ಎಂ.ಸಂತೋಷ್ ಮಾತನಾಡಿ ಸಮುದಾಯ, ಸಮುದಾಯಗಳ ನಡುವೆ ಅಪನಂಬಿಕೆ ಮತ್ತು ದ್ವೇಷ ಹುಟ್ಟುವಂತೆ ತಂತ್ರ ರೂಪಿಸಿದ ಕೋಮುವಾದಿ ಶಕ್ತಿಗಳು ಇಂದು ಈ ಹಿಂಸಾಚಾರಗಳಿಗೆ ನೇರ ಹೊಣೆಯಾಗಿವೆ. ಈ ಕೃತ್ಯದಲ್ಲಿ ಭಾಗಿಯಾದವರ ಮೇಲೆ ಪ್ರಕರಣ ದಾಖಲಿಸಿ, ಕಾನೂನು ಕ್ರಮ ಕೈಗೊಳ್ಳಬೇಕು, ಇಲ್ಲವಾದಲ್ಲಿ ತೀವ್ರವಾದ ಹೋರಾಟ ನಡೆಸಲಾಗುವುದು ಎಂದರು.

ಗಲಭೆ ನಿಯಂತ್ರಿಸಲು ವಿಫಲವಾದ ಮಣಿಪುರದ ಮುಖ್ಯಮಂತ್ರಿ ಕೂಡಲೇ ರಾಜೀನಾಮೆ ನೀಡಬೇಕು. ಅಕ್ರಮ ಶಸ್ತ್ರಾಸ್ತ್ರ ಹೊಂದಿರುವ ಜನರಿಂದ ಅವುಗಳನ್ನು ವಶಪಡಿಸಿಕೊಳ್ಳಬೇಕು. ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಬೇಕು. ಸಂತ್ರಸ್ತ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಬೇಕು ಸೇರಿದಂತೆ, ಇತರೆ ಹಕ್ಕೊತ್ತಾಯಗಳ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕಾರ್ಯದರ್ಶಿ ಬಳಿಗ ನೂರು ಕೊಟ್ರೇಶ್, ದಾದಾಪೀರ್, ದೊಡ್ಡಬಸವ ರಾಜ್, ಬಾಷಾ ಸಾಬ್, ಡಿ.ಎಚ್.ಅರುಣ್, ಪಂಪಣ್ಣ, ಬಸಮ್ಮ ಸೇರಿದಂತೆ ಇತರರು ಇದ್ದರು.

error: Content is protected !!