ಎಟಿಎಂನಲ್ಲಿ ಹಣ ಬಿಡಿಸಿ ಬ್ಯಾಂಕ್‌ಗೆ ಮೋಸ ನಾಲ್ವರು ಅಂತರ್‌ ರಾಜ್ಯ ವಂಚಕರ ಬಂಧನ

ಎಟಿಎಂನಲ್ಲಿ ಹಣ ಬಿಡಿಸಿ ಬ್ಯಾಂಕ್‌ಗೆ ಮೋಸ ನಾಲ್ವರು ಅಂತರ್‌ ರಾಜ್ಯ ವಂಚಕರ ಬಂಧನ

ಮುರುಘರಾಜೇಂದ್ರ ಕೋ- ಆಪರೇಟಿವ್ ಬ್ಯಾಂಕಿನ ಎಟಿಎಂನಲ್ಲಿ ನಡೆದ ವಂಚನೆ ಪ್ರಕರಣ

ದಾವಣಗೆರೆ, ಜು. 24-  ಎಟಿಎಂ ನಲ್ಲಿ ತಾಂತ್ರಿಕ ಕೌಶಲ್ಯ ಬಳಸಿ ಹಣ ಬಿಡಿಸಿ ಬ್ಯಾಂಕ್‌ಗೆ ಮೋಸ ಮಾಡಿದ  ಹಿನ್ನೆಲೆಯಲ್ಲಿ ನಾಲ್ವರು ಅಂತರ್ ರಾಜ್ಯ ವಂಚಕರನ್ನು ಪೊಲೀಸರು ಬಂಧಿಸಿದ್ದಾರೆ.

ಉತ್ತರ ಪ್ರದೇಶದ ಕಾನ್ಪುರ ನಗರದ ಪ್ರಮೋದ್ ಕುಮಾರ್, ಅರ್ಜುನ್ ಸಿಂಗ್, ಸಂದೀಪ್ ಸಿಂಗ್ ಚೌಹಾಣ್ ಹಾಗೂ ಲವ್ ಸಿಂಗ್ ಬಂಧಿತರು. ಇವರಿಂದ ಕೃತ್ಯಕ್ಕೆ ಬಳಸಿದ ನಾಲ್ಕು ಎಟಿಎಂ ಕಾರ್ಡ್‌ಗಳು, 5 ಸಾವಿರ ರೂ. ನಗದು ಹಾಗೂ ಐದು ಲಕ್ಷ ರೂ ಮೌಲ್ಯದ ಸ್ವಿಫ್ಟ್‌ ಡಿಜೈರ್ ಕಾರು ವಶಪಡಿಸಿಕೊಳ್ಳಲಾಗಿದೆ.

ನಗರದ ಕುವೆಂಪು ರಸ್ತೆಯಲ್ಲಿರುವ ಶ್ರೀ ಮುರುಘರಾಜೇಂದ್ರ ಕೋ ಆಪರೇಟಿವ್ ಬ್ಯಾಂಕಿನ ಎಟಿಎಂನಲ್ಲಿ ತಾಂತ್ರಿಕ ಕೌಸಲ್ಯ ಬಳಸಿ ಬಿಡಿಸಿಕೊಂಡು ಬ್ಯಾಂಕಿಗೆ 348900 ರೂ. ಮೋಸ ಮಾಡಲಾಗಿದೆ ಎಂದು ಬ್ಯಾಂಕ್‌ ವ್ಯವಸ್ಥಾಪಕ ಅರುಣ ಎಂ.ಎಸ್. ಅವರು ಕೆಟಿಜೆ ನಗರ ಪೊಲೀಸ್ ಠಾಣೆಗೆ ಜುಲೈ 22ರಂದು ದೂರು ನೀಡಿದ್ದಾರು.

ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ನಗರ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಮಲ್ಲೇಶ ಡಿ, ಕೆಟಿಜೆ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ  ಶಶಿಧರ ಯು ಜೆ, ಪಿಎಸ್‍ಐ ಮಂಜುಳ, ಅಪರಾಧ ವಿಭಾಗದ ಸಿಬ್ಬಂದಿಗಳಾದ ಪ್ರಕಾಶ ಟಿ, ಶಂಕರ್‌ ಆರ್ ಜಾಧವ್, ತಿಮ್ಮಣ್ಣ ಎನ್.ಆರ್., ಮಂಜಪ್ಪ ಎಂ, ಷಣ್ಮುಖ.ಕೆ, ಶಿವರಾಜ ಎಂ. ಎಸ್ ಪುಷ್ಪಲತಾ, ಅಮೃತ್ ಕೆ.ಹೆಚ್., ರಾಘವೇಂದ್ರ, ಶಾಂತರಾಜ್ ಅವರ ಪತ್ತೆ ಕಾರ್ಯವನ್ನು ಎಸ್ಪಿ
ಡಾ. ಅರುಣ ಕೆ ಶ್ಲ್ಯಾಘಿಸಿ  ಬಹುಮಾನ ಘೋಷಿಸಿದ್ದಾರೆ.

error: Content is protected !!