ವಿಷಮುಕ್ತ ಕೃಷಿ ಪದ್ಧತಿ ಅಳವಡಿಸಿ, ಸಮೃದ್ಧ ರೈತರಾಗಲು ಕರೆ

ವಿಷಮುಕ್ತ ಕೃಷಿ ಪದ್ಧತಿ ಅಳವಡಿಸಿ, ಸಮೃದ್ಧ ರೈತರಾಗಲು ಕರೆ

ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಆಶಯ

ಹೊನ್ನಾಳಿ, ಜು. 23-  ಮಣ್ಣಿನ ಫಲವತ್ತತೆ ಉಳಿಸಲು ರೈತರು ವಿಷಮುಕ್ತ ಕೃಷಿ ಪದ್ಧತಿ ಅಳವಡಿಸಿಕೊಂಡು ಸಮೃದ್ಧ ರೈತರಾಗಬೇಕು ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.

ಕೇಂದ್ರ ಸರ್ಕಾರದ ಖಾದಿ ಮತ್ತು ಗ್ರಾಮೋದ್ಯೋಗ ಇಲಾಖೆ ವತಿಯಿಂದ ವಿಷಮುಕ್ತ ಕೃಷಿ ಸಮೃದ್ಧ ರೈತ ಯೋಜನೆಯಡಿ ಸಾವಯವ ಕೃಷಿ ಉತ್ತೇಜನೆಗೊಳಿಸಲು ಭಾನುವಾರ ತಮ್ಮ ನಿವಾಸದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿಷಮುಕ್ತ ಸಾವಯವ ಗೊಬ್ಬರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಪ್ರಸ್ತುತ ದಿನದಲ್ಲಿ ಎಲ್ಲಾ ಬೆಳೆಗಳನ್ನು ಬೆಳೆಯಲು ಯಥೇಚ್ಛವಾಗಿ ರಾಸಾಯನಿಕ ಗೊಬ್ಬರಗಳನ್ನು ಬಳಸಿ ಮಣ್ಣಿನ ಫಲವತ್ತತೆ ಸಂಪೂರ್ಣ ಕ್ಷೀಣಿಸಿದ್ದು, ಮಣ್ಣು ಸಂರಕ್ಷಣೆ ಅತಿ ಮುಖ್ಯವಾಗಿದೆ. ಸಾವಯವ ಗೊಬ್ಬರ ಗಳನ್ನು ಉಪಯೋಗಿಸಿ, ಮಣ್ಣಿನ ಫಲವತ್ತತೆಯನ್ನು ಮುಂದಿನ ಪೀಳಿಗೆಗೆ ಉಳಿಸಬೇಕು ಎಂದು ಹೇಳಿದರು.

ಸಾವಯವ ಗೊಬ್ಬರಗಳನ್ನು ಭೂಮಿಗೆ ಹಾಕುವುದರಿಂದ ಆರೋಗ್ಯಕರ ಬೆಳೆಯನ್ನು ಬೆಳೆದು ಮನುಷ್ಯರ ಆರೋಗ್ಯ ವೃದ್ಧಿಸಬಹುದಾಗಿದೆ ಎಂದ ಅವರು, ಈ ಹಿಂದೆ ರೈತರು ಸಾವಯವ ಗೊಬ್ಬರವನ್ನು ಮಾತ್ರ ಬಳಸುತ್ತಿದ್ದರು ಇದರಿಂದ ಭೂಮಿ ಹೆಚ್ಚು ಇಳುವರಿ ಕೊಡುವುದರೊಂದಿಗೆ ಮಣ್ಣು ತನ್ನ ಫಲವತ್ತತೆ ಕಾಪಾಡಿಕೊಳ್ಳುತ್ತಿತ್ತು ಎಂದು ಹೇಳಿದರು.

ವಿಷಮುಕ್ತ ಕೃಷಿ ಸಮೃದ್ಧ ರೈತ ಯೋಜನೆಯ ಆಡ್ ಶಾಪ್ ವ್ಯವಸ್ಥಾಪಕ ಓಂಕಾರಗೌಡ ಮಾತನಾಡಿ, ಕೇಂದ್ರ ಸರ್ಕಾರದ ಖಾದಿ ಮತ್ತು ಗ್ರಾಮೋದ್ಯೋಗ ಇಲಾಖೆ ವತಿಯಿಂದ ವಿಷಮುಕ್ತ ಕೃಷಿ ಸಮೃದ್ಧ ರೈತ ಯೋಜನೆಯಡಿ ಸಾವಯವ ಕೃಷಿ ಉತ್ತೇಜನೆಗೊಳಿಸಲು ಕ್ರಾಪ್ ವೀಟಾ, 3ಬಿ ಬ್ಲಾಕ್ ಬಯೋ ಬೂಸ್ಟರ್, ಕ್ಯಾಟಲ್ ಸುಧಾ, ಡಿಎನ್‍ಸಿ 90, ಕ್ರಾಪ್ಸುಧಾ, ಭೂಮಿಸುಧಾ ಮತ್ತು ಡಿಓಜಿ-80 ಎಂಬ 7 ವಿವಿಧ ರೀತಿಯ ಗೊಬ್ಬರಗಳನ್ನು ಉತ್ಪಾದನೆ ಮಾಡಲಾಗುತ್ತಿದೆ ಎಂದು ಹೇಳಿದರು.

ಸಾವಯವ ಗೊಬ್ಬರಗಳು ಭೂಮಿಯ ಮಣ್ಣನ್ನು ಹೆಚ್ಚು ಫಲವತ್ತಾಗಿಸುತ್ತದೆ, ಸಸ್ಯಕ್ಕೆ ಜೈವಿಕ ಪೋಷ ಕಾಂಶಗಳ ಲಭ್ಯತೆ ಹೆಚ್ಚಿಸುತ್ತದೆ, ಗುಣಮಟ್ಟದ ಹಾಗೂ ಹೆಚ್ಚಿನ ಇಳುವರಿ ಪಡೆಯುವುದು, ಪ್ರಾಣಿಗಳ ಪೋಷ ಕಾಂಶಗಳ ಸುಧಾರಣೆ ಸೇರಿದಂತೆ ಈ ಗೊಬ್ಬರಗಳನ್ನು ಬಳಸುವುದರಿಂದ ಅನೇಕ ವಿವಿಧ ಉಪಯೋಗಗಳನ್ನು ಪಡೆಯಬಹುದಾಗಿದೆ ಎಂದು ವಿವರಿಸಿದರು.

ಸಂಸ್ಥೆಯ ಸಿಬ್ಬಂದಿಯವರಾದ ನಾಗರಾಜ್, ಮಲ್ಲಿಕಾರ್ಜುನ ಬೆಳಲಗೆರೆ, ಶ್ರೀನಿವಾಸ ಬೆಳಲಗೆರೆ, ಕೂಲಂಬಿ ಮುರುಗೇಶಪ್ಪ, ಕುಂಬಳೂರು ಡಿ.ಸಿ.ಹನುಮಂತಪ್ಪ ಇತರರು ಇದ್ದರು.

error: Content is protected !!