ರಾಣೇಬೆನ್ನೂರಿನ ಶನೇಶ್ಚರ ಮಂದಿರದ ಕಾರ್ಯಕ್ರಮದಲ್ಲಿ ಶ್ರೀ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಅಭಿಮತ
ರಾಣೇಬೆನ್ನೂರು, ಜು.24- ಪ್ರತಿನಿತ್ಯ ದುರ್ಗಾ ಆರಾಧನೆಯನ್ನು ಶ್ರದ್ಧೆ ಹಾಗೂ ಭಕ್ತಿಯಿಂದ ಪೂಜಿಸಿ ದರೆ, ಮನುಜನಲ್ಲಿನ ದುರ್ಗತಿಗಳು ದೂರವಾಗಿ ಅಂತರಂಗದಲ್ಲಿ ಜಾಗೃತಿ ಮೂಡಿಸಿ, ಹೊಸ ಚೈತನ್ಯ ತರುತ್ತದೆ ಎಂದು ಶ್ರೀಮಠದ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ನಗರದ ಹೊರವಲಯದಲ್ಲಿ ರುವ ರಾಷ್ಟ್ರದ ಎರಡನೆಯ ಹಾಗೂ ರಾಜ್ಯದ ಮೊದಲನೆಯ ಹಿರೇಮಠ ಶನೈಶ್ಚರ ಮಂದಿರದಲ್ಲಿ ಏರ್ಪಡಿಸಿದ್ದ ಶನೇಶ್ವರ ಸ್ವಾಮಿ ಬಯಲು ಆಲಯದ ದ್ವಾದಶ ಪ್ರತಿಷ್ಠಾ ಮಹೋತ್ಸವ, ಬ್ರಹ್ಮ ಕಲಶೋತ್ಸವ, ಲೋಕ ಕಲ್ಯಾಣಾರ್ಥ ಹಾಗೂ ಪ್ರಾಚೀನ ಧರ್ಮ ಪರಂಪರೆಯ ಸಂವರ್ಧನೆಗಾಗಿ ನಿರಂತರ ಮೂರು ಮಹಾಮಂಡಲಗಳ 593 ದಿನಗಳ ಕಾಲ ನಿರಂತರ ಜರುಗುವ ಧರ್ಮ ಮಹಾಯಜ್ಞದ ದ್ವಿತೀಯ ಮಂಡ ಲೋತ್ಸವ, ಮಹಾಸಂಕಲ್ಪ ಸಮಾ ರಂಭದ ದಿವ್ಯ ಸಾನ್ನಿಧ್ಯ ವಹಿಸಿ, ಮಾತನಾಡಿದರು.
ಇಂದು ಬಹುತೇಕ ಜನರಲ್ಲಿ ಧರ್ಮದ ಬಗ್ಗೆ ಅಭಿಮಾನ, ಗೌರವ ಕಡಿಮೆಯಾಗುತ್ತಿರುವುದು ವಿಷಾದ ನೀಯ ಸಂಗತಿ. ಇದರಿಂದ ಧರ್ಮದ ಅವನತಿ ಸೇರಿದಂತೆ ಮನುಜನ ವ್ಯಕ್ತಿತ್ವಕ್ಕೆ ಧಕ್ಕೆ ಉಂಟಾಗುತ್ತಿದೆ. ನಾವು ಧರ್ಮವನ್ನು ಕಾಪಾಡಿದರೆ ಧರ್ಮವು ನಮ್ಮ ಜೀವನವನ್ನು ಸದಾ ಸಂತುಷ್ಟಗೊಳಿಸುತ್ತದೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಕೇಂದ್ರ ಸರ್ಕಾರದ ಆದಾಯ ತೆರಿಗೆ ಆಯುಕ್ತ (ಐಆರ್‌ಎಸ್) ಶ್ರೀನಿವಾಸ ಬಿದರಿ ಮಾತನಾಡಿ, ಸ್ಥಳೀಯ ಹಿರೇ ಮಠ ಶನೇಶ್ಚರ ಮಂದಿರದಲ್ಲಿ ಈ ಭರತಖಂಡ ಸೇರಿದಂತೆ, ಇಡೀ ಲೋಕ ಕಲ್ಯಾಣಾರ್ಥವಾಗಿ ಸುಮಾರು 593 ದಿನಗಳ ಕಾಲ ನಿರಂತರವಾಗಿ ವೈವಿಧ್ಯಮಯ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನಡೆಯುತ್ತಿರು ವುದು ನಿಜಕ್ಕೂ ಶ್ಲ್ಯಾಘನೀಯ ಹಾಗೂ ಹೆಮ್ಮೆ ತರುವಂತಹ ಕಾರ್ಯವಾಗಿದೆ.
ಈ ಕಾರ್ಯ ನಿಜಕ್ಕೂ ನನ್ನ ಜೀವನದಲ್ಲಿ ಒಂದು ಹೊಸ ಮನ್ವಂ ತರವಾಗಿದೆ. ಎಂತಹ ಸಾಮಾಜಿಕ, ಧಾರ್ಮಿಕ ಕಾರ್ಯಗಳು ಹೆಚ್ಚೆಚ್ಚು ನಡೆದರೆ ಸಮಾಜವು ಆರೋಗ್ಯವಾಗಿ ಸಾಗಲು ಸಾಧ್ಯ ಎಂದವರು ಶ್ರೀಮಠದ ಧಾರ್ಮಿಕ ಕಾರ್ಯವನ್ನು ಶ್ಲ್ಯಾಘಿಸಿ, ಅಭಿಪ್ರಾಯಿಸಿದರು.
ಇದೇ ಸಂದರ್ಭದಲ್ಲಿ ವಿಶ್ವರಾಧ್ಯ ಹಿರೇಮಠ್ ಅವರು ಧರ್ಮದ ಕುರಿತು ಉಪನ್ಯಾಸ ನೀಡಿದರು. ಶ್ರೀನಿವಾಸ ಕುಲಕರ್ಣಿ, ರವೀಂದ್ರ ಗೌಡ ಪಾಟೀಲ, ರಾಮಣ್ಣ ಬ್ಯಾಟಪ್ಪ ನವರ ಸೇರಿದಂತೆ ಭಕ್ತರು, ಶ್ರೀಮಠದ ವಟುಗಳು, ಶಾಸ್ತ್ರಿಗಳು ಮತ್ತಿತರರು ಇದ್ದರು. ಅಮರೇಶ ಕೊಂಡಗಳ್ಳಿ, ಬಸವರಾಜ ಹೂಗಾರ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.