ಹರಪನಹಳ್ಳಿ, ಜು.22- ಪಟ್ಟಣದ ವಾಸವಿ ಮಹಿಳಾ ಸಮಾಜದ ವತಿಯಿಂದ ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಅಧಿಕ ಶ್ರಾವಣ ಮಾಸದ ಪ್ರಯುಕ್ತ ಶ್ರೀ ಲಕ್ಷ್ಮಿ ನಾರಾಯಣ ದೇವರ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ವಾಸವಿ ಮಹಿಳಾ ಸಮಾಜದ ಎಲ್ಲಾ ಸುಮಂಗಲಿಯರು ಶ್ರೀ ಲಕ್ಷ್ಮಿ ನಾರಾಯಣ ದೇವರಿಗೆ 33 ಪೂಜಾ ಸಾಮಗ್ರಿಗಳಿಂದ ಅರ್ಚನೆ ಮಾಡಿ, ಓಂ ಶ್ರೀ ಪುರುಷೋತ್ತಮ ಸಹಸ್ರ ನಾಮಾವಳಿಯಿಂದ ಪೂಜೆ ಮಾಡಿ, ಲೋಕ ಕಲ್ಯಾಣಾರ್ಥವಾಗಿ ದೇವರಲ್ಲಿ ಪ್ರಾರ್ಥಿಸಿದರು.
ಕಾರ್ಯಕ್ರಮದಲ್ಲಿ ವಾಸವಿ ಮಹಿಳಾ ಸಮಾಜದ ಅಧ್ಯಕ್ಷ ಮುದಗಲ್ ಸುಜಾತ, ಕಾರ್ಯದರ್ಶಿ ಹುಬ್ಬಳ್ಳಿ ಜ್ಯೋತಿ, ಖಜಾಂಚಿ ಪೆಂಡುಕೋರ್ ಸೌಮ್ಯ ಹಾಗೂ ಇತರರು ಉಪಸ್ಥಿತರಿದ್ದರು.