ಸಮಾಜದ ಆಗುಹೋಗುಗಳಿಗೆ ಸ್ಪಂದಿಸುವ ವೇದಿಕೆಯಾಗಿ ಮೊದಲು ಅರಳಿದ್ದೇ ಪತ್ರಿಕಾರಂಗ

ಸಮಾಜದ ಆಗುಹೋಗುಗಳಿಗೆ ಸ್ಪಂದಿಸುವ  ವೇದಿಕೆಯಾಗಿ ಮೊದಲು ಅರಳಿದ್ದೇ ಪತ್ರಿಕಾರಂಗ

ಹೊನ್ನಾಳಿ, ಜು. 23 – ಸಮಾಜದ ಆಗುಹೋಗುಗಳಿಗೆ ಸ್ಪಂದಿಸುವ  ವೇದಿಕೆಯಾಗಿ ಮೊದಲು ಅರಳಿದ್ದೇ ಪತ್ರಿಕಾ ರಂಗ ಕಲ್ಲಚ್ಚಿನಿಂದ ಆರಂಭ ಗೊಂಡು ಅತ್ಯಾಧುನಿಕ ಡಿಜಿಟಲ್ ಮುದ್ರಣದವರೆಗೂ ಅನೇಕ ಮಜಲುಗಳನ್ನು ದಾಟಿ ಬಂದಿರುವ ಕನ್ನಡ ಪತ್ರಿಕಾ ರಂಗದ ಇತಿಹಾಸ ಆರಂಭ ಗೊಂಡಿದ್ದು ಮಂಗಳೂರು ಸಮಾ ಚಾರ್ ಪತ್ರಿಕೆಯ ಮೂಲಕ ಎಂದು ಪತ್ರಕರ್ತ ರಾಜು ಜಿ.ಎಚ್. ಹೇಳಿದರು. 

ಪಟ್ಟಣದ ಭಾರತೀಯ ವಿದ್ಯಾಸಂಸ್ಥೆಯಲ್ಲಿ ಶನಿವಾರ ಆಯೋಜಿಸಲಾಗಿದ್ದ ಪತ್ರಿಕಾ ದಿನಾಚರಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ  ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಪ್ರಜಾಪ್ರಭುತ್ವ ವ್ಯವಸ್ಥೆಯ ಲ್ಲಿನ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದ ಜೊತೆಯಲ್ಲಿಯೇ ಪತ್ರಿಕಾರಂಗ ಕೂಡ ನಾಲ್ಕನೇ ಅಂಗವಾಗಿ  ಪ್ರಜಾಪ್ರಭುತ್ವ ಆಶಯಗಳನ್ನು ಎತ್ತಿಹಿಡಿಯುವ ಕೆಲಸ ಮಾಡಿಕೊಂಡು ಬರುತ್ತಿದೆ,ಇಂದಿನ ದೃಶ್ಯಮಾಧ್ಯಮಗಳು, ವಾಟ್ಸ್‌ ಆಫ್‌, ಮೋಬೈಲ್‍ಗಳು, ಟ್ವಿಟರ್‍ಗಳ ಹಾವಳಿಯಲ್ಲೂ ಕೂಡ ಪತ್ರಿಕೆಗಳನ್ನು ತಮ್ಮ ಸ್ಥಾನವನ್ನು ಭದ್ರವಾಗಿಸಿಕೊಂಡು ಬರುತ್ತಿವೆ ಎಂದರೆ ಅವುಗಳ ಬದ್ದತೆ ಸುದ್ದಿಗಳ ವಾಸ್ತವಿಕತೆ, ಘಟನೆಗಳ ನಿರೂಪಣಾ ಶೈಲಿಗಳೇ ಕಾರಣವಾಗದೆ ಎಂದು ಹೇಳಿದರು. 

ಹಿರಿಯ ಪತ್ರಕರ್ತ ಎಂ.ಪಿ.ಎಂ.ವಿಜಯಾನಂದ ಸ್ವಾಮಿ ಮಾತನಾಡಿ, ಮಕ್ಕಳು ಶಾಲೆಗಳಲ್ಲಿ ಕಲಿಯುವ ಶಿಸ್ತು, ಶಿಕ್ಷಣದ ಪರಿಣಾಮ ಅವರು ಮುಂದೆ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಸಮಾಜದ ಕೊಡುಗೆಯಾಗುತ್ತಾರೆ ಎಂದು ಹೇಳಿದರು. 

ಐ.ಎ.ಎಸ್. ಐ.ಪಿ.ಎಸ್. ಐ.ಎ.ಎಸ್. ಕೆ.ಎ.ಎಸ್.ನಂತಹ ಅತ್ತ್ಯುನ್ನತ ಶಿಕ್ಷಣ ಪಡೆದು ದೊಡ್ಡ ಹುದ್ದೆಗಳಲ್ಲಿರುವ ವ್ಯಕ್ತಿಗಳು ಬಹುಪಾಲು ಪತ್ರಿಕೆಗಳನ್ನು ನಿರಂತರವಾಗಿ ಓದಿಕೊಂಡು ಬಂದವರಾಗಿರುತ್ತಾರೆ ಅವರ ಬಹುಪಾಲು ಯಶಸ್ಸಿಗೆ ಪತ್ರಿಗಳು ಕಾರಣವಾಗಿರುತ್ತವೆ ಎಂದು ಹೇಳಿದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಭಾರತೀಯ ವಿದ್ಯಾಸಂಸ್ಥೆಯ ಉಪಾಧ್ಯಕ್ಷ ಲಿಂಗಯ್ಯ ಅವರು ಸಮಾಜದಲ್ಲಿ ಪತ್ರಿಕೆಗಳ ಮಹತ್ವ ಕುರಿತು ಮಾತನಾಡಿದರು. 

ಕಾರ್ಯಕ್ರಮದಲ್ಲಿ ವಿದ್ಯಾ ಸಂಸ್ಥೆಯ ನಿರ್ದೇಶಕರುಗಳಾದ ಹಾಲೇಶ್ ಕುಂಕುವ, ಎಚ್.ಎಂ. ಅರುಣ್‍ಕು ಮಾರ್, ಜಯಪ್ಪ. ಸುರೇಶ್‍ ಶೇಟ್, ಶಾಲಾ ಮುಖ್ಯ ಶಿಕ್ಷಕ ತಿಮ್ಮೇಶ್, ಪತ್ರಕರ್ತ ಮೃತ್ಯುಂ ಜಯ ಪಾಟೀಲ್, ಸೇರಿದಂತೆ ಅನೇಕರು ಇದ್ದರು. 

ನವೋದಯ ಶಾಲೆಗೆ ಆಯ್ಕೆಯಾದ ಇದೇ ಶಾಲೆಯ ವಿದ್ಯಾರ್ಥಿ ಅಜಯ್ ಎಂಬ ವಿದ್ಯಾರ್ಥಿಯನ್ನು ಸಹ ಸನ್ಮಾನಿಸಲಾಯಿತು.

ಮುಖ್ಯ ಶಿಕ್ಷಕ ತಿಮ್ಮೇಶ್ ಸ್ವಾಗತಿಸಿದರು. ಶಿಕ್ಷಕಿ  ಶಾಯಿಸ್ತಾ ಬಾನು  ನಿರೂಪಿಸಿದರು. ಶಿಕ್ಷಕ ಸತೀಶ್ ಬಂಗೇರ  ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಗಿರೀಶ್ ನಾಡಿಗ್ ಸನ್ಮಾನಿತರ ಪರಿಚಯ ಭಾಷಣ ಮಾಡಿದರು.  ನಾಗಮ್ಮ ವಂದಿಸಿದರು.

error: Content is protected !!