ಓದಿನೊಂದಿಗೆ ಕಲೆ, ಸಾಹಿತ್ಯ, ಕ್ರೀಡೆಗಳಲ್ಲಿಯೂ ಭಾಗವಹಿಸಬೇಕು

ಓದಿನೊಂದಿಗೆ ಕಲೆ, ಸಾಹಿತ್ಯ, ಕ್ರೀಡೆಗಳಲ್ಲಿಯೂ ಭಾಗವಹಿಸಬೇಕು

ಶ್ರೀ ಜ.ಜ.ಮು. ಪ್ರೌಢಶಾಲೆ ಕ್ರೀಡಾ ಸಂಘದ ಉದ್ಘಾಟನೆಯಲ್ಲಿ ಮನೋಹರ ಚಿಗಟೇರಿ

ದಾವಣಗೆರೆ, ಜು.23- ಓದು, ಬರಹದೊಂದಿಗೆ,  ಕಲೆ ಸಾಹಿತ್ಯ ಕ್ರೀಡೆಗಳಲ್ಲಿ ಭಾಗವಹಿಸುವ ಮೂಲಕ  ಸರ್ವಾಂಗೀಣ ಅಭಿವೃದ್ಧಿ  ಸಾಧಿಸುವಂತೆ ಜಗದ್ಗುರು ಜಯವಿಭವ ವಿದ್ಯಾಸಂಸ್ಥೆ    ಕಾರ್ಯದರ್ಶಿ ಮನೋಹರ ಚಿಗಟೇರಿ  ವಿದ್ಯಾರ್ಥಿಗಳಿಗೆ ಹಿತ ನುಡಿದರು. 

ಶ್ರೀ ಜಗದ್ಗುರು ಜಯದೇವ ಮುರುಘ ರಾಜೇಂದ್ರ ಪ್ರೌಢಶಾಲೆಯ ಜಯಕಿರಣ, ಹೊಂಗಿರಣ ಕ್ರೀಡಾ ಮತ್ತು ಸಾಂಸ್ಕತಿಕ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ  ಪ್ರತಿಭಾ ಪುರಸ್ಕಾರ  ವಿತರಿಸಿ, ಅವರು ಮಾತನಾಡಿದರು. 

ಸಾಧನೆ ಸಾಧಕನ ಸ್ವತ್ತೇ ಹೊರತು ಸೋಮಾರಿಯದ್ದಲ್ಲ,  ಛಲ ಮತ್ತು ನಿರಂತರ ಪ್ರಯತ್ನದಿಂದ ಏನಾದರೂ ಸಾಧಿಸಬಹುದು  ಎಂದು ಮುಖ್ಯ ಅತಿಥಿ  ಶ್ರೀಮತಿ ಸೌಮ್ಯ ಬಸವರಾಜ ನುಡಿದರು.  ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಎನ್. ಎಂ. ಆಕಾಶ್, ಬಿ.ಸಿ. ಪಲ್ಲವಿ, ಡಿ.ಎಸ್. ಅಜಯ್  ಅವರಿಗೆ  ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.                  ಶ್ರೀಮತಿ ಎಸ್.ಎಂ. ಶೈಲಜಾ, ಆರ್.ವಾಗ್ದೇವಿ, ಎಂ.ಟಿ. ಮಳಗಿ, ಸುಚಿತ್ರ, ಸುರೇಶ ನಾಯ್ಕ್‌, ಹೆಚ್‌. ನಿಂಗಪ್ಪ   ಅತಿಥಿಗಳಾಗಿ ಆಗಮಿಸಿದ್ದರು. ಮುಖ್ಯೋಪಾಧ್ಯಾಯ ಎಸ್. ನಾಗರಾಜ್‌ ಅಧ್ಯಕ್ಷತೆ ವಹಿಸಿದ್ದರು.  ಕೆ ಹಾಲಪ್ಪ, ಶಾಂತಯ್ಯ ಪರಡಿಮಠ, ಲಿಂಗರಾಜ ಗಾಜಿ, ಶ್ವೇತಾ, ಭಾಗ್ಯಲಕ್ಷ್ಮಿ, ರುಖಯ್ಯಾಬಾನು, ಅನಿತ, ನಾಗವೇಣಿ ಗೀತಾಬಾಯಿ ಉಪಸ್ಥಿತರಿದ್ದರು. ಹೆಚ್.ಬಿ.ಜ್ಯೋತಿ ಸ್ವಾಗತಿಸಿದರು, ಕೆ.ಪಿ.ರುದ್ರೇಶ್ ಮೂರ್ತಿ ವಂದಿಸಿದರು,  ಜಿ. ಎಂ. ಪ್ರಭುದೇವ ನಿರೂಪಿಸಿದರು.

error: Content is protected !!