ದಾವಣಗೆರೆ, ಜು. 23- ನಗರದ ಮಹಾಲಕ್ಷ್ಮಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್‌ನ ಅಧ್ಯಕ್ಷರಾಗಿದ್ದ ಎ. ಆರ್. ಉಜ್ಜನಪ್ಪ ಅವರ ಅಕಾಲಿಕ ನಿಧನಕ್ಕೆ ಸಂಘದ ಕಾರ್ಯಾಲಯದಲ್ಲಿ ಸಂತಾಪ ಸೂಚಿಸಲಾಯಿತು.
ಸಂಘದ ಉಪಾಧ್ಯಕ್ಷ ಹೆಚ್.ಡಿ. ಪ್ರಭುದೇವ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂತಾಪ ಸಭೆಯಲ್ಲಿ ಮೃತರ ಆತ್ಮಕ್ಕೆ ಶಾಂತಿ ಕೋರಿ, ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿಯನ್ನು ಭಗವಂತನು ಕರುಣಿಸಲಿ ಎಂದು ಮೌನಾಚರಣೆಯೊಂದಿಗೆ ಪ್ರಾರ್ಥಿಸಲಾಯಿತು.
ಸಭೆಯಲ್ಲಿ ನಿರ್ದೇಶಕರುಗಳಾದ ಕೆ.ಎನ್. ಶಿವಲಿಂಗಪ್ಪ ಬಾಡ, ಎ.ಪಿ. ಷಡಾಕ್ಷರಪ್ಪ, ಬಿ.ಬಿ. ರಾಮಚಂದ್ರ, ಬಾಳೆಹೊಲದ ಸಿದ್ದಣ್ಣ, ಸಿ. ಸುಭಾಷ್, ಟಿ.ಎಂ.ಮುರುಗೇಂದ್ರಯ್ಯ, ಕೆ.ಎಂ. ಮಮತ ವಿಶ್ವನಾಥ, ಕೆ.ವಿ. ನೇತ್ರಾವತಿ ಗುರುಮೂರ್ತಿ, ವಿಶೇಷ ಆಹ್ವಾನಿತರಾದ ಹೆಚ್.ಎಸ್. ಬಸವಂತಪ್ಪ, ಕಾರ್ಯದರ್ಶಿ ಎಸ್. ಬಸವರಾಜ್, ಸಿಬ್ಬಂದಿ ಚಂದ್ರಕಾಂತ್ ಹೆಚ್.ಪಿ.ಜಿ., ಫಿಲೋಮಿನ ಮೇರಿ ಹಾಗೂ ಎಸ್. ಅಶೋಕ್ ಉಪಸ್ಥಿತರಿದ್ದರು.