ಹರಪನಹಳ್ಳಿ, ಜು.21- ವಿದ್ಯುತ್ ಅವಘಡದಿಂದ ಎಮ್ಮೆ ಹಾಗೂ ಹಸುಗಳು ಸಾವನ್ನಪ್ಪಿರುವ ಘಟನೆ ಪಟ್ಟಣದ ಅಯ್ಯನಕೇರಿ ಬಳಿ ಜರುಗಿದೆ.
ಪಟ್ಟಣದ ಗೌಳಿ ನಾಗಪ್ಪನವರಿಗೆ ಸೇರಿದ ಗೋಡಾಮಿನಲ್ಲಿ ಶುಕ್ರವಾರ ತಡ ರಾತ್ರಿ ವಿದ್ಯುತ್ ಅವಘಡದಿಂದ 6 ಎಮ್ಮೆ ಹಾಗೂ 2 ಹಸುಗಳು ಸಾವನ್ನಪ್ಪಿ, ಉಳಿದಂತೆ ಹತ್ತಾರು ಎಮ್ಮೆಗಳಿಗೆ ಗಾಯಗಳಿಗಿವೆ. ಈ ಕುರಿತು ಹರಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನಾ ಸ್ಥಳಕ್ಕೆ ತಹಶೀಲ್ದಾರ್ ಶಿವಕುಮಾರ್ ಬಿರಾದಾರ್, ಮುಖಂಡರಾದ ಶಶಿದರ ಪೂಜಾರ್, ಆಲದಹಳ್ಳಿ ಷಣ್ಮುಖಪ್ಪ ಭೇಟಿ ನೀಡಿ, ಗೌಳಿ ನಾಗಪ್ಪನವರ ಕುಟುಂಬದವರಿಗೆ ಸ್ವಾಂತನ ಹೇಳಿದರು.