ಪೌರಕಾರ್ಮಿಕರು ಸರ್ಕಾರಿ ಸೌಲಭ್ಯ ಸದುಪಯೋಗ ಪಡಿಸಿಕೊಳ್ಳಬೇಕು

ಪೌರಕಾರ್ಮಿಕರು ಸರ್ಕಾರಿ ಸೌಲಭ್ಯ ಸದುಪಯೋಗ ಪಡಿಸಿಕೊಳ್ಳಬೇಕು

ಅಗತ್ಯ ವಸ್ತುಗಳ ವಿತರಣೆ ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ನಿಂಬಕ್ಕ ಕರೆ

ಹರಿಹರ, ಜು.19- ಪೌರ ಕಾರ್ಮಿಕರಿಗೆ ಸರ್ಕಾರ ಒದಗಿಸುವ ಅಗತ್ಯ ವಸ್ತುಗಳನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಳ್ಳುವ ಮೂಲಕ ತಮ್ಮ ಆರೋಗ್ಯದ ಕಡೆಗೆ ಗಮನ ಹರಿಸಿಕೊಳ್ಳುವಂತೆ ನಗರಸಭೆ ಅಧ್ಯಕ್ಷೆ ನಿಂಬಕ್ಕ ಚಂದಾಪೂರ್ ಹೇಳಿದರು.

ನಗರಸಭೆ ಸಭಾಂಗಣದಲ್ಲಿ  108 ಪೌರ ಕಾರ್ಮಿಕರಿಗೆ ಬಟ್ಟೆ, ಶೂ, ಸಾಕ್ಸ್, ಹೆಲ್ಮೆಟ್, ಹ್ಯಾಂಡ್ ಗ್ಲೋಸ್, ಜರ್ಕಿನ್, ಕೋಟ್ ಇನ್ನಿತರೆ ಅಗತ್ಯ ವಸ್ತುಗ ಳನ್ನು ವಿತರಣೆ ಮಾಡಿ ಅವರು ಮಾತನಾಡಿದರು.

ಪೌರ ಕಾರ್ಮಿಕರು ಮಾಡುವಂತಹ ಕೆಲಸ  ಬಹಳಷ್ಟು ಶ್ಲಾಘನೀಯವಾದುದು,   ಅವರ ಆರೋಗ್ಯ ಸದೃಢವಾಗಿ ಇದ್ದರೆ ನಗರ ಸ್ವಚ್ಚತೆ ಯೂ ಸದೃಢವಾಗಿ ನಡೆಯುತ್ತದೆ. ಹಾಗಾಗಿ ಅವರಿಗೆ ಸರ್ಕಾರ ಹಲವಾರು ಯೋಜನೆಯ ರೂಪದಲ್ಲಿ ಸಾಕಷ್ಟು ಸೌಲಭ್ಯಗಳನ್ನು ಒದಗಿಸುತ್ತದೆ. ಅದನ್ನು ಸರಿಯಾದ ರೀತಿಯಲ್ಲಿ ಸದ್ಬಳಕೆ ಮಾಡಿಕೊಂಡು ಉತ್ತಮ ರೀತಿಯಲ್ಲಿ ಕೆಲಸವನ್ನು ನಿರ್ವಹಿಸುವಂತೆ ಹೇಳಿದರು.

ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷ ಕೆ.ಜಿ. ಸಿದ್ದೇಶ್, ಸದಸ್ಯರಾದ ಎಸ್.ಎಂ. ವಸಂತ್, ಪಿ.ಎನ್. ವಿರೂಪಾಕ್ಷಪ್ಪ, ರಜನಿಕಾಂತ್, ಹನುಮಂತಪ್ಪ, ಅಬ್ದುಲ್ ಅಲಿಂ, ಆರೋಗ್ಯ ಅಧಿಕಾರಿ ರವಿಪ್ರಕಾಶ್, ಜಗದೀಶ್, ಪೌರ ಕಾರ್ಮಿಕರ ಸಂಘದ ಜಿಲ್ಲಾ ಅಧ್ಯಕ್ಷ ರಮೇಶ್, ನಗರ ಅಧ್ಯಕ್ಷ ಸದಾಶಿವ ಪೈಲ್ವಾನ್, ಜೆಡಿಎಸ್ ಪಕ್ಷದ ಮುಖಂಡ ಸುರೇಶ್ ಚಂದಪೂರ್, ಪೌರ ಕಾರ್ಮಿಕರಾದ ವೀಣಾ, ಲತಾ, ಮಮತಾ ರವಿಕುಮಾರ್, ಆಂಜನೇಯ, ಇತರರು ಹಾಜರಿದ್ದರು.

error: Content is protected !!