ಗುರುಕುಲ ಮಾರ್ಷಲ್‌ ಕರಾಟೆ ಪಟುಗಳ ಸಾಧನೆ

ಗುರುಕುಲ ಮಾರ್ಷಲ್‌ ಕರಾಟೆ ಪಟುಗಳ ಸಾಧನೆ

ದಾವಣಗೆರೆ, ಜು.17- ಗದಗದಲ್ಲಿ ನಡೆದ ರಾಜ್ಯಮಟ್ಟದ ಓಪನ್ ಕರಾಟೆ ಚಾಂಪಿಯನ್‌ ಶಿಫ್ ಪಂದ್ಯಾವಳಿಯಲ್ಲಿ ನಗರದ ಗುರುಕುಲ ಮಾರ್ಷಲ್ಸ್ ಆರ್ಟ್ಸ್ ಅಂಡ್  ಸೆಲ್ಫ್ ಡಿಫೆನ್ಸ್ ಅಕಾಡೆಮಿ ಕರಾಟೆ ಪಟುಗಳು ಉತ್ತಮ ಸಾಧನೆ ಮಾಡಿದ್ದಾರೆ.

ಲಯನ್ಸ್ ಕ್ಲಬ್ ಶಾಲೆ ಹಾಗೂ ದೇವರಾಜ ಅರಸು ಬಡಾವಣೆಯ ಸ್ವೀಮ್ಮಿಂಗ್ ಪೂಲ್ ಆವರಣದಲ್ಲಿ ಅಭ್ಯಾಸ ಮಾಡುತ್ತಿರುವ  ಗುರುಕುಲ ಸಂಸ್ಥೆಯ ಕರಾಟೆ ಪಟುಗಳು ಭಾಗವಹಿಸಿ ವಿಜೇತರಾಗಿರುತ್ತಾರೆ.

ಬಾಲಕಿಯರ 8 ವರ್ಷದೊಳಗಿನ ವಿಭಾಗದಲ್ಲಿ ತೇಜಸ್ವಿನಿ ಎಂ. ಸಜ್ಜನ್, ಕುಮಿತೆ ವಿಭಾಗದಲ್ಲಿ ದ್ವಿತೀಯ ಸ್ಥಾನ, ಕಟಾ ವಿಭಾಗದಲ್ಲಿ ದ್ವಿತೀಯ ಸ್ಥಾನ. 10 ವರ್ಷದೊಳಗಿನ ವಿಭಾಗದಲ್ಲಿ ಕೀರ್ತನಾ ಎಂ.ಎಸ್  ಕಟಾ ವಿಭಾಗದಲ್ಲಿ ದ್ವಿತೀಯ ಸ್ಥಾನ. 11 ವರ್ಷದೊಳಗಿನ ವಿಭಾಗದಲ್ಲಿ ಕಾವ್ಯ ಎಸ್. ಕುಮಿತೆ  ದ್ವಿತೀಯ, ಕಟಾ ತೃತೀಯ ಸ್ಥಾನ. 14 ವರ್ಷದೊಳಗಿನ ವಿಭಾಗದಲ್ಲಿ ತನುಜಾ ಎಲ್  ಕುಮಿತೆ   ಪ್ರಥಮ, ಕಟಾ ತೃತೀಯ ಸ್ಥಾನ. ವರ್ಷಿಣಿ  ಕಟಾ  ದ್ವಿತೀಯ, ಕುಮಿತೆ  ತೃತೀಯ ಸ್ಥಾನ. 15 ವರ್ಷದೊಳಗಿನ ವಿಭಾಗದಲ್ಲಿ ಕಾವ್ಯ ಹೆಚ್. ಕುಮಿತೆ   ಪ್ರಥಮ, ಕಟಾ ತೃತೀಯ ಸ್ಥಾನ. 16 ವರ್ಷದೊಳಗಿನ ವಿಭಾಗದಲ್ಲಿ ಪ್ರೇಮಾ ಹೆಚ್.ವಿ.  ಕುಮಿತೆ ತೃತೀಯ, ಕಟಾ ತೃತೀಯ ಸ್ಥಾನ ಪಡೆದಿರುತ್ತಾರೆ.

ಬಾಲಕರ 8 ವರ್ಷದೊಳಗಿನ ವಿಭಾಗದಲ್ಲಿ ಮೊಹಮ್ಮದ್ ಜಹೀರ್  ಕುಮಿತೆ ವಿಭಾಗದಲ್ಲಿ ಪ್ರಥಮ ಸ್ಥಾನ, ಕಟಾ ವಿಭಾಗದಲ್ಲಿ ದ್ವಿತೀಯ ಸ್ಥಾನ. 12 ವರ್ಷದೊಳಗಿನ ವಿಭಾಗದಲ್ಲಿ ಪ್ರಜನ್ಯಕುಮಾರ್ ವಿ.ಪಿ. ಕಟಾ ವಿಭಾಗದಲ್ಲಿ ಪ್ರಥಮ, ಕುಮಿತೆ ತೃತೀಯ ಸ್ಥಾನ. 13 ವರ್ಷದೊಳಗಿನ ವಿಭಾಗದಲ್ಲಿ ಮಹಮ್ಮದ್ ಅಶ್ಲಾಕ್  ಕಟಾ ತೃತೀಯ. ಯಶವಂತಕುಮಾರ್ ಕಟಾ ವಿಭಾಗದಲ್ಲಿ ತೃತೀಯ ಸ್ಥಾನ. ಶ್ರೇಯಸ್ ಎಸ್  ಕಟಾ ವಿಭಾಗದಲ್ಲಿ ತೃತೀಯ, ಕುಮಿತೆ ತೃತೀಯ ಸ್ಥಾನ. 14 ವರ್ಷದೊಳಗಿನ ವಿಭಾಗದಲ್ಲಿ ನಾಗರಾಜ್ ಆರ್.ಕೆ   ಕುಮಿತೆ  ದ್ವಿತೀಯ ಸ್ಥಾನ, ಕಟಾ  ತೃತೀಯ ಸ್ಥಾನ. 15 ವರ್ಷದೊಳಗಿನ ವಿಭಾಗದಲ್ಲಿ ತೇಜಸ್ ಎಸ್. ಅಧಿಕಾರಿ  ಕುಮಿತೆ  ಪ್ರಥಮ, ಕಟಾ ದ್ವಿತೀಯ ಸ್ಥಾನ. ಸಾಯಿ ಗೌತಮ್ ಕೆ.ಬಿ  ಕುಮಿತೆ   ತೃತೀಯ ಸ್ಥಾನ, ಕಟಾ ತೃತೀಯ ಸ್ಥಾನ ಗಳಿಸಿರುತ್ತಾರೆ.  

ವಿಜೇತ ಕರಾಟೆ ಪಟುಗಳನ್ನು  ಸಂಸ್ಥೆಯ ಗೌರವಾಧ್ಯಕ್ಷ  ಕೆ.ಜೆ. ಯಲ್ಲಪ್ಪ, ಅಧ್ಯಕ್ಷ  ಉಮರ್ ಫಾರೂಖ್, ಮುಖ್ಯ ತರಬೇತುದಾರ  ಅಬ್ದುಲ್ ಇಮ್ರಾನ್, ಸಹ ತರಬೇತುದಾರ  ವೆಂಕಟೇಶ್ ಎನ್.,  ತಂತೋಷ್ ಹಾಗೂ ಕೃಷ್ಣ ಅಭಿನಂದಿಸಿದ್ದಾರೆ.

error: Content is protected !!