ದಾವಣಗೆರೆ, ಜು. 17- ಎಸ್.ಎಸ್.ಕೇರ್ ಟ್ರಸ್ಟ್, ಜೆಜೆಎಂ ಮೆಡಿಕಲ್ ಕಾಲೇಜು ಹಾಗೂ ಬಾಪೂಜಿ ಆಸ್ಪತ್ರೆ ವತಿಯಿಂದ ಮಹಿಳೆಯರಿಗೆ ಸ್ತನ ಕ್ಯಾನ್ಸರ್ ಹಾಗೂ ಗರ್ಭಕೋಶ ಕ್ಯಾನ್ಸರ್ ಸಂಬಂಧಪಟ್ಟಂತೆ ಉಚಿತ ತಪಾಸಣಾ ಶಿಬಿರವನ್ನು ನಗರದ ಡಾ. ಸದ್ಯೋಜಾತ ಸ್ವಾಮೀಜಿ ಹಿರೇಮಠದಲ್ಲಿ ಹಮ್ಮಿಕೊಳ್ಳ ಲಾಗಿತ್ತು. ಕಾರ್ಯಕ್ರಮವನ್ನು ಬಾಪೂಜಿ ವಿದ್ಯಾಸಂಸ್ಥೆ ಸದಸ್ಯೆ ಡಾ. ಪ್ರಭಾ ಮಲ್ಲಿಕಾರ್ಜುನ್ ಉದ್ಘಾಟಿಸಿದರು. ಡಾ. ಅನುರೂಪ, ಡಾ.ನಿತಿನ್, ಸ್ನೇಹ ಮಹಿಳಾ ಮಂಡಳಿ ಅಧ್ಯಕ್ಷೆ ಮಂಜುಳಾ ಬಸವಲಿಂಗಪ್ಪ, ಗೌರವಾಧ್ಯಕ್ಷೆ ಮಂಜುಳಾ ನಿಂಗಪ್ಪ ಮತ್ತಿತರರು ಭಾಗವಹಿಸಿದ್ದರು.
January 23, 2025