ರಾಣೇಬೆನ್ನೂರು, ಜು-17- ಇಡೀ ಕರ್ನಾಟಕದ ಹೋಬಳಿ ಮಟ್ಟದಲ್ಲಿ ಹ್ಯಾಂಡ್‍ಬಾಲ್ ಕ್ರೀಡೆಯ ಬಗ್ಗೆ ಅರಿವು ಮೂಡಿಸಿ, ಹೆಚ್ಚಿನ ಯುವಜನರನ್ನು ಆಕರ್ಷಿಸಿ, ಕ್ರೀಡಾಸಕ್ತರನ್ನು ಹ್ಯಾಂಡ್‍ಬಾಲ್ ಕ್ರೀಡೆಯಲ್ಲಿ ಬೆಳೆಸು ವುದು ಹಾಗೂ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟ ದಲ್ಲಿ ಕರ್ನಾಟಕ ರಾಜ್ಯದ ಹಿರಿಮೆಯನ್ನು ಎತ್ತರಕ್ಕೇ ರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ರಾಣೇಬೆನ್ನೂರಿನ ಎಲುಬು ಹಾಗೂ ಮೂಳೆ ಶಸ್ತ್ರ ಚಿಕಿತ್ಸಕರು ಹಾಗೂ ಕ್ರೀಡಾಭಿಮಾನಿಯೂ ಆದ ಡಾ. ಮನೋಜ ಪಿ.ಸಾವಕಾರ ಹೇಳಿದರು.
ಇಲ್ಲಿನ ಓಂ ಪಬ್ಲಿಕ್ ಶಾಲೆಯ ಕ್ಯಾಂಪಸ್‍ನಲ್ಲಿ ನಿನ್ನೆ ನಡೆದ ರಾಜ್ಯ ಕರ್ನಾಟಕ ಹ್ಯಾಂಡ್‍ಬಾಲ್ ಅಸೋಸಿಯೇಷನ್ ಚುನಾವಣೆಯಲ್ಲಿ 2023-27ರ ಅವಧಿಗೆ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಕಾರ್ಯದರ್ಶಿ ಬಿ.ಎಲ್.ಲೋಕೇಶ್ ಮಾತನಾಡಿ, ರಾಜ್ಯದಲ್ಲಿ ಹ್ಯಾಂಡ್‍ಬಾಲ್ ಆಟವನ್ನು ಜನಪ್ರಿಯಗೊಳಿಸಲಾಗುವುದು ಎಂದರು. ಕೇವಲ ರಾಜಧಾನಿ ಬೆಂಗಳೂರಿನಲ್ಲೇ ನಡೆಯುತ್ತಿದ್ದ ರಾಜ್ಯ ಕರ್ನಾಟಕ ಹ್ಯಾಂಡ್‍ಬಾಲ್ ಅಸೋಸಿಯೇಷನ್ ಚುನಾವಣೆ ಈ ಸಲ ರಾಣೇಬೆನ್ನೂರಿನಲ್ಲಿ ನಡೆದಿದ್ದು ಕೂಡ ಮೈಲಿಗಲ್ಲು ಎಂದರು.
ಅವಿರೋಧವಾಗಿ ಆಯ್ಕೆ ಯಾದ ಪದಾಧಿಕಾರಿಗಳ ಪಟ್ಟಿ ಹೀಗಿದೆ. ಕಾರ್ಯದರ್ಶಿ ನ್ಯಾಯ ವಾದಿ ಹಾಗೂ ಹ್ಯಾಂಡ್‍ಬಾಲ್ ಆಟಗಾರ ಬಿ.ಎಲ್.ಲೋಕೇಶ್, ಖಜಾಂಚಿಯಾಗಿ ರಾಷ್ಟ್ರಮಟ್ಟದ ಆಟಗಾರರಾದ ಪ್ರಕಾಶ್ ಎಲ್.ನರಗಟ್ಟಿ, ಹಿರಿಯ ಉಪಾಧ್ಯಕ್ಷರಾಗಿ ಕೆ.ಎಚ್.ಶಿವರಾಮ, ಉಪಾಧ್ಯಕ್ಷರುಗಳಾಗಿ ವಿನೋದ ಎಸ್., ಡಾ. ಧನರಾಜ್ ಆರ್., ಮೋಹನಕುಮಾರ್ ಟಿ., ರವೀಂದ್ರ ಬಸಗೌಡ ಬಿರಾದಾರ, ಜಂಟಿ ಕಾರ್ಯದರ್ಶಿಗಳಾಗಿ ಡಾ. ಕೆ.ರಾಘವೇಂದ್ರ, ಹೇಮೋಧರ, ಶ್ರೀನಿವಾಸ ಎಸ್.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಲೋಕೇಶ್ವರನ್ ಪಿ.ಎಸ್., ಡಾ. ಹರೀಶ್ ಆರ್. ವೆಂಕಟೇಶ್ ವಿ., ಪ್ರೇಮಾನಂದ ಸಿ.ಎಸ್., ಮಹೇಶ್ ಎಂ.ಎನ್., ಶ್ರೀಮತಿ ತಾರಾ ಆರ್. ಅರಗಮ್ ಆಯ್ಕೆಯಾದರು.
ಡಾ. ರಾಘವೇಂದ್ರ ಕೆ. ಸ್ವಾಗತಿಸಿದರು. ಕಾರ್ಯದರ್ಶಿ ಬಿ.ಎಲ್. ಲೋಕೇಶ್ ಅವರು ಸಭೆಗೆ 2022-23ನೇ ಸಾಲಿನ ವರದಿ ಸಲ್ಲಿಸಿದರು. ಕೆ.ಎಚ್. ಶಿವರಾಮ ವಂದಿಸಿದರು.
ಚುನಾವಣಾಧಿಕಾರಿಗಳಾದ ಹೆಚ್. ಮಹೇಶ್, ಇಸ್ಮಾಯಿಲ್ ಹುಸೇನ್, ವಿ.ಶಶಿರಾವ್, ಛಾಯ ಕುಮಾರ, ಚುನಾವಣಾ ವೀಕ್ಷಕರಾಗಿ ಕರ್ನಾಟಕ ಓಲಂಪಿಕ್ಸ್ ಅಸೋಸಿಯೇಷನ್ ಉಪಾಧ್ಯಕ್ಷರಾದ ಸಿ.ಜಿ. ಶಶಿವರ್ಧನ್, ಹ್ಯಾಂಡ್‍ಬಾಲ್ ಅಸೋಸಿಯೇಷನ್ ಆಫ್ ಇಂಡಿಯಾದ ಎಂ.ಶಿವಕುಮಾರ ಉಪಸ್ಥಿತರಿದ್ದರು.