ಹೂವಿನಹಡಗಲಿ, ಜು.17- ಪಟ್ಟಣದ ಮಹಾವೀರ ಅಲ್ಪಸಂಖ್ಯಾತರ ಪತ್ತಿನ ಸಹಕಾರ ಸಂಘದ ರಜತ ಮಹೋತ್ಸವ ಮತ್ತು ಮಹಾವೀರ ಭವನದ ಉದ್ಘಾಟನಾ ಸಮಾರಂಭವು ನಿನ್ನೆ ಜರುಗಿತು.
ಸಮಾರಂಭದಲ್ಲಿ ಮಾತನಾಡಿದ ಶಾಸಕ ಕೃಷ್ಣ ನಾಯಕ್, ನಿವೇಶನದ ಲಭ್ಯತೆ ಇದ್ದರೆ, ಜೈನ ಸಮಾಜಕ್ಕೆ ಸಮುದಾಯ ಭವನ ನಿರ್ಮಿಸಿ ಕೊಡಲಾಗುವುದು ಎಂದು ಭರವಸೆ ನೀಡಿದರು.
ಎಸ್.ಜಿ.ಜೋಶಿ, ಎಂ.ಪಿ. ಸುಮಾ, ಯಶೋಧರ ಗೌಡ ಮತ್ತಿತರರು ಮಾತನಾಡಿದರು. ಸಾನ್ನಿಧ್ಯವನ್ನು ಶ್ರೀ ಡಾ. ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ವರ್ಯ ಮಹಾ ಸ್ವಾಮೀಜಿ ವಹಿಸಿದ್ದರು.
ಸ್ಥಳೀಯ ಗವಿ ಮಠದ ಶ್ರೀ ಡಾ. ಹಿರಿ ಶಾಂತವೀರ ಮಹಾಸ್ವಾ ಮಿಗಳು ಆಶೀರ್ವಚನ ನೀಡಿದರು. ಬ್ಯಾಂಕಿನ ಅಧ್ಯಕ್ಷ ಮಂಜುನಾಥ್ ಜೈನ ಪ್ರಾಸ್ತಾವಿಕವಾಗಿ ಮಾತನಾಡಿದರು. ದ್ವಾರಕೀಶ ರೆಡ್ಡಿ ನಿರೂಪಿಸಿ, ಪ್ರಕಾಶ್ ಜೈನ್ ಮತ್ತು ಸಂಗಡಿಗರು ಪ್ರಾರ್ಥನೆ ಗೈದರು. ವೇದಿಕೆಯಲ್ಲಿ ಮೂಡಬಿದ್ರೆಯ ಮುನಿರಾಜ್ ರೇಂಜಾಳ, ವಿಜಯಕುಮಾರ್ ಜೈನ್ ಮತ್ತಿತರರು ಉಪಸ್ಥಿತರಿದ್ದರು. ಸಂತೋಷ್ ಜೈನ್ ಸೇರಿದಂತೆ ಬ್ಯಾಂಕಿನ ಎಲ್ಲಾ ನಿರ್ದೇಶಕರನ್ನು ಸನ್ಮಾನಿಸಿ ಗೌರವಿಸಲಾಯಿತು.