ದಾವಣಗೆರೆ, ಜು. 17- ಶ್ರೀ ಶಂಕರ ಸೇವಾ ಸಂಘದ ಸರ್ವ ಸದಸ್ಯರ ಸಾಮಾನ್ಯ ಸಭೆಯು ಈಚೆಗೆ ಶ್ರೀ ಶಂಕರ ಸಮುದಾಯ ಭವನದಲ್ಲಿ ನಡೆಯಿತು.ಸಂಘದ ಅಧ್ಯಕ್ಷ ಡಾ. ಬಿ.ಟಿ. ಅಚ್ಯುತ್ ಸಭೆಯ ಅಧ್ಯಕ್ಷತೆ ವಹಿಸಿ ಮುಂದಿನ ಸಾಲಿನಲ್ಲಿ ನಡೆಸಲಾಗುವ ಕಾರ್ಯಕ್ರಮದ ರೂಪುರೇಷೆಗಳನ್ನು ಸಭೆಯ ಗಮನಕ್ಕೆ ತಂದರು.
2022-23ನೇ ಸಾಲಿನ ಖರ್ಚು ವೆಚ್ಚದ ವಿವರನ್ನು ಲೆಕ್ಕ ಪರಿಶೋಧಕ ವಿನಾಯಕ್ ಜೋಷಿ ಮಂಡಿಸಿದರು. ಹಿರಿಯ ಪತ್ರಕರ್ತ ಹೆಚ್.ಬಿ. ಮಂಜುನಾಥ್ ಸಲಹೆ, ಸೂಚನೆ ನೀಡಿದರು.
ಸಂಸ್ಥೆಯ ಉಪಾಧ್ಯಕ್ಷರಾದ ಮೋತಿ ಸುಬ್ರಹ್ಮಣ್ಯ, ಗಿರೀಶ್ ನಾಡಿಗ್, ಕಾರ್ಯದರ್ಶಿ ಶ್ರೀನಿವಾಸ ಜೋಶಿ, ತಾಲ್ಲೂಕು ಬ್ರಾಹ್ಮಣ ಸಮಾಜದ ಅಧ್ಯಕ್ಷ ಡಾ. ಎಂ.ಸಿ. ಶಶಿಕಾಂತ್, ಸದಸ್ಯರಾದ ಬಾಲಕೃಷ್ಣ ವೈದ್ಯ, ಎಸ್.ಜೆ. ಶ್ರೀಧರ್, ಅನಿಲ್ ಬಾರೆಂಗಳ್, ರಮೇಶ್ ಪಾಟೀಲ್, ಶ್ರೀಮತಿ ನಳಿನಿ ಅಚ್ಯುತ್ ಉಪಸ್ಥಿತರಿದ್ದರು. ಸುಬ್ರಹ್ಮಣ್ಯ (ಮಂಡಕ್ಕಿ) ಸ್ವಾಗತಿಸಿದರು. ಸತ್ಯನಾರಾಯಣ ವಂದಿಸಿದರು.