ಹರಿಹರ : ಕೆ.ಹೆಚ್‌.ಬಿ. ಕಾಲೋನಿಯಲ್ಲಿ ಗ್ರಂಥಾಲಯ ದಿನಾಚರಣೆ

ಹರಿಹರ : ಕೆ.ಹೆಚ್‌.ಬಿ. ಕಾಲೋನಿಯಲ್ಲಿ ಗ್ರಂಥಾಲಯ ದಿನಾಚರಣೆ

ಹರಿಹರ, ಜು. 13-  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನಗರದ ಹೊರ ವಲಯದ  ಕೆ. ಆರ್. ನಗರದ ಕೆ.ಎಚ್.ಬಿ ಕಾಲೋನಿಯ ಸಾಯಿಬಾಬಾ ದೇವಸ್ಥಾನದಲ್ಲಿ `ನಾನು ಓದಿದ ಪುಸ್ತಕ’ದ  ವಿಮರ್ಶೆ ಮತ್ತು ಗ್ರಂಥಾಲಯ ದಿನ ಆಚರಣೆ ಮಾಡಲಾಯಿತು.

ಮೊಬೈಲ್ ನ ಅತಿಯಾದ ಬಳಕೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ತಿಳಿಸುವ ಮೂಲಕ ಪುಸ್ತಕ ಓದುವ ಹವ್ಯಾಸವನ್ನು ಬೆಳೆಸಿಕೊಳ್ಳುವ ಬಗ್ಗೆ   ಗ್ರಾಮೀಣ ಮಹಿಳೆಯರಿಗೆ ತಿಳುವಳಿಕೆ ಮೂಡಿಸಲಾಯಿತು. 

ಕ್ಷೇತ್ರ ಯೋಜನಾಧಿಕಾರಿ  ಗಣಪತಿ ಮಾಳಂಜಿ ಅವರು ಮಾತನಾಡಿ, ಮಾತೃಶ್ರೀ ಡಾ. ಹೇಮಾವತಿ ವಿ. ಹೆಗ್ಡೆಯವರ ಅಧ್ಯಕ್ಷತೆಯಲ್ಲಿ ಮಾಡುವ ಈ  ಜ್ಞಾನವಿಕಾಸ ಕಾರ್ಯಕ್ರಮವು ಮಹಿಳೆಯರ ಬಾಳಿಗೆ ಬೆಳಕೆಂದೇ ಹೇಳಬಹುದು ಅಲ್ಲದೇ    ಮಹಿಳೆಯರು ಸ್ವ-ಉದ್ಯೋಗದಲ್ಲಿ ತಮ್ಮನ್ನು   ತೊಡಗಿಸಿಕೊಳ್ಳ ಬೇಕೆಂದು ತಿಳಿಸಿದರು.

ಕೆ.ಆರ್. ನಗರದ ಮೇಲ್ವಿಚಾರಕರಾದ  ಮೃತ್ಯುಂಜಯ, ಮಹೇಶ್ ಮತ್ತಿಹಳ್ಳಿ,  ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆ  ಪರಮೇಶ್ವರಪ್ಪ, ಕೆ. ಹೆಚ್. ಬಿ.  ಕಾಲೋನಿ  ಜ್ಞಾನವಿಕಾಸ ಸಮನ್ವಯ ಅಧಿಕಾರಿ ಭಾರತಿ, ಸೇವಾ ಪ್ರತಿನಿಧಿ ಪ್ರೇಮಲೀಲಾ ಶಿರದಹಳ್ಳಿ, ರೂಪಾ,  ಉಪಸ್ಥಿತರಿದ್ದರು.  ಕವಿತಾ ಎಸ್. ಪೇಟೆಮಠ ನಿರೂಪಿಸಿದರು.  ಧನ್ಯ  ಸ್ವಾಗತಿಸಿದರು. ರೂಪ  ವಂದಿಸಿದರು.

error: Content is protected !!