ರಾಣೇಬೆನ್ನೂರಿನ ಲೋಕ ಅದಾಲತ್ ನಲ್ಲಿ 704 ಬಾಕಿ ಪ್ರಕರಣಗಳು ಇತ್ಯರ್ಥ

ರಾಣೇಬೆನ್ನೂರಿನ ಲೋಕ ಅದಾಲತ್ ನಲ್ಲಿ 704 ಬಾಕಿ ಪ್ರಕರಣಗಳು ಇತ್ಯರ್ಥ

ರಾಣೇಬೆನ್ನೂರು, ಜು. 13- ಇತ್ತೀಚೆಗೆ ನಡೆದ ರಾಷ್ಟ್ರೀಯ ಲೋಕ ಅದಾಲತ್ ನಲ್ಲಿ ಇಲ್ಲಿನ ವಿವಿಧ ನ್ಯಾಯಾಲಯಗಳಲ್ಲಿ ಇತ್ಯರ್ಥಕ್ಕೆ ಬಾಕಿ ಇದ್ದ 1216 ಪ್ರಕರಣಗಳಲ್ಲಿ 704 ಪ್ರಕರಣಗಳನ್ನು ಇತ್ಯರ್ಥ ಪಡಿಸಿ ತೀರ್ಪು ನೀಡಲಾಗಿದೆ.     

ಮೋಟಾರ್ ವಾಹನ ಕಾಯ್ದೆಗೆ ಸಂಬಂಧಿಸಿದ 162, ಪ್ರಧಾನ ಹಿರಿಯ ದಿವಾಣಿ ನ್ಯಾಯಾಲಯದಲ್ಲಿ 1 ಕೌಟುಂಬಿಕ ಕಲಹ ಪ್ರಕರಣ,  2 ಕ್ರಿಮಿನಲ್‌ ಮಿಸ್ಲೇನಿಯಸ್ ಪ್ರಕರಣಗಳು, 2 ಹೆಚ್ಚುವರಿ ಹಿರಿಯ ದಿವಾಣಿ ನ್ಯಾಯಾಲಯದಲ್ಲಿ 1 ಕೌಟುಂಬಿಕ ಕಲಹದ ಪ್ರಕರಣಗಳನ್ನು  ರಾಜೀ ಸಂಧಾನದ ಮೂಲಕ  ಬಗೆ ಹರಿಸಿದ್ದರಿಂದ ನಾಲ್ವರು ದಂಪತಿಗಳು ಇಂದು ಒಂದಾಗಿದ್ದು, ಅವರ ಕುಟುಂಬದಲ್ಲೀಗ ಮೊದಲಿನ ಸಂಭ್ರಮ, ಸಡಗರ ಮರುಕಳಿಸಿರ ಬಹುದು ಎನ್ನಲಾಗಿದೆ.

ಇದೇ ಸಂದರ್ಭದಲ್ಲಿ ಲೋಕ ಅದಾಲತ್‌ ಬಗ್ಗೆ ಅರಿಯಲು ಬಂದಿದ್ದ ಕಾಯ್ದೆ ಕಾಲೇಜಿನ 20 ವಿದ್ಯಾರ್ಥಿಗಳಿಗೆ ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶರಾದ ವೈ.ಎಲ್. ಲಾಡ್ ಖಾನ್ ಅದಾಲತ್‌ನ ಕಾರ್ಯ ವಿಧಾನ, ಅದರ ಮಹತ್ವ ಹಾಗೂ  ಜನತೆಗೆ ಆಗುವ ಉಪಯುಕ್ತತೆ ಬಗ್ಗೆ ವಿವರಿಸಿದರು.

error: Content is protected !!