ಒಂದು ಜೀವ ಉಳಿಸುವ ಶಕ್ತಿ ರಕ್ತದಾನಕ್ಕಿದೆ

ಒಂದು ಜೀವ ಉಳಿಸುವ ಶಕ್ತಿ ರಕ್ತದಾನಕ್ಕಿದೆ

ದಾವಣಗೆರೆ, ಜು. 13- ದೇಶದಲ್ಲಿ ವಾಸಿ ಸುವ ದೊಡ್ಡ ಜನ ಸಂಖ್ಯೆಗೆ ಗಂಭೀರವಾದ ಆರೋಗ್ಯ ಸವಾಲು ಗಳನ್ನು ಒಡ್ಡುವ ಹೆಚ್.ಐ.ವಿ / ಏಡ್ಸ್ ಅನ್ನು 2030ಕ್ಕೆ ನಿರ್ಮೂಲನೆ ಮಾಡಲು ಭಾರತವು ಮಹತ್ತರ ವಾಗಿ ಶ್ರಮಿಸುತ್ತಿದೆ. ಯುವಜನತೆ ತಮ್ಮಲ್ಲಿ ತಾವು ಎಚ್ಚರ ವಹಿಸಿ ಕೊಂಡು, ಬೇರೆಯವ ರಿಗೂ ಸಹ ಮಾಹಿತಿ ನೀಡಬೇಕಾಗಿದೆ. ಸಮಾಜದಲ್ಲಿ ಯುವ ಮನಸ್ಸುಗಳು ಜಾಗೃತರಾಗಿ ಮುನ್ನಡೆಯಾಗಬೇಕಾಗಿದೆ ಎಂದು ಜೆ.ಜೆ.ಎಂ ಮೆಡಿಕಲ್ ಕಾಲೇಜಿನ ಐ.ಸಿ.ಟಿ.ಸಿಯ ಆಪ್ತ ಸಮಾಲೋಚಕ ಪ್ರದೀಪ್‌ಕುಮಾರ್ ತಿಳಿಸಿದರು.

ನಗರದ ಬಾಪೂಜಿ ವಿದ್ಯಾಸಂಸ್ಥೆಯ ಎ.ಆರ್.ಜಿ ಕಾಲೇಜಿನ ರೆಡ್ ರಿಬ್ಬನ್ ಕ್ಲಬ್, ರಾಷ್ಟ್ರೀಯ ಸೇವಾ ಯೋಜನೆ, ಯುವ ರೆಡ್‍ಕ್ರಾಸ್ ಘಟಕ, ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ (ಬೆಂಗಳೂರು), ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕ (ದಾವಣಗೆರೆ) ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಹೆಚ್. ಐ.ವಿ/ಏಡ್ಸ್ ಮತ್ತು ಸ್ವಯಂ ಪ್ರೇರಿತ ರಕ್ತದಾನ ಕುರಿತು ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ, ನೀಡಿದ ಉಪನ್ಯಾಸದಲ್ಲಿ ಮಾತನಾಡಿದರು.

ಜಗತ್ತಿನಾದ್ಯಂತ ರಕ್ತದಾನಕ್ಕೆ ಮಹತ್ವವಿದೆ. ಒಂದು ಜೀವದ ಜೀವ ಉಳಿಸುವ ಶಕ್ತಿ ರಕ್ತದಾನಕ್ಕೆ ಇದೆ. ಪ್ರತಿಯೊಬ್ಬರು ರಕ್ತದಾನ ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕೆಂದು ವಿದ್ಯಾರ್ಥಿಗಳಿಗೆ ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿಕೊಂಡಿದ್ದ ಪ್ರಾಂಶುಪಾಲ ಡಾ. ಜಿ.ಬಿ. ಬೋರಯ್ಯ ಅವರು ಯುವ ಸಮುದಾಯ ನೈತಿಕತೆ ಬೆಳೆಸಿಕೊಳ್ಳುವ ಮೂಲಕ ಮಾದರಿಯಾಗಬೇಕು. ನಿಮ್ಮ ಜೊತೆಗೆ ಕುಟುಂಬ ಮತ್ತು ಜಗತ್ತು ಅವಲಂಬಿತವಾಗಿದೆ.  ಪ್ರತಿಯೊಂದು ಉಸಿರನ್ನು ತೆಗೆದುಕೊಳ್ಳುವಾಗ ಹಾಗೂ ಹೊರ ಹಾಕುವಾಗ ಕೋಟ್ಯಾಂತರ ವೈರಸ್‌ಗಳು ನಮ್ಮ ದೇಹವನ್ನು ಸೇರಿಕೊಳ್ಳು ತ್ತವೆ. ಪ್ರತಿಯೊಬ್ಬರು ಎಚ್ಚರ ವಹಿಸಿಕೊಳ್ಳುವ ಮೂಲಕ ನಾಳೆ ನೀವು ದಾರಿ ದೀಪವಾಗಬೇಕಾಗಿದೆ ಎಂದು ಹೇಳಿದರು. 

ಸಮಾರಂಭದಲ್ಲಿ ಐಕ್ಯೂಎಸಿ ಸಂಚಾಲಕ ಪ್ರೊ. ಅನಿತಾಕುಮಾರಿ, ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮ ಅಧಿಕಾರಿ ಡಾ. ಹೆಚ್.ಆರ್. ತಿಪ್ಪೇಸ್ವಾಮಿ, ಯುವ ರೆಡ್‍ಕ್ರಾಸ್ ಘಟಕದ ಸಂಚಾಲಕ ಪ್ರೊ. ರಮೇಶ್ ಪೂಜಾರ್, ಉದ್ಯೋಗ ಭರವಸೆ ಕೋಶದ ಸಂಚಾಲಕರಾದ ಪ್ರೊ. ರಶ್ಮಿ ಪಿ, ಪ್ರೊ. ಆನಂದ್, ಡಾ. ಚಮನ್‍ಸಾಬ್, ಬೇಬಿ ಅಮಿನಾ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಏಡ್ಸ್ ಅರಿವು ಜಾಗೃತಿಯ ಪ್ರಬಂಧ ಸ್ಪರ್ಧೆಯ ಪ್ರಥಮ ಬಹುಮಾನ ಅಂತಿಮ ಬಿ.ಎ., ವಿದ್ಯಾರ್ಥಿ ಹನುಮಂತಪ್ಪ, ದ್ವಿತೀಯ ಬಹುಮಾನ, ದ್ವಿತೀಯ ಬಿ.ಕಾಂ., ವಿದ್ಯಾರ್ಥಿನಿ ಪುಷ್ಪ ಪಿ., ತೃತೀಯ ಬಹುಮಾನ ದ್ವಿತೀಯ ಬಿ.ಕಾಂ., ವಿದ್ಯಾರ್ಥಿನಿ ಮೇಘನಾ ಮಂಜುನಾಥ್ ಅವರಿಗೆ ನೀಡಲಾಯಿತು.

error: Content is protected !!