ರಸ್ತೆಯಲ್ಲಿಯೇ ವಾಹನಗಳ ನಿಲುಗಡೆ, ಸಂಚಾರ ಸಮಸ್ಯೆ

ರಸ್ತೆಯಲ್ಲಿಯೇ ವಾಹನಗಳ ನಿಲುಗಡೆ, ಸಂಚಾರ ಸಮಸ್ಯೆ

ಹರಿಹರದಲ್ಲಿ ಪಾದಾಚಾರಿಗಳಿಗೆ ತೊಂದರೆ

ಹರಿಹರ, ಜು. 13- ನಗರದಲ್ಲಿ ರಸ್ತೆಯ ಮಧ್ಯದಲ್ಲಿ ವಾಹನಗಳು ನಿಲ್ಲುವುದರಿಂದ ಪಾದಚಾರಿಗಳು ಹಾಗೂ ಬೈಕ್ ಸವಾರರಿಗೆ ಸಮಸ್ಯೆಯಾಗಿದೆ. ಜನಸಂದಣಿ ಹೆಚ್ಚಾಗಿರುವ ರಸ್ತೆಗಳಲ್ಲೂ ಈ ಪ್ರವೃತ್ತಿ ಕಂಡು ಬರುತ್ತಿದೆ.

ಹಲವಾರು ಪ್ರಮುಖ ರಸ್ತೆಗಳಲ್ಲಿ ಜನರು ವಾಹನಗಳನ್ನು ರಸ್ತೆ ಮಧ್ಯದಲ್ಲೇ ಸಂಚಾರಕ್ಕೆ ಅಡ್ಡಿಯಾಗುವ ರೀತಿ ನಿಲ್ಲಿಸುತ್ತಿದ್ದಾರೆ. ಕೆಲ ರಸ್ತೆಗಳು ಮೊದಲೇ ಕಿರಿದಾಗಿರುವುದರಿಂದ ಸಂಚಾರದ ಸಮಸ್ಯೆ ಇನ್ನೂ ಹೆಚ್ಚಾಗಿದೆ.

ಪ್ರಮುಖ ರಸ್ತೆಗಳಲ್ಲಿ ಫುಟ್ ಪಾತ್ ವ್ಯಾಪಾರಿಗಳು ಹಾಗೂ ತಳ್ಳು ಗಾಡಿಯವರ ಕಾರಣದಿಂದಾಗಿ ಪಾದಚಾರಿಗಳಿಗೂ ತೊಂದರೆಯಾಗುತ್ತಿದೆ. ಶಾಲಾ – ಕಾಲೇಜು ಬಿಡುವ ಸಮಯದಲ್ಲಿ ಸಮಸ್ಯೆ ಇನ್ನಷ್ಟು ಹೆಚ್ಚಾಗುತ್ತಿದೆ.  ಪೊಲೀಸ್ ಇಲಾಖೆಯವರು ಈ ಸಮಸ್ಯೆಯ ಬಗ್ಗೆ ಗಮನ ಹರಿಸಬೇಕು. ರಸ್ತೆ ಮಧ್ಯದಲ್ಲಿ ವಾಹನ ನಿಲ್ಲಿಸುವವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಿದೆ ಎಂದು ನಾಗರಿಕರಾದ ನಾಗರಾಜ್ ಒತ್ತಾಯಿಸಿದ್ದಾರೆ.

ನಗರದಲ್ಲಿ ಬಹುತೇಕ ಶಾಲಾ-ಕಾಲೇಜುಗಳು ಮತ್ತು ವ್ಯಾಪಾರ ವಹಿವಾಟು ಮಾಡುವ ಕೇಂದ್ರಗಳು ಬಲಾಢ್ಯ ವ್ಯಕ್ತಿಗಳಿಗೆ ಸಂಬಂಧಿಸಿದವು. ಅಧಿಕಾರಿಗಳು ಕ್ರಮ ತೆಗೆದುಕೊಳ್ಳದೇ ಅವ್ಯವಸ್ಥೆಯಾಗಲು ಕಾರಣ ಎಂದು ನಿವೃತ್ತ ನೌಕರ ಮಲ್ಲಿಕಾರ್ಜುನ ದೂರಿದ್ದಾರೆ.

error: Content is protected !!