ಹರಪನಹಳ್ಳಿ : ಐಎಫ್‌ಎಸ್‌ನಲ್ಲಿ ಸಾಧನೆ ಗೈದ ಎಸ್‍.ಪಿ. ಲಾವಣ್ಯಗೆ ಸನ್ಮಾನ

ಹರಪನಹಳ್ಳಿ : ಐಎಫ್‌ಎಸ್‌ನಲ್ಲಿ ಸಾಧನೆ ಗೈದ ಎಸ್‍.ಪಿ. ಲಾವಣ್ಯಗೆ ಸನ್ಮಾನ

ಹರಪನಹಳ್ಳಿ, ಜು. 13 –  ಪಟ್ಟಣದ ಪೊಲೀಸ್ ಲೈನ್ ಹಿಂಭಾಗದಲ್ಲಿರುವ ಸಂತ ಶ್ರೀ ಸೇವಾಲಾಲ್ ಮಹಾರಾಜರ ದೇವಸ್ಥಾನದ ಆವರಣದಲ್ಲಿ ಐಎಫ್‌ಎಸ್‌ನಲ್ಲಿ ಸಾಧನೆ ಗೈದ ಎಸ್‍.ಪಿ. ಲಾವಣ್ಯ ಅವರನ್ನು ತಾಲ್ಲೂಕು ಬಂಜಾರ್ ಸಮುದಾಯದ ಮುಖಂಡರು ಸನ್ಮಾನಿಸಿ ಗೌರವಿಸಿದರು.

ತಾಲ್ಲೂಕಿನ ಶಿರಗಾನಹಳ್ಳಿ ತಾಂಡ ಗ್ರಾಮದ ನಿವೃತ್ತ ಶಿಕ್ಷಕನ ಮಗಳು ಐಎಫ್‍ಎಸ್‍ನಲ್ಲಿ ಆಯ್ಕೆಯಾಗಿ ತಾಲ್ಲೂಕಿಗೆ ಕೀರ್ತಿಯನ್ನು ತಂದಿದ್ದಾರೆ. ತೆಲಿಗಿ ಸರ್ಕಾರಿ ಪ್ರೌಢಶಾಲಾ ನಿವೃತ್ತ ಶಿಕ್ಷಕ ತಂದೆ ನಾಗಾನಾಯ್ಕ, ತಾಯಿ ಸಾಕಮ್ಮನವರ ಪುತ್ರಿ ಎಸ್‍.ಪಿ. ಲಾವಣ್ಯ ದೇಶಕ್ಕೆ 65ನೇ, ರಾಜ್ಯಕ್ಕೆ 4ನೇ ರಾಂಕ್ ಪಡೆಯುವ ಮೂಲಕ ಭಾರತೀಯ ಅರಣ್ಯ ಸೇವೆಗೆ ಆಯ್ಕೆಯಾಗಿದ್ದಾರೆ. ಕಳೆದ 2020-21ನೇ ಸಾಲಿನಲ್ಲಿ ಎರಡು ಬಾರಿ ಯುಪಿಎಸ್ಸಿ ಪರೀಕ್ಷೆ ಬರೆದಿದ್ದು, 2022ರಲ್ಲಿ 3ನೇ ಪ್ರಯತ್ನದಲ್ಲಿ ಸಫಲರಾಗಿದ್ದಾರೆ. ಇವರು 1 ರಿಂದ 5 ನೇ ತರಗತಿಯವರೆಗೆ ಸರ್ಕಾರಿ ಶಾಲೆಯಲ್ಲಿ 6 ರಿಂದ ಪಿಯುಸಿ ಯವರೆಗೆ ಜವಾಹರಲಾಲ್ ನೆಹರು ದೇವರಹಳ್ಳಿಯ ನವೋದಯದಲ್ಲಿ ಅಭ್ಯಾಸ ಮಾಡಿ, ಧಾರವಾಡ ಕೃಷಿ ವಿವಿಯಲ್ಲಿ ಬಿಎಸ್ಸಿ (ಕೃಷಿ) ಪದವಿ ಪಡೆದಿದ್ದಾರೆ.

ಆರಂಭದಲ್ಲಿ ಎರಡು ಬಾರಿ ಪರೀಕ್ಷೆ ಬರೆದಿದ್ದು ಯಶಸ್ಸು ಸಿಕ್ಕಿರಲಿಲ್ಲ, ಇದನ್ನು ಸವಾಲಾಗಿ ಸ್ವೀಕರಿಸಿ ನಿರಂತರ ಅಧ್ಯಯನದಿಂದ ಪ್ರಯತ್ನಿಸಿ ಯಶಸ್ಸು ಕಂಡಿದ್ದೇನೆ ಎಂದು ಹೇಳುತ್ತಾರೆ ಲಾವಣ್ಯರವರು.

ಸಾಧನೆ ಗೈದ ಸಾಧಕಿಗೆ ಅಭಿನಂದನೆ ಸಲ್ಲಿಸಿದ ಬಂಜಾರ್ ಸಮುದಾಯ ಮುಖಂಡರಾದ ಡಾ|| ರಮೇಶ್ ಕುಮಾರ್, ಎಸ್.ಪಿ. ಲಿಂಬ್ಯಾನಾಯ್ಕ, ಎಲ್. ಮಂಜ್ಯಾನಾಯ್ಕ, ಜಯರಾಮ್ ನಾಯ್ಕ,  ಮಹೇಶ್ ನಾಯ್ಕ,  ರವಿನಾಯ್ಕ, ಕೋಟ್ರೇಶ್ ನಾಯ್ಕ, ಸಂತೋಷ್ ನಾಯ್ಕ, ಸೂರ್ಯಾನಾಯ್ಕ, ಶಶಿಕುಮಾರ್ ನಾಯ್ಕ, ಸೇರಿದಂತೆ ಸಮುದಾಯದ ಇತರೆ ಮುಖಂಡರು   ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

error: Content is protected !!