ಹಿಂದುಳಿದ ವರ್ಗದ ಅಭಿವೃದ್ಧಿಗೆ ಶ್ರಮಿಸಿದ ಮಹಾನ್ ವ್ಯಕ್ತಿ

ಹಿಂದುಳಿದ ವರ್ಗದ ಅಭಿವೃದ್ಧಿಗೆ ಶ್ರಮಿಸಿದ ಮಹಾನ್ ವ್ಯಕ್ತಿ

`ಎಲ್.ಜಿ. ಹಾವನೂರ್ ಆಶಯಗಳಿಗೆ 50 ವರ್ಷ’ದ ಕಾರ್ಯಕ್ರಮ

ದಾವಣಗೆರೆ, ಜು.12- ಎಲ್.ಜಿ. ಹಾವನೂರ್  ಅವರು ನಾಯಕ ಸಮಾಜದ ಕಣ್ಮಣಿ, ಹಿಂದುಳಿದ ವರ್ಗಗಳ ಸರ್ವೋತೋಮುಖ ಅಭಿವೃದ್ಧಿಗೆ ಶ್ರಮಿಸಿದ  ಮಹಾನ್ ವ್ಯಕ್ತಿ ಎಂದು    ನಾಯಕ ಸಮಾಜದ ಅಧ್ಯಕ್ಷ  ಬಿ. ವೀರಣ್ಣ ಹೇಳಿದರು. 

 ನಗರದ ನಾಯಕ ವಿದ್ಯಾರ್ಥಿ ನಿಲಯದಲ್ಲಿ ಜರುಗಿದ `ಎಲ್.ಜಿ. ಹಾವನೂರ್ ಆಶಯಗಳಿಗೆ 50 ವರ್ಷ’  ಕಾರ್ಯಕ್ರಮದಲ್ಲಿ  ಅವರು ಮಾತನಾಡಿದರು

ಆಗಿನ ಮುಖ್ಯಮಂತ್ರಿ  ದೇವರಾಜ ಅರಸು ಅವರ   ಬಲಗೈಯಾಗಿದ್ದ ಹಾವನೂರು ಹಿಂದುಳಿದ ವರ್ಗಗಳಿಗೆ  ಸರ್ಕಾರಿ ಹುದ್ದೆಗಳನ್ನು ಮೀಸಲಿಡ ಬೇಕೆಂದು ಹೇಳಿದ ಮೊದಲಿಗರು. ಮೀಸಲಾತಿ ವಿಚಾರದಲ್ಲಿ ಮುಂದುವರೆದ ಜನಾಂಗದವರು ಮತ್ತು ಹಿಂದುಳಿದವರು ಹಾವನೂರು ಅವರ ಆಶಯಗಳನ್ನು ಅರ್ಥೈಸಿಕೊಳ್ಳದೆ ಅವರನ್ನು ವಿರೋಧಿಸಿದರು, ಅಷ್ಟೇ ಅಲ್ಲಾ ಅವರನ್ನು ಮುಗಿಸಲು ಪ್ರಯತ್ನಿಸಿದರು.  ಅವರ ಮಕ್ಕಳು ಓದುತ್ತಿದ್ದ ಶಾಲೆಗೆ ಹೋಗಿ ಗಲಾಟೆ ಮಾಡಿದರು. ಆದಾಗ್ಯೂ ಛಲ ಬಿಡದೆ ಸಂಪೂರ್ಣವಾಗಿ ಹಿಂದುಳಿದ ವರ್ಗದ ವರದಿಯನ್ನು ಜಾರಿಗೆ ತಂದರು. ಇದನ್ನು ಸುಪ್ರೀಂ ಕೋರ್ಟ್ ನಲ್ಲಿ ಮೀಸ ಲಾತಿ ವಿರೋಧಿಗಳು ಚಾಲೆಂಜ್ ಮಾಡಿದರು.

ಕಾನೂನು ಪಂಡಿತರಾಗಿದ್ದ ಎಲ್.ಜಿ.ಹಾವನೂರ್ ವರದಿ ಸುಪ್ರೀಂ ಕೋರ್ಟ್‌ನಲ್ಲಿ  ಅಂಗೀಕಾರ ಆಯಿತು. ಅದೇ ಸಂದರ್ಭದಲ್ಲಿ ತುರ್ತು ಪರಿಸ್ಥಿತಿ ಜಾರಿ ಬಂದಿದ್ದರಿಂದ ಪ್ರತಿಭಟನೆ ಮಾಡುವವರು ಮೂಲೆ ಗುಂಪಾದರು.   ಇವರ ವರದಿಯಿಂದ ಲಕ್ಷಾಂತರ ಜನರು ಉದ್ಯೋಗ, ಬಡ್ತಿ, ಆರ್ಥಿಕ  ಸಹಾಯ ಪಡೆದಿದ್ದಾರೆ.  ಇಂತಹ ಮಹಾನ್ ವ್ಯಕ್ತಿಯ ಫೋಟೋವನ್ನು ಪ್ರತಿಯೊಬ್ಬ ಹಿಂದುಳಿದವರು ಹಾಕಿಕೊಂಡು ಸ್ಮರಣೆ ಮಾಡುವಂತಹ ಕೆಲಸ ಮಾಡಬೇಕಾಗಿದೆ ಎಂದರು. 

ಈ ಸಂದರ್ಭದಲ್ಲಿ ನಾಯಕ ವಿದ್ಯಾರ್ಥಿ ನಿಲಯದ  ಉಪಾಧ್ಯಕ್ಷ ಎನ್.ಎಂ.ಆಂಜನೇಯ ಗುರೂಜಿ, ಕಾರ್ಯದರ್ಶಿ    ಶ್ಯಾಗಲೆ ಕೆ.ಆರ್.ಮಂಜುನಾಥ್, ಮಾಜಿ ನಗರಸಭೆ ಸದಸ್ಯರುಗಳಾದ  ಕರಿಗಾರ್ ಬಸಪ್ಪ, ಉಸ್ಮಾನ್, ಹೊಂಡದ ಸರ್ಕಲ್ ಬಸ್ ಮಂಜಣ್ಣ, ದೇವರಬೆಳಕೆರೆ ಮಹೇಶ್ವರಪ್ಪ, ಪ್ರಜ್ವಲ್ ಎಸ್.ಕೆ.ಸ್ವಾಮಿ ಇತರರು ಹಾಜರಿದ್ದರು.

error: Content is protected !!