ದಾವಣಗೆರೆ, ಜು. 12- ನಗರದ ಹರ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಸ್ಥಾನಕ್ಕೆ ಬಿ.ಸಿ. ಉಮಾಪತಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಎಂ. ದೊಡ್ಡಪ್ಪ ಶನಿವಾರ ಅವಿರೋಧವಾಗಿ ಆಯ್ಕೆಯಾಗಿರುವುದಾಗಿ ಚುನಾವಣಾಧಿಕಾರಿ ಆರ್.ಶಿವಪ್ಪ ಘೋಷಿಸಿದ್ದಾರೆ.
ಈ ಸಂದರ್ಭದಲ್ಲಿ ಅವಿರೋಧವಾಗಿ ಹೊಸ ಆಡಳಿತ ಮಂಡಳಿಗೆ ನಿರ್ದೇಶಕರಾಗಿ ಆಯ್ಕೆಯಾಗಿದ್ದ ಮಲ್ಲನಗೌಡ ಎಸ್, ಅಂದನೂರು ಮುರುಗೇಶಪ್ಪ, ಅವ್ವಣ್ಣಪ್ಪ ಹೆಚ್ ಎಸ್, ಹಾಲೇಶ್ ಅಂಗಡಿ, ಚೈತನ್ಯಕುಮಾರ ಸಿ.ಬಿ.ಸ್ವಾಮಿ ಎಸ್.ಎಂ (ವಾಣಿ ಶಿವಣ್ಣ), ಕೈದಾಳೆ ಶಿವಶಂಕರ್, ನಾಗರಾಜ ಹೆಚ್ ಎಂ, ಹೆಚ್ ಎಸ್. ಯೋಗೇಶ್, ಅನಿತಾ ಸಿ.ಪಿ, ಪುಪ್ಪಾವತಿ ಹೆಚ್.ವಿ, ಕಾರ್ಯದರ್ಶಿ ಚನ್ನಮಲ್ಲಿಕಾರ್ಜುನ ಕೆ. ಸಿಬ್ಬಂದಿ ಮಲ್ಲಿಕಾರ್ಜುನ ಎಂ, ಗುರುಪ್ರಸಾದ ವೈ. ಹಾಜರಿದ್ದರು.