ಕುಂಬಳೂರು ಪಿಎಸಿಎಸ್‌ ವಾರ್ಷಿಕ ಮಹಾಸಭೆ

ಕುಂಬಳೂರು ಪಿಎಸಿಎಸ್‌ ವಾರ್ಷಿಕ ಮಹಾಸಭೆ

ಸಂಘದ ಸುವರ್ಣ ಮಹೋತ್ಸವ ಆಚರಿಸಲು ನಿರ್ಧಾರ

ಮಲೇಬೆನ್ನೂರು, ಜು. 12 – ಕುಂಬಳೂರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2022-23ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಬುಧವಾರ ಸಂಘದ ಅಧ್ಯಕ್ಷ ಡಿ.ಕೆ.ಸ್ವಾಮಿ ಅಧ್ಯಕ್ಷತೆಯಲ್ಲಿ ಜರುಗಿತು. 

ಸಂಘದ ಸಿಓಕೆ. ಯಶೋಧ ಅವರು ವಿವಿಧ ಲೆಕ್ಕ ಪತ್ರಗಳನ್ನು ಓದಿ, ಸಂಘವು ಪ್ರಸಕ್ತ ಸಾಲಿನಲ್ಲಿ ರೈತರಿಗೆ ಸುಮಾರು 5 ಕೋಟಿ ಕೃಷಿ ಸಾಲ ನೀಡಿದೆ. ಅಲ್ಲದೇ, ಎಂಟಿಎಲ್‌ ಸಾಲ ಸೇರಿದಂತೆ ವಿವಿಧ ರೀತಿ ಸಾಲ ಸೌಲಭ್ಯಗಳನ್ನು ರೈತರಿಗೆ ಕಲ್ಪಿಸಿ ಕೊಟ್ಟಿದ್ದೇವೆ. 

ಪಿಎಂಜಿಎಸ್‌ವೈ ಯೋಜನೆಯಡಿ 120 ರೈತರಿಗೆ ವಿಮೆ ಸೌಲಭ್ಯ ಸಿಕ್ಕಿದೆ. 24 ಲಕ್ಷ ರೂ. ರೈತರ ಉಳಿತಾಯ ಹಣ ಹೊಂದಿದೆ ಎಂದರು.

ಡಿಫಿಸಿ ಬ್ಯಾಂಕ್‌ ಕ್ಷೇತ್ರಾಧಿಕಾರಿ ಎಸ್‌. ಲೋಕೇಶ್‌ನಾಯ್ಕ ಮಾತನಾಡಿ, ಸಾಲ ಮನ್ನಾ ಬಾಬ್ತು 7 ರೈತರಿಗೆ ಬರಬೇಕಾದ ಹಣ ಶೀಘ್ರ ಸರ್ಕಾರದಿಂದ ಬರುವ ಸಾಧ್ಯತೆ ಇದೆ ಎಂದರು. ಗ್ರಾಮದ ಹಿರಿಯರಾದ ಕೈ ತೀರ್ಥಪ್ಪ, ಹಳೇಮನಿ ಶಂಭುಲಿಂಗಪ್ಪ, ಹುಲ್ಲುಮನಿ ನಿಂಗಪ್ಪ, ಕೆ.ಗಿರೀಶ್‌, ಕೆ. ತಿಮ್ಮಣ್ಣ ಅವರುಗಳು ಮಾತನಾಡಿ, ಸಂಘದ ಈಗಿನ ಆಡಳಿತ ಮಂಡಳಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದು, ಮುಂದಿನ ಅವಧಿಗೆ ಚುನಾವಣೆ ನಡೆಯದಂತೆ ಅವಿರೋಧವಾಗಿ ಆಯ್ಕೆ ಮಾಡೋಣ ಎಂದರು.

ಸಂಘದ ನಿರ್ದೇಶಕ ಮಾಗಾನಹಳ್ಳಿ ವಾಸು ಮಾತ ನಾಡಿ, ಗ್ರಾಮಸ್ಥರ ಸಹಕಾರದಿಂದ ನಮ್ಮ ಸಂಘವು ಪ್ರಗತಿ ಪಥದಲ್ಲಿ ಸುವರ್ಣ ಮಹೋತ್ಸವಕ್ಕೆ ಕಾಲಿಟ್ಟಿದೆ ಎಂದರು.

ಕೆ.ಕಾಮರಾಜ್‌ ಮಾತನಾಡಿ, ಸಂಘದ ಸುವರ್ಣ ಮಹೋತ್ಸವದ ಅಂಗವಾಗಿ ಸಂಘದ ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ವೈಯಕ್ತಿಕವಾಗಿ ಪ್ರತಿಭಾ ಪುರಸ್ಕಾರ ನೀಡುವುದಾಗಿ ತಿಳಿಸಿದರು.

ಸಂಘದ ಉಪಾಧ್ಯಕ್ಷ ಕೆ.ತಿಪ್ಪೇಸ್ವಾಮಿ, ನಿರ್ದೇಶಕರಾದ ಹೆಚ್‌.ಆಂಜನೇಯ, ಎನ್‌. ಕುಮಾರ್‌, ಶ್ರೀಮತಿ ಗುರುಶಾಂತಮ್ಮ ಆರ್‌.ವೀರಭದ್ರಪ್ಪ, ಕೆ.ಸೋಮಶೇ ಖರಪ್ಪ, ಬಿ.ಕೆ.ಹನುಮೇಶ್‌, ಶ್ರೀಮತಿ ಹಾಲಮ್ಮ, ಶ್ರೀಮತಿ ಹನುಮಕ್ಕ ವೇದಿಕೆಯಲ್ಲಿದ್ದರು. ಹೆಚ್‌.ಎಂ. ಸದಾನಂದ್‌ ಸ್ವಾಗತಿಸಿದರು. ಚಿಕ್ಕಣ್ಣ ಕಾರ್ಯಕ್ರಮ ನಿರೂಪಿಸಿದರೆ, ಹೆಚ್‌.ಎಂ. ಸದಾಶಿವ ವಂದಿಸಿದರು.

error: Content is protected !!