ಲಕ್ಕಶೆಟ್ಟಿಹಳ್ಳಿ : ಕಾಳಿಕಾ ದೇವಿ ಗ್ರಾಮ ದೇವತೆ ಅಮ್ಮನ ಹಬ್ಬ

ಲಕ್ಕಶೆಟ್ಟಿಹಳ್ಳಿ : ಕಾಳಿಕಾ ದೇವಿ ಗ್ರಾಮ ದೇವತೆ ಅಮ್ಮನ ಹಬ್ಬ

ಮಲೇಬೆನ್ನೂರು, ಜು. 11 – ಲಕ್ಕಶೆಟ್ಟಿಹಳ್ಳಿ ಗ್ರಾಮದ ಗ್ರಾಮ ದೇವತೆ ಶ್ರೀ ಕಾಳಿಕಾ ದೇವಿ ಅಮ್ಮನ ಹಬ್ಬಕ್ಕೆ ಕೋಣವನ್ನು ಬಿಡುವ ಹಾಗೂ ಭಂಡಾರ ಹಿಡಿಯುವ ಕಾರ್ಯಕ್ಕೆ ಮಂಗಳವಾರ ವಿಧ್ಯುಕ್ತವಾಗಿ ಚಾಲನೆ ನೀಡಲಾ ಯಿತು. 

ಬರುವ 2024ನೇ ಏಪ್ರಿಲ್ 2 ಮತ್ತು 3 ರಂದು ಕಾಳಿಕಾದೇವಿ ಅಮ್ಮನ ಹಬ್ಬವನ್ನು ಆಚರಿಸಲು ಊರಿನ ಗ್ರಾಮಸ್ಥರೆಲ್ಲರೂ ಸೇರಿದ್ದ ಸಭೆಯಲ್ಲಿ ತೀರ್ಮಾನಿಸಿದ್ದರು. 

ಈ ಹಿನ್ನೆಲೆಯಲ್ಲಿ ಊರಿನ ಗೌಡ್ರು ಮತ್ತು
ಬಣಕಾರ ಮನೆಯಲ್ಲಿ ಪೂಜೆ ಸಲ್ಲಿಸಿದ ನಂತರ ಹಲಿಗೆ ಭಾರಿಸಿ ಊರಿನ ತುಂಬಾ ಮೆರವಣಿಗೆ ಮಾಡಿ, ನಂತರ ಊರಿನ ಹೊರಗೆ ಇರುವ ಶ್ರೀ ಕಾಳಿಕಾದೇವಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಕೋಣಗೆ ಭಂಡಾರ
ಹಚ್ಚಿ ಬಿಡಲಾಯಿತು.

error: Content is protected !!