ಎಂ.ಪಿ.ಪ್ರಕಾಶ್‍ ಸಜ್ಜನ ರಾಜಕಾರಣಿ, ಸಾಂಸ್ಕೃತಿಕ ರಾಯಭಾರಿ

ಎಂ.ಪಿ.ಪ್ರಕಾಶ್‍ ಸಜ್ಜನ ರಾಜಕಾರಣಿ, ಸಾಂಸ್ಕೃತಿಕ ರಾಯಭಾರಿ

ಹರಪನಹಳ್ಳಿ : ಎಂಪಿಪಿ 83ನೇ ಜನ್ಮ ದಿನೋತ್ಸವ ಕಾರ್ಯಕ್ರಮದಲ್ಲಿ ನುಡಿ ನಮನ

ಹರಪನಹಳ್ಳಿ,ಜು.11- ರಾಜಕಾರಣದ ಸಂಸ್ಕಾರ ಬಿಟ್ಟು ಹೋಗದಿರುವುದಕ್ಕೆ ದಿ.ಎಂ.ಪಿ.ಪ್ರಕಾಶ್‍ ಅವರು ಮುಖ್ಯಮಂತ್ರಿಯಾಗಲಿಲ್ಲ ಎಂದು ಜಿ.ಪಂ. ಮಾಜಿ ಸದಸ್ಯ ಪಿ.ಮಹಾಬಲೇಶ್ವರ ಗೌಡರು ಹೇಳಿದರು.

ಪಟ್ಟಣದ ಕಾಶಿ ಬಡಾವಣೆಯಲ್ಲಿರುವ ಶಾಸಕರಾದ ಎಂ.ಪಿ.ಲತಾ ಅವರ ಕಚೇರಿಯಲ್ಲಿ ದಿ. ಎಂ.ಪಿ.ರವೀಂದ್ರ ಪ್ರತಿಷ್ಠಾನದಿಂದ ಮಾಜಿ ಉಪಮುಖ್ಯಮಂತ್ರಿ ಎಂ.ಪಿ.ಪ್ರಕಾಶ್‍ರವರ 83ನೇ ಜನ್ಮದಿನೋತ್ಸವದ ನಿಮಿತ್ತ ಇಂದು ಹಮ್ಮಿಕೊಂಡಿದ್ದ ನುಡಿ ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಎಂ.ಪಿ.ಪ್ರಕಾಶ್‍ ಅವರು ಸುಸಂಸ್ಕೃತ ಸಜ್ಜನ ರಾಜಕಾರಣಿಯಾಗಿದ್ದರು. ರಾಜಕೀಯ ದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. 

ಮಲ್ಲಿಗೆ ನಾಡಿನ ರೂವಾರಿ, ಹುಲಿಗುಡ್ಡದ ಏತ ನೀರಾವರಿಯ ಹರಿಕಾರ, ದೀನ ದಲಿತರ ಆಶಾ ಕಿರಣವಾಗಿದ್ದರು. 

ಅದೇ ರೀತಿ ಅವರ ಪುತ್ರ ದಿ.ಎಂ.ಪಿ.ರವೀಂದ್ರ ಅವರು ಹರಪನಹಳ್ಳಿ ತಾಲ್ಲೂಕಿಗೆ 371 ಜೆ ಸೌಲಭ್ಯ ಒದಗಿಸಿಕೊಟ್ಟು ಜನಾನುರಾಗಿಯಾಗಿದ್ದು, ಪ್ರಕಾಶ್‍ರವರ ಹಿರಿಯ ಪುತ್ರಿ ಎಂ.ಪಿ.ಲತಾ ಅವರು ತಂದೆ ಹಾಗೂ ಸಹೋದರರ ಹಾದಿಯಲ್ಲಿ ಸಾಗಿದ್ದಾರೆ ಎಂದು ಹೇಳಿದರು.

ಎಂ.ಪಿ.ಪ್ರಕಾಶ್‍ರವರು ಎಲ್ಲಾ ವರ್ಗದ ಜನರೊಂದಿಗೆ ಬೆರೆಯುವ ಮೂಲಕ ಹಡಗಲಿಯನ್ನು ಸಮಗ್ರ ಅಭಿವೃದ್ಧಿ ಮಾಡಿ, ಅವರದೇ ಆದ ಕೊಡುಗೆ ನೀಡಿ ಹೋಗಿದ್ದಾರೆ, ಅದೇ ರೀತಿ ಹರಪನಹಳ್ಳಿ ತಾಲ್ಲೂಕು ಮಾಜಿ ಶಾಸಕ ದಿ.ಇಜಾರಿ ಶಿರಸಪ್ಪನವರು ಅಭಿವೃದ್ಧಿಗೆ ಶ್ರಮಿಸಿದ್ದಾರೆ ಎಂದರು

ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ಕೆ.ಪ್ರಕಾಶ್ ಮಾತನಾಡಿ, ಎಂ.ಪಿ.ಪ್ರಕಾಶ್‍ರವರು ರಾಜಕೀಯ ಅಷ್ಟೇ ಅಲ್ಲದೆ ಸಾಹಿತ್ಯ, ರಂಗಭೂಮಿ, ಸೇರಿದಂತೆ, ವಿವಿಧ ಕ್ಷೇತ್ರಗಳಲ್ಲಿ ಸಾಕಷ್ಟು ಜ್ಞಾನವನ್ನು ಹೊಂದಿದ್ದು, ಕಿರಿಯ ರಾಜಕಾರಣಿಗಳಿಗೆ ಮಾರ್ಗದರ್ಶಕರಾಗಿದ್ದರು. ನನಗೂ  ಸಹ ಅವರು ಅನೇಕ ರಾಜಕೀಯ ಸಲಹೆ, ಸೂಚನೆಗಳನ್ನು ನೀಡಿ ಪ್ರೋತ್ಸಾಹಿಸಿದರು ಎಂದು ಹೇಳಿದರು.

ನ್ಯಾಯವಾದಿ ಕಣಿವಿಹಳ್ಳಿ ಮಂಜುನಾಥ ಮಾತನಾಡಿ, ಕರ್ನಾಟಕಕ್ಕೆ ಎಂ.ಪಿ.ಪ್ರಕಾಶ್‍ರವರ ಕೊಡುಗೆ ಅಪಾರವಾಗಿದ್ದು, ಹಂಪಿ ವಿ.ವಿ., ಹುಲಿಗುಡ್ಡ ಏತ ನೀರಾವರಿ ಯೋಜನೆ, ಹಂಪಿ ಉತ್ಸವಗಳ ರೂವಾರಿಯಾಗಿದ್ದರು ಎಂದರು.

ಸಾಹಿತಿ ಇಸ್ಮಾಯಿಲ್ ಎಲಿಗಾರ ಮಾತನಾಡಿ, ಕರ್ನಾಟಕ ರಾಜಕೀಯ ಇತಿಹಾಸದಲ್ಲಿ ನೆನಪಿಡುವಂತಹ ಕೆಲವೇ ರಾಜಕಾರಣಿಗಳಲ್ಲಿ ಎಂ.ಪಿ.ಪ್ರಕಾಶ್‍ರವರು ಒಬ್ಬರಾಗಿದ್ದರು. ರಂಗಭೂಮಿ, ಸಾಹಿತ್ಯ, ಸಂಸ್ಕೃತಿಯಲ್ಲಿ ಆಸಕ್ತಿ ಹೊಂದಿದ್ದ ಅವರದು ಬಹುಮುಖ ಪ್ರತಿಭೆ ಎಂದು ಬಣ್ಣಿಸಿದರು.

ಕೆ.ಚಂದ್ರೇಗೌಡ್ರು, ಅರಸೀಕೆರೆ ನಾಗರಾಜ, ವೈ.ಕೆ.ಬಿ.ದುರುಗಪ್ಪ, ಕಂಚಿಕೇರಿ ಜಯಲಕ್ಷ್ಮಿ, ನಿಚ್ಚವ್ವನಹಳ್ಳಿ ಪರಶುರಾಮಪ್ಪ, ಎಂ.ಪಿ.ನಾಯ್ಕ, ಇತರರು ಎಂ.ಪಿ.ಪ್ರಕಾಶ್‍ರವರ ಬಗ್ಗೆ ನುಡಿ ನಮನ ಸಲ್ಲಿಸಿದರು. 

ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯರಾದ ಎಂ.ವಿ. ಅಂಜಿನಪ್ಪ, ಗಣೇಶ ಪೈಲ್ವಾನ್, ಮುಖಂಡರಾದ ಕೆ.ಜಗದಪ್ಪ, ತೆಲಗಿ ಉಮಾಕಾಂತ, ಗುಂಡಗತ್ತಿ ಎಚ್. ವಸಂತಪ್ಪ, ಚಿಕ್ಕೇರಿ ಬಸಪ್ಪ, ಎಚ್.ಎಸ್.ಅಮಾನುಲ್ಲಾ, ನೇತ್ರಾವತಿ,  ರೇಣುಕಾ ಮಂಜುನಾಥ, ಹುಲಿಕಟ್ಟಿ ಚಂದ್ರಪ್ಪ, ಹರಿಯಮ್ಮನಹಳ್ಳಿ ಶಿವರಾಜ, ನಿಟ್ಟೂರು ಹನುಮಂತಪ್ಪ ಸೇರಿದಂತೆ, ಇತರರು ಇದ್ದರು.

error: Content is protected !!