ತಂಬಾಕು, ಮದ್ಯಪಾನ ಸೇವನೆಯಿಂದ ಕ್ಯಾನ್ಸರ್, ಬಂಜೆತನಕ್ಕೆ ತುತ್ತು

ತಂಬಾಕು, ಮದ್ಯಪಾನ ಸೇವನೆಯಿಂದ ಕ್ಯಾನ್ಸರ್, ಬಂಜೆತನಕ್ಕೆ ತುತ್ತು

ಹೊಳೆಸಿರಿಗೆರೆ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಚೇತನ್ ಎಚ್ಚರಿಕೆ

ಮಲೇಬೆನ್ನೂರು, ಜು. 11 – ತಂಬಾಕು ಸೇವನೆ ಮಾಡಿದವರು  ಕ್ಯಾನ್ಸರ್ ಕಾಯಿಲೆಗಳಿಗೆ ತುತ್ತಾಗಿ ಜೀವನ ಕೊನೆ ಮಾಡಿಕೊಳ್ಳುತ್ತಾರೆಂದು ಹೊಳೆಸಿರಿಗೆರೆ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಚೇತನ್ ಹೇಳಿದರು.

ಹೊಳೆಸಿರಿಗೆರೆ ಗ್ರಾಮದ ಮಾಗೋಡು ಹಾಲಪ್ಪ ಪ್ರೌಢಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಇಂದು ಆಯೋಜಿಸಿದ್ದ ವಿಶ್ವ ತಂಬಾಕು ದಿನಾಚರಣೆ ಹಾಗೂ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ತಂಬಾಕು, ಮದ್ಯಪಾನ ಸೇವನೆ ಮಾಡಿದವರು ಲಿವರ್ ಕ್ಯಾನ್ಸರ್, ಸ್ತನ ಕ್ಯಾನ್ಸರ್, ಬಾಯಿ ಕ್ಯಾನ್ಸರ್ ಹಾಗೂ ಬಂಜೆತನಕ್ಕೆ ಒಳಗಾಗುತ್ತಾರೆ ಎಂದರು.

ಸಂಪನ್ಯೂಲ ವ್ಯಕ್ತಿ ಹೆಚ್.ಎಂ. ಸದಾನಂದ ಮಾತ ನಾಡಿ, ಭಾರತದ ಇಪ್ಪತ್ತೇಳುವರೆ ಕೋಟಿ ಯುವಜನತೆ ಮಾದಕ ಚಟಕ್ಕೆ ದಾಸರಾಗಿದ್ದು ಪ್ರತಿವರ್ಷ ಹದಿಮೂರು ಲಕ್ಷ ಯುವಜನತೆ ವ್ಯಸನಿಗಳಾಗಿ ಮರಣ ಹೊಂದುತ್ತಿ ದ್ದಾರೆ. ಭಾರತದ ಕಲ್ಕತ್ತಾ, ಬಾಂಬೆ, ಬೆಂಗಳೂರು ಮಾದಕ ನಗರ ಎಂದು ಖ್ಯಾತಿ ಪಡೆದಿದ್ದು ಬೆಂಗಳೂರಿ ನಲ್ಲೇ ವಾರ್ಷಿಕ 280 ಕೋಟಿ ರೂಪಾಯಿ ವ್ಯಾಪಾರ ಮಾದಕ ವಸ್ತುವಿನಿಂದ ನಡೆಯುತ್ತಿದೆ ಎಂದರು. 

ಕರ್ನಾಟಕದ ಹಂಪೆ, ಮೈಸೂರು, ಮಂಗಳೂರು, ಗೋಕರ್ಣ, ಉಡುಪಿ, ಧಾರವಾಡ ವಿದೇಶಿ ಪೆಡ್ಲರ್‍ಗಳಿಂದ ಮಾದಕ ವಸ್ತು ಹರಡುತ್ತಿದೆ ವಿಶ್ವದ 80 ಭಾಗ ದೇಶಗಳಿಗೆ ನೇಪಾಳ ದೇಶವೇ ಮಾದಕ ವಸ್ತುವನ್ನು ಹರಡುತ್ತಿದೆ ಎಂದರು.

14 ರಿಂದ 26 ವಯಸ್ಸಿನ ಯುವಕ-ಯುವತಿಯರು ಹೆಚ್ಚಾಗಿ ಈ ಚಟಕ್ಕೆ ಬಲಿಯಾಗಿರುವುದು ನಿಮ್ಹಾನ್ಸ್ ಸಮೀಕ್ಷೆಯಿಂದ ತಿಳಿದು ಬಂದಿದೆ. ಅವಧಿ ಮುಕ್ತಾಯವಾದ ಮಾತ್ರೆಗಳನ್ನು ನಶೆ ಬರಲು ಬಳಸಲಾಗುತ್ತಿದೆ. ದಕ್ಷಿಣ ಕನ್ನಡದ ಶೇ. 80 ಭಾಗ ಯಕ್ಷಗಾನ ಕಲಾವಿದರೂ ಮಾದಕ ಚಟಕ್ಕೆ ಬಲಿಯಾಗಿದ್ದು, ದೇವಾಲಯದ ಗರ್ಭಗುಡಿಯಿಂದಲೂ ಡ್ರಗ್ಸ್ ತನ್ನ ಕದಂಭ ಬಾಹುವನ್ನು ಚಾಚಿದೆ ಎಂದು ಸದಾನಂದ್ ದೂರಿದರು.

ಶಾಲಾ ಸಲಹಾ ಸಮಿತಿ ಅಧ್ಯಕ್ಷ ಮಾಗೋಡು ಓಂಕಾರಪ್ಪ ಅಧ್ಯಕ್ಷತೆ ವಹಿಸಿದ್ದರು. ಪ್ರಗತಿಪರ ರೈತ ಹಾಗೂ ಬರಹಗಾರ ಕುಂದೂರು ಮಂಜಪ್ಪ ಅವರು ರೈತ ಯೋಧ ಮತ್ತು ಗುರುಗಳ ಕಾಯಕ ನಿಷ್ಠೆಯನ್ನು ಸ್ಮರಿಸಿದರು. 

ವಿದ್ಯಾರ್ಥಿಗಳಾದ ಮಲ್ಲೇಶ್, ಕಾರ್ತಿಕ್ ಅಭಿಪ್ರಾಯ ಹಂಚಿಕೊಂಡರು. ಧರ್ಮಸ್ಥಳ ಯೋಜನೆಯ ಮಲೇಬೆನ್ನೂರು ಯೋಜನಾಧಿಕಾರಿ ವಸಂತ ದೇವಾಡಿಗ್, ವಲಯ ಮೇಲ್ವಿಚಾರಕ ರಂಗಸ್ವಾಮಿ, ಸೇವಾ ಪ್ರತಿನಿಧಿಗಳಾದ ಮಂಜುಳ, ಜ್ಯೋತಿ, ಗೀತಾ, ನಾಗರಾಜ್, ಆಶಾ ಕಾರ್ಯಕರ್ತೆ ಮಾಲಾಶ್ರೀ, ನೀಲಾಂಬಿಕೆ ಮತ್ತು ಶಾಲಾ ಮುಖ್ಯ ಶಿಕ್ಷಕ ಲೋಕೇಶ್ ಹಾಜರಿದ್ದರು.

error: Content is protected !!